ಪ್ರಜಾಪ್ರಭುತ್ವ ದುರ್ಬಲಗೊಳಿಸುವ ಹುನ್ನಾರ

ಮಸ್ಕಿಯಲ್ಲಿ ದ್ವೇಷ ಭಾಷಣ ತಡೆ ವಿಧೇಯಕ ಜಾರಿಗೆ ವಿರೋಧಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್, ಬಿಜೆಪಿ ಮಂಡಲ ಅಧ್ಯಕ್ಷ ಶರಣಬಸವ ಸೊಪ್ಪಿಮಠ, ಪುರಸಭೆ ಅಧ್ಯಕ್ಷ ಸುರೇಶ ಹರಸೂರ, ಪ್ರಮುಖರಾದ ಮಲ್ಲಪ್ಪ ಅಂಕುಶದೊಡ್ಡಿ, ಬಸವರಾಜ ಡೋಣಮರಡಿ, ಸೂಗಣ್ಣ ಬಾಳೆಕಾಯಿ, ನಾಗರಾಜ ಯಂಬಲದ, ಮೌನೇಶ ನಾಯಕ, ಪಂಪಣ್ಣ ಹೂವಿನಭಾವಿ, ಸತ್ಯನಾರಾಯಣ ಇಲ್ಲೂರು ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ದ್ವೇಷ ಭಾಷಣ
  • ಸರ್ಕಾರ
  • ಪ್ರತಿಭಟನೆ

ಪ್ರಜಾಪ್ರಭುತ್ವ ದುರ್ಬಲಗೊಳಿಸುವ ಹುನ್ನಾರ

ಮಸ್ಕಿ: ರಾಜ್ಯ ಸರ್ಕಾರ ಜಾರಿಗೊಳಿಸುತ್ತಿರುವ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧ ತಡೆ ವಿಧೇಯಕವನ್ನು ಖಂಡಿಸಿ ಪಟ್ಟಣದ ಹಳೇ ಬಸ್‌ನಿಲ್ದಾಣ ಬಳಿಯ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಮುಂದೆ ಗುರುವಾರ ಬಿಜೆಪಿ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.

ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಮಾತನಾಡಿ, ಸರ್ಕಾರ ಸಂವಿಧಾನದ 19(1) ವಿಧಿ ಅಡಿ ನಾಗರಿಕರಿಗೆ ನೀಡಿರುವ ವಾಕ್ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಕಿತ್ತುಕೊಳ್ಳುವ ಪ್ರಯತ್ನ ಮಾಡುತ್ತಿದೆ.
ಸರ್ಕಾರದ ವಿರುದ್ಧ ಮಾತನಾಡುವವರ ಬಾಯಿ ಮುಚ್ಚಿಸುವ ತಂತ್ರವಾಗಿದೆ. ದ್ವೇಷ ಭಾಷಣ ತಡೆ ವಿಧೇಯಕದಲ್ಲಿ ನೀಡಿರುವ ವ್ಯಾಖ್ಯಾನ ಅಸ್ಪಷ್ಟವಾಗಿದ್ದು, ಸರ್ಕಾರದ ವಿರುದ್ಧದ ಟೀಕೆ, ಸಾಮಾಜಿಕ ಚರ್ಚೆ, ವ್ಯಂಗ್ಯ ಹಾಗೂ ಸತ್ಯ ವಾಚನವನ್ನು ದ್ವೇಷವೆಂದು ಪರಿಗಣಿಸುವ ಸಾಧ್ಯತೆ ಇದೆ.
ಪತ್ರಕರ್ತರ ತನಿಖಾ ವರದಿಗಳೂ ತೂಗುಗತ್ತಿ ಎದುರಿಸಬೇಕಾಗುತ್ತದೆ. ಸಾಮಾಜಿಕ ಸಾಮರಸ್ಯದ ಹೆಸರಿನಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ನಿರ್ಬಂಧಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದುರ್ಬಲ ಗೊಳಿಸಲಾಗುತ್ತಿದೆ. ಆದ್ದರಿಂದ ಈ ವಿಧೇಯಕ ಜಾರಿಯಾಗಬಾರದು ಎಂದು ಒತ್ತಾಯಿಸಿದರು.
ಇದಕ್ಕೂ ಮುನ್ನ ಬಿಜೆಪಿ ಕಾರ್ಯಕರ್ತರು ಪಟ್ಟಣದ ಬಿಜೆಪಿ ಕಚೇರಿಯಿಂದ ಹಳೇ ಬಸ್‌ನಿಲ್ದಾಣದವರೆಗೆ ಬೈಕ್ ರ‌್ಯಾಲಿ ನಡೆಸಿದರು. ಬಿಜೆಪಿ ಮಂಡಲ ಅಧ್ಯಕ್ಷ ಶರಣಬಸವ ಸೊಪ್ಪಿಮಠ, ಪುರಸಭೆ ಅಧ್ಯಕ್ಷ ಸುರೇಶ ಹರಸೂರ, ಪ್ರಮುಖರಾದ ಡಾ.ಬಿ.ಎಚ್.ದಿವಟರ್, ಮಲ್ಲಪ್ಪ ಅಂಕುಶದೊಡ್ಡಿ, ಶರಣಬಸವ ವಕೀಲ ಊಮಲೂಟಿ, ಬಸವರಾಜ ಡೋಣಮರಡಿ, ಸೂಗಣ್ಣ ಬಾಳೆಕಾಯಿ, ಪ್ರಸನ್ನ ಪಾಟೀಲ್, ನಾಗರಾಜ ಯಂಬಲದ, ಮೌನೇಶ ನಾಯಕ, ಮೌನೇಶ ಮುರಾರಿ, ಪಂಪಣ್ಣ ಹೂವಿನಭಾವಿ, ಸತ್ಯನಾರಾಯಣ ಇಲ್ಲೂರು, ಬಸವರಾಜ ಬುಕ್ಕಣ್ಣ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net