ಸ್ವಚ್ಛ ಸರ್ವೇಕ್ಷಣಾಕ್ಕೆ ನಾಗರಿಕ ಪ್ರತಿಕ್ರಿಯೆ ನೀಡಲು ಮನವಿ

ಜುಬಿನ್ ಮಹೋಪಾತ್ರ
ಜುಬಿನ್ ಮಹೋಪಾತ್ರ
Published on
ರಾಯಚೂರು
ದೇಶದಲ್ಲಿ ಸ್ವಚ್ಛ ಸರ್ವೇಕ್ಷಣಾ ಅಭಿಯಾನ ಆರಂಭವಾಗಿದ್ದು,ಸಾರ್ವಜನಿಕರು ತಮ್ಮ ನಾಗರಿಕ ಪ್ರತಿಕೆಯನ್ನು ಆನ್‌ಲೈನ್‌ಮೂಲಕ ನೀಡಿ, ರಾಯಚೂರು ನಗರವನ್ನು ಸ್ವಚ್ಛ ಹಾಗೂ ಸುಂಧರವಾಗಿಸಲು ಕೈಜೋಡಿಸಬೇಕು ಎಂದು ಮಹಾನಗರ ಪಾಲಿಕೆ ಆಯುಕ್ತ ಜುಬಿನ್ ಮಹೋಪಾತ್ರ ತಿಳಿಸಿದ್ದಾರೆ.

ನಗರದಲ್ಲಿ ರಾಜ ಕಾಲುವೆ, ಚರಂಡಿ ಸ್ವಚ್ಛತೆ ಈಗಾಗಲೇ ನಿರಂತರವಾಗಿ ನಡೆಯುತ್ತಿದ್ದು, ಸ್ವಚ್ಛ ಸರ್ವೇಕ್ಷಣಾ ಅಭಿಯಾನದ ಮೊದಲ ಹಂತವಾಗಿ ನಾಗರಿಕ ಪ್ರತಿಕ್ರಿಯೆಯನ್ನು ಪಡೆಯಲಾಗುತ್ತಿದ್ದು,ಆನ್ ಲೈನ್‌ಸರ್ವೇಯಲ್ಲಿ ಪಾಲ್ಗೊಂಡು ಪ್ರತಿಕ್ರಿಯೆಯನ್ನು ನೀಡಬಹುದಾಗಿದೆ.
ನಾಗರಿಕರ ಪ್ರತಿಕ್ರಿಯೆಗಳನ್ನು ಕ್ರೂಡಿ ಕರಿಸಿ, ಪಾಲಿಕೆಗೆ ಅಂಕಗಳನ್ನು ನೀಡಲಾಗುತ್ತದೆ.ಆದ್ದರಿಂದ ಪ್ರತಿಕ್ರಿಯೆಯನ್ನು ಜನರು ನೀಡುವ ಮೂಲಕ ಸ್ವಚ್ಛ ಹಾವೂ ಸುಂಧರ ನಗರವನ್ನಾಘಿಸಲು ಮತ್ತು ಪಾಲಿಕೆ ಕಾರ್ಯ ಚಟುವಟಿಕೆಗಳಲ್ಲಿ ಇನ್ನೂ ಹೆಚ್ಚಿನ ಬದಲಾವಣೆಗಳನ್ನು ತರಲು ಕೈಜೋಡಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net