ರಸ್ತೆಬದಿ ವ್ಯಾಪಾರಕ್ಕೆ ಅವಕಾಶ ನೀಡಿ

ಲಿಂಗಸುಗೂರಿನಲ್ಲಿ ಎಸಿ ಕಚೇರಿಯ ಎಫ್‌ಡಿಎ ಅನುಪಮಾ ಸಿಂಗ್‌ಗೆ ರಾಜ್ಯ ರಸ್ತೆಬದಿ ವ್ಯಾಪಾರಿಗಳ ಮಹಾ ಮಂಡಳಿಯಿಂದ ಮನವಿ ಸಲ್ಲಿಸಲಾಯಿತು.
ಲಿಂಗಸುಗೂರಿನಲ್ಲಿ ಎಸಿ ಕಚೇರಿಯ ಎಫ್‌ಡಿಎ ಅನುಪಮಾ ಸಿಂಗ್‌ಗೆ ರಾಜ್ಯ ರಸ್ತೆಬದಿ ವ್ಯಾಪಾರಿಗಳ ಮಹಾ ಮಂಡಳಿಯಿಂದ ಮನವಿ ಸಲ್ಲಿಸಲಾಯಿತು.
Published on
ಲಿಂಗಸುಗೂರು: ಪಟ್ಟಣದ ಬೀದಿಬದಿ ವ್ಯಾಪಾರ ಮಾಡಲು ಅವಕಾಶ ನೀಡಬೇಕೆಂದು ಒತ್ತಾಯಿಸಿ ರಾಜ್ಯ ರಸ್ತೆಬದಿ ವ್ಯಾಪಾರಿಗಳ ಮಹಾಮಂಡಳಿಯಿಂದ ಎಸಿ ಕಚೇರಿಯ ಎಫ್‌ಡಿಎ ಅನುಪಮಾ ಸಿಂಗ್‌ಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು. 
ಪುರಸಭೆ ಆಡಳಿತಾಧಿಕಾರಿಗಳು, ಮುಖ್ಯಾಧಿಕಾರಿಗಳು ಬೀದಿ ಬದಿ ವ್ಯಾಪಾರಿಗಳಿಗೆ ಯಾವುದೇ ನೋಟಿಸ್ ನೀಡದೆ, ಪರ್ಯಾಯ ವ್ಯಾಪಾರಕ್ಕೆ ಸ್ಥಳ ಗುರುತಿಸದೆ ಸುಮಾರು 600 ರಸ್ತೆಬದಿ ವ್ಯಾಪಾರಿಗಳ ಅಂಗಡಿಗಳನ್ನು ತೆರವುಗೊಳಿಸಿದ್ದಾರೆ. ಕುಟುಂಬ ನಿರ್ವಹಣೆಗಾಗಿ ವ್ಯಾಪಾರಿಗಳು ವಿವಿಧ ಯೋಜನೆಗಳಡಿ ಸಾಲ ಪಡೆದಿದ್ದಾರೆ. ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿದ್ದಾರೆ.
ಅಂಗಡಿಗಳ ತೆರವು ಕಾರ್ಯಾಚರಣೆಯಿಂದ ಮಹಿಳೆಯರು, ಮಕ್ಕಳು, ವೃದ್ಧರು ಸೇರಿ ಕುಟುಂಬದವರು ಬೀದಿಗೆ ಬಿದ್ದಿದ್ದಾರೆ. ಪಟ್ಟಣದ ಸೌಂದರ್ಯಿಕರಣ ಹೆಸರಿನಲ್ಲಿ ಕಾರ್ಯಾಚರಣೆ ತಕ್ಷಣ ಸ್ಥಗಿತಗೊಳಿಸಿ ಮಾರಾಟ ಸಮಿತಿಯೊಂದಿಗೆ ಸಭೆ ನಡೆಸಿ ಅಭಿಪ್ರಾಯ ಪಡೆಯಬೇಕು. 
ಕೂಡಲೇ ಅಂಗಡಿಗಳನ್ನು ಯಥಾಸ್ಥಿತಿ ಮರುಸ್ಥಾಪಿಸಿ ವ್ಯಾಪಾರ ಮಾಡಲು ಅವಕಾಶ ಕಲ್ಪಿಸಬೇಕು. 7 ದಿನಗಳೊಳಗೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ನ್ಯಾಯಾಲಯದ ಮೊರೆ ಹೋಗಿ ಕಾನೂನು ಬದ್ಧ ಹೋರಾಟ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು. 
ಮಹಾಮಂಡಳಿ ತಾಲೂಕು ಅಧ್ಯಕ್ಷ ಜಗನ್ನಾಥ ಆರ್.ಜಾಧವ, ಪ್ರಧಾನ ಕಾರ್ಯದರ್ಶಿ ಹುಸೇನ ಗಾದಿ, ಗೌರವಾಧ್ಯಕ್ಷ ರಮೇಶ ನಾಯಕ, ಶರಣಬಸವ ಇಂದುವರ, ಅಂಬರೀಷ ಪವಾರ, ಅಮರೇಶ ಆರ್., ಟಿ.ರಾಮಣ್ಣ, ಶಿವರಾಜ, ಕುಲದೀಪ್ ಪಾಟೀಲ್, ಮೌನೇಶ ಜಾಧವ, ಅರ್ಜುನ ಜೋಗಿ, ಯಲ್ಲಪ್ಪ ಭಜಂತ್ರಿ, ಚಂದ್ರಶೇಖರ, ವಿಷ್ಣು ಇತರರಿದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net