ಆಂಜನೇಯ ಮೂರ್ತಿ ಮೆರವಣಿಗೆ ಅದ್ದೂರಿ

ಲಿಂಗಸುಗೂರಿನಲ್ಲಿ ಪಂಚಮುಖಿ ಆಂಜನೇಯಸ್ವಾಮಿ ಮೂರ್ತಿ ಮೆರವಣಿಗೆ ನಡೆಯಿತು.
ಲಿಂಗಸುಗೂರಿನಲ್ಲಿ ಪಂಚಮುಖಿ ಆಂಜನೇಯಸ್ವಾಮಿ ಮೂರ್ತಿ ಮೆರವಣಿಗೆ ನಡೆಯಿತು.
Published on

ಲಿಂಗಸುಗೂರು: ಓಂಕಾರ ಕಟ್ಟಡ ಕಾರ್ಮಿಕರ ಸಂಘದ ಆವರಣದಲ್ಲಿ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಪಂಚಮುಖಿ ಆಂಜನೇಯ ಸ್ವಾಮಿ ಮೂರ್ತಿ ಮೆರವಣಿಗೆ ಶನಿವಾರ ವಿಜೃಂಭಣೆಯಿಂದ ನಡೆಯಿತು. ಶಾಸಕ ಮಾನಪ್ಪ ವಜ್ಜಲ ಮೆರವಣಿಗೆಗೆ ಚಾಲನೆ ನೀಡಿದರು.

ದೊಡ್ಡ ಹನಮಂತ ದೇವಸ್ಥಾನದಿಂದ ಡೊಳ್ಳು, ಮಹಿಳೆಯರ ಕುಂಭ, ಕಳಸ, ಸಕಲ ವಾದ್ಯಗಳೊಂದಿಗೆ ಗಡಿಯಾರ ವೃತ್ತ, ಬಸ್ ನಿಲ್ದಾಣ ಸರ್ಕಲ್ ಮೂಲಕ ಮೆರವಣಿಗೆ ಸಾಗಿತು.

ಬಿಜೆಪಿ ಜಿಲ್ಲಾಧ್ಯಕ್ಷ ವೀರನಗೌಡ ಲೆಕ್ಕಿಹಾಳ, ಪ್ರಮುಖರಾದ ಗಿರಿಮಲ್ಲನಗೌಡ, ಭೀಮಣ್ಣ ಹಿರೇಮನಿ, ಕೆ.ನಾಗಭೂಷಣ, ದೇವರೆಡ್ಡೆಪ್ಪ ಭೋವಿ, ಮಾನಪ್ಪ ಬಸಾಪೂರ, ರುದ್ರಪ್ಪ ಬ್ಯಾಗಿ, ಹನುಮಂತ ಕನ್ನಾಳ, ಯಲ್ಲಪ್ಪ, ಶರಣಪ್ಪ ಕರಡಕಲ್ಲ, ಸುರೇಶ ಹಾಲಾಪೂರ, ತಿಪ್ಪಣ್ಣ ಮ್ಯಾಗಳಮನಿ, ಹುಲಗಪ್ಪ ಬ್ಯಾಗಿ, ಹುಚ್ಚಪ್ಪ ಕಾಳಾಪೂರ, ರಮೇಶ ಸಿಂಧನೂರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net