ಎಪಿಎಂಸಿ ಆಡಳಿತ ಮಂಡಳಿ ವಜಾಮಾಡಿ

ದೇವದುರ್ಗದಲ್ಲಿ ಗ್ರೇಡ್-2 ತಹಸೀಲ್ದಾರ್ ಗೋವಿಂದ ನಾಯಕಗೆ ಪ್ರಾಂತ ರೈತ ಸಂಘ ಮನವಿ ಸಲ್ಲಿಸಿತು. ತಾಲೂಕು ಅಧ್ಯಕ್ಷ ಹನುಮಂತ ಗುರಿಕಾರ, ಕಾರ್ಯದರ್ಶಿ ಮೌನೇಶ ಜಾಲಹಳ್ಳಿ, ಹನುಮಂತ ಮಡಿವಾಳ, ಬಿ.ರಂಗನಾಥ, ಮುಕ್ತುಂಪಾಷಾ ಇತರರಿದ್ದರು.
ದೇವದುರ್ಗದಲ್ಲಿ ಗ್ರೇಡ್-2 ತಹಸೀಲ್ದಾರ್ ಗೋವಿಂದ ನಾಯಕಗೆ ಪ್ರಾಂತ ರೈತ ಸಂಘ ಮನವಿ ಸಲ್ಲಿಸಿತು. ತಾಲೂಕು ಅಧ್ಯಕ್ಷ ಹನುಮಂತ ಗುರಿಕಾರ, ಕಾರ್ಯದರ್ಶಿ ಮೌನೇಶ ಜಾಲಹಳ್ಳಿ, ಹನುಮಂತ ಮಡಿವಾಳ, ಬಿ.ರಂಗನಾಥ, ಮುಕ್ತುಂಪಾಷಾ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪ್ರಾಂತ
  • ರೈತಸಂಘ
  • ಪ್ರತಿಭಟನೆ
ದೇವದುರ್ಗ: ಎಪಿಎಂಸಿ ಅಧ್ಯಕ್ಷ ಆದನಗೌಡ ಬುಂಕಲದೊಡ್ಡಿ, ಕಾರ್ಯದರ್ಶಿ ನೀಲಪ್ಪ ಶೆಟ್ಟಿ ಅಧಿಕಾರ ದುರ್ಬಳಕೆ ಹಾಗೂ ಹಣವಸೂಲಿ ಮಾಡಿದ ಕುರಿತು ಕೇಸ್ ದಾಖಲಾಗಿದ್ದು, ಆಡಳಿತ ಮಂಡಳಿಯನ್ನು ವಜಾ ಮಾಡಬೇಕು ಎಂದು ಪಟ್ಟಣದ ತಾಲೂಕು ಆಡಳಿತಸೌಧ ಮುಂದೆ ಪ್ರಾಂತ ರೈತ ಸಂಘ ಸೋಮವಾರ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಗೋವಿಂದ ನಾಯಕಗೆ ಮನವಿ ಸಲ್ಲಿಸಿತು. 
ತಾಲೂಕಿನ ತಿಂಥಣಿ ಬ್ರಿಡ್ಜ್‌ನಲ್ಲಿ ಎಪಿಎಂಸಿ ಆಡಳಿತ ಮಂಡಳಿ ಸೂಚನೆ ಮೇರೆಗೆ ಲಾರಿಗಳಿಂದ ವಂತಿಗೆ ವಸೂಲಿ ಮಾಡಲಾಗಿದೆ. ಈ ಬಗ್ಗೆ ರೈತರು ದೂರು ನೀಡಿದ್ದರಿಂದ ಜಾಲಹಳ್ಳಿ ಠಾಣೆಯಲ್ಲಿ ಅಧ್ಯಕ್ಷ ಆದನಗೌಡ ಬುಂಕಲದೊಡ್ಡಿ, ಕಾರ್ಯದರ್ಶಿ ನೀಲಪ್ಪ ಶೆಟ್ಟಿ ಸೇರಿ ನಾಲ್ವರ ವಿರುದ್ಧ ಕೇಸ್ ದಾಖಲಾಗಿದೆ.
ರೈತರ ಉತ್ಪನ್ನಗಳಿಂದ ನಿಯಮ ಬಾಹಿರವಾಗಿ ಹಣವಸೂಲಿ ಮಾಡಿದ್ದು ತೀವ್ರ ಖಂಡನೀಯ. ರೈತರು ಬೆಳೆಯುತ್ತಿರುವ ಬೆಳೆಗೆ ಸರಿಯಾದ ಬೆಲೆ ದೊರೆಯದೆ ಸಾಲದ ಬಾಧೆಯಿಂದ ಕಂಗಾಲಾದ ಸಂದರ್ಭದಲ್ಲಿ, ರೈತರ ಹಕ್ಕುಗಳನ್ನು ರಕ್ಷಿಸಬೇಕಾದ ಎಪಿಎಂಸಿ ಆಡಳಿತ ಮಂಡಳಿ ಅವ್ಯವಹಾರಕ್ಕೆ ಇಳಿದಿರುವುದು ನಾಚಿಕೆಗೇಡಿನ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ವಂತಿಗೆ ವಸೂಲಿ ಕೇಸ್‌ಅನ್ನು ಗಂಭೀರವಾಗಿ ಪರಿಗಣಿಸಿ ವಿಶೇಷ ತನಿಖೆ ನಡೆಸಬೇಕು. ಪಾರದರ್ಶಕ ತನಿಖೆಗಾಗಿ ಎಪಿಎಂಸಿ ಆಡಳಿತ ಮಂಡಳಿ ವಜಾ ಮಾಡಬೇಕು. ಪ್ರಕರಣದಲ್ಲಿ ಭಾಗಿಯಾದವರನ್ನು ಬಂಧಿಸಿ ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು. ಪ್ರಮುಖರಾದ ಹನುಮಂತ ಮಡಿವಾಳ, ಬಿ.ರಂಗನಾಥ, ಮುಕ್ತುಂಪಾಷಾ, ಎಸ್.ಹನುಮಂತ, ಯುಸೂಫ್‌ಸಾಬ್, ಬಸವರಾಜ ವಂದ್ಲಿ, ನರಸಪ್ಪ, ಹನುಮಯ್ಯ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net