ವಿಶೇಷ ಪ್ಯಾಕೇಜ್ ನೀಡಲು ಸಿಎಂಗೆ ಮನವಿ

ಬಜೆಟ್‌ನಲ್ಲಿ ದೇವದುರ್ಗ ತಾಲೂಕಿನ ಪ್ರಸ್ತಾವನೆ ಪರಿಗಣಿಸಲು ಕೋರಿ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಶಾಸಕಿ ಕರೆಮ್ಮ ಜಿ.ನಾಯಕ ಮನವಿ ಸಲ್ಲಿಸಿದರು.
ಬಜೆಟ್‌ನಲ್ಲಿ ದೇವದುರ್ಗ ತಾಲೂಕಿನ ಪ್ರಸ್ತಾವನೆ ಪರಿಗಣಿಸಲು ಕೋರಿ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಶಾಸಕಿ ಕರೆಮ್ಮ ಜಿ.ನಾಯಕ ಮನವಿ ಸಲ್ಲಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಅನುದಾನ ಕೋರಿದ ಶಾಸಕಿ ಕರೆಮ್ಮ ನಾಯಕ
  • ಸಿದ್ದರಾಮಯ್ಯ ದೇವದುರ್ಗ ಶಾಸಕಿ ಕರೆಮ್ಮ ನಾಯಕ ಮನವಿ
ದೇವದುರ್ಗ: ರಾಜ್ಯ ಬಜೆಟ್ ಸಿದ್ಧತೆಯಲ್ಲಿ ತೊಡಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಶಾಸಕಿ ಕರೆಮ್ಮ ಜಿ. ನಾಯಕ ಬೆಂಗಳೂರಿನಲ್ಲಿ ಗುರುವಾರ ಭೇಟಿಯಾಗಿ ಕ್ಷೇತ್ರದ ಅಭಿವೃದ್ಧಿ ಕುರಿತು ನಾಲ್ಕು ಪ್ರಸ್ತಾವನೆಗಳನ್ನು ಸಲ್ಲಿಸಿ ಅನುದಾನಕ್ಕೆ ಮನವಿ ಮಾಡಿದ್ದಾರೆ.
ಪಟ್ಟಣದ ತಾಲೂಕು ಆಡಳಿತ ಸೌಧ ಕಟ್ಟಡ ಶಿಥಿಲಗೊಂಡಿದ್ದು, ಹಲವು ಇಲಾಖೆಗಳ ಕಚೇರಿಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಸಾರ್ವಜನಿಕರ ಅನುಕೂಲಕ್ಕಾಗಿ ಎಲ್ಲ ಇಲಾಖೆ ಕಚೇರಿಗಳನ್ನು ಒಂದೇ ಸೂರಿನಡಿ ತರುವ ದೃಷ್ಟಿಯಿಂದ ಪ್ರಜಾಸೌಧ ನಿರ್ಮಾಣಕ್ಕೆ ಬಜೆಟ್‌ನಲ್ಲಿ 10 ಕೋಟಿ ರೂ. ಅನುದಾನ ನೀಡಬೇಕು ಎಂದು ಕೋರಿದ್ದಾರೆ.
ಪಟ್ಟಣ ದಿನೇದಿನೆ ಬೆಳೆಯುತ್ತಿದ್ದು, ಒಳಚಂರಡಿ, ಔಟ್‌ಫಾಲ್ ಕೊಳವೆ ಮಾರ್ಗ, ಮಲಿನ ನೀರು ಶುದ್ಧೀಕರಣ ಘಟಕ ನಿರ್ಮಾಣ ಸೇರಿ ಸ್ವಚ್ಛತೆ ಕಾರ್ಯಗಳಿಗೆ 150 ಕೋಟಿ ರೂ. ವಿಶೇಷ ಪ್ಯಾಕೇಜ್ ನೀಡಬೇಕು. ಮೊದಲ ಹಂತದಲ್ಲಿ 14 ಕೆರೆಗಳಿಗೆ ಕುಡಿವ ನೀರು ಒದಗಿಸಲು ಅನುದಾನ ನೀಡಿದ್ದು, ಎರಡನೇ ಹಂತದಲ್ಲಿ ಬಾಕಿ 14 ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಗೆ ಚಾಲನೆ ಹಾಗೂ ಕೃಷ್ಣಾನದಿಯಿಂದ ಹರಿದುಹೋಗುವ ಹೆಚ್ಚುವರಿ ನೀರನ್ನು 28 ಕೆರೆಗಳಿಗೆ ತುಂಬಿಸಲು ಬಜೆಟ್‌ನಲ್ಲಿ ವಿಶೇಷ ಅನುದಾನ ಮೀಸಲಿಡಬೇಕು.
ನಾರಾಯಣಪುರ ಬಲದಂಡೆ ನಾಲೆಯಿಂದ ನೀರಾವರಿ ವಂಚಿತ ಹಳ್ಳಿಗಳಾದ ವಂದಲಿ, ಪಲಕನಮರಡಿ, ಮದರಕಲ್, ಭೂಮನಗುಂಡ, ಮಲ್ಲಾಪುರ ಸೇರಿ ವಿವಿಧ ಗ್ರಾಮಗಳಿಗೆ ನೀರಿನ ಸೌಲಭ್ಯ ಕಲ್ಪಿಸಲು ಶ್ರೀ ಮುಂಡರಗಿ ಶಿವಣ್ಣ ತಾತ ಏತ ನೀರಾವರಿ ಯೋಜನೆಗೆ ಅನುದಾನ ನೀಡುವಂತೆ ಮನವಿಯಲ್ಲಿ ಕೋರಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net