ಶಿಲ್ಪಕಲೆಗೆ ಅಮರಶಿಲ್ಪಿ ಕೊಡುಗೆ ಅಪಾರ

ಮಾನ್ವಿ ತಹಸಿಲ್ ಕಚೇರಿಯಲ್ಲಿ ಆಯೋಜಿಸಿದ್ದ ಅಮರಶಿಲ್ಪಿ ಜಕಣಾಚಾರಿ ಜಯಂತಿ ಕಾರ್ಯಕ್ರಮದಲ್ಲಿ ವಿಶ್ವಕರ್ಮ ಸಮಾಜದ ಸಾಧಕರನ್ನು ಸನ್ಮಾನಿಸಲಾಯಿತು. ತಹಸೀಲ್ದಾರ್ ಭೀಮರಾಯ ರಾಮಸಮುದ್ರ, ಗ್ರೇಡ್-2 ತಹಸೀಲ್ದಾರ್ ಅಬ್ದುಲ್ ವಾಹಿದ್, ಸಮಾಜದ ತಾಲೂಕು ಮಾಜಿ ಅಧ್ಯಕ್ಷ ಷಣ್ಮುಖ ಆಚಾರಿ ಚೀಕಲಪರ್ವಿ, ಪ್ರಮುಖರಾದ ಮನೋಹರ ವಕೀಲರು, ಶ್ರೀಶೈಲ ಪತ್ತಾರ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ತಹಸೀಲ್ದಾರ್ ಭೀಮರಾಯ ರಾಮಸಮುದ್ರ ಅಭಿಮತ
  • ಮಾನ್ವಿ ಜಕಣಾಚಾರಿ ಜಯಂತಿ
ಮಾನ್ವಿ: ಶಿಲ್ಪಕಲೆಗೆ ಅಮರಶಿಲ್ಪಿ ಜಕಣಾಚಾರಿ ಕೊಡುಗೆ ಅಪಾರ. ಯುವ ಪ್ರತಿಭೆಗಳು ಇಂಥ ಕಲೆಯನ್ನು ಮುಂದುವರಿಸಿಕೊಂಡು ಹೋಗಬೇಕು ಎಂದು ತಹಸೀಲ್ದಾರ್ ಭೀಮರಾಯ ರಾಮಸಮುದ್ರ ಹೇಳಿದರು.
ಪಟ್ಟಣದ ತಹಸಿಲ್ ಕಚೇರಿಯಲ್ಲಿ ಗುರುವಾರ ತಾಲೂಕು ಆಡಳಿತ ಹಮ್ಮಿಕೊಂಡಿದ್ದ ಅಮರಶಿಲ್ಪಿ ಜಕಣಾಚಾರಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಕನ್ನಡ ನಾಡಿನ ಇತಿಹಾಸದಲ್ಲಿ ಅಮರಶಿಲ್ಪಿ ಜಕಣಾಚಾರಿ ಶಿಲ್ಪಕಲೆಗೆ ವಿಶೇಷತೆಯಿದ್ದು, ಬೇಲೂರು ಮತ್ತು ಹಳೇಬೀಡು ದೇವಾಲಯದಲ್ಲಿ ಶಿಲ್ಪಗಳನ್ನು ಕೆತ್ತನೆ ಮಾಡಿ ಹೆಸರಾಗಿದ್ದಾರೆ. ಅವರು ಇಡೀ ಜೀವನವನ್ನು ಶಿಲ್ಪ ಕಲೆಗೆ ಮೀಸಲಿಟ್ಟರು. ಅವರ ಮಗ ಡಕಣಾಚಾರಿ ಸಹ ಶಿಲ್ಪಿಯಾಗಿದ್ದರು. ಅಮರಶಿಲ್ಪಿ ಜಕಣಾಚಾರಿ ಕಲೆ ಎಂದೆಂದಿಗೂ ಅಮರವಾಗಿರುತ್ತದೆ ಎಂದು ತಿಳಿಸಿದರು.
ವಿಶ್ವಕರ್ಮ ಸಮಾಜದ ತಾಲೂಕು ಮಾಜಿ ಅಧ್ಯಕ್ಷ ಷಣ್ಮುಖ ಆಚಾರಿ ಚೀಕಲಪರ್ವಿ, ಪ್ರಮುಖರಾದ ಮನೋಹರ ವಕೀಲರು, ಮೋಹನ ಆಚಾರಿ, ಗವಿಯಪ್ಪ ಪತ್ತಾರ ಬಾಗಲವಾಡ, ವೀರೇಶ ಆಚಾರಿ, ಮೌನೇಶ ಹಾಲ್ವಿ, ಶಿವಪ್ಪ, ಬ್ರಹ್ಮಯ್ಯ, ಶ್ರೀಶೈಲ ಪತ್ತಾರ, ಮಹೇಶ ಬಡಿಗೇರ ನೀರಮಾನ್ವಿ, ಮಹೇಶ ಪತ್ತಾರ, ಜಿ.ಎಸ್.ಅಂಬಣ್ಣ, ಸತೀಶ, ಧನಂಜಯ, ಸೂಗಪ್ಪ ಪತ್ತಾರ, ತಿರುಮಲ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net