ಫುಟ್‌ಪಾತ್‌ನಲ್ಲಿ ವ್ಯಾಪಾರಕ್ಕೆ ಅವಕಾಶ ನೀಡಿ

ಸಿಂಧನೂರಿನ ತೋಟಗಾರಿಕೆ ಇಲಾಖೆ ಕಚೇರಿ ಮುಂದೆ ಬೀದಿಬದಿ ವ್ಯಾಪಾರಗಳ ಹೋರಾಟ ಸಮಿತಿ ಸೋಮವಾರ  ಧರಣಿ ನಡೆಸಿತು. ಸಮಿತಿ ಸಂಚಾಲಕರಾದ ಡಿ.ಎಚ್.ಪೂಜಾರ, ರಮೇಶ ಪಾಟೀಲ್, ಕಾಸಿಂಸಾಬ್, ಶಾಮೀದ್‌ಸಾಬ್ ಇತರರಿದ್ದರು.
ಸಿಂಧನೂರಿನ ತೋಟಗಾರಿಕೆ ಇಲಾಖೆ ಕಚೇರಿ ಮುಂದೆ ಬೀದಿಬದಿ ವ್ಯಾಪಾರಗಳ ಹೋರಾಟ ಸಮಿತಿ ಸೋಮವಾರ ಧರಣಿ ನಡೆಸಿತು. ಸಮಿತಿ ಸಂಚಾಲಕರಾದ ಡಿ.ಎಚ್.ಪೂಜಾರ, ರಮೇಶ ಪಾಟೀಲ್, ಕಾಸಿಂಸಾಬ್, ಶಾಮೀದ್‌ಸಾಬ್ ಇತರರಿದ್ದರು.
Published on
ಸಿಂಧನೂರು: ಬೀದಿಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕೆಂದು ಒತ್ತಾಯಿಸಿ ಬೀದಿಬದಿ ವ್ಯಾಪಾರಗಳ ಹೋರಾಟ ಸಮಿತಿ ಸೋಮವಾರ ತೋಟಗಾರಿಕೆ ಇಲಾಖೆ ಕಚೇರಿ ಮುಂದೆ ಧರಣಿ ನಡೆಸಿತು.
ನಗರದ ಬೀದಿ ವ್ಯಾಪಾರಿಗಳ ಡಬ್ಬಾ ಅಂಗಡಿಗಳನು ತೆರವುಗೊಳಿಸಿ 14 ತಿಂಗಳು ಕಳೆದರೂ ತಾಲೂಕು ಆಡಳಿತ ಮತ್ತು ಜಿಲ್ಲಾಡಳಿತ ಪರ್ಯಾಯ ವ್ಯವಸ್ಥೆ ಕಲ್ಪಿಸಿಲ್ಲ. ಇದರಿಂದ ಸಾವಿರಾರು ಬೀದಿಬದಿ ವ್ಯಾಪಾರಿಗಳು ನಿರುದ್ಯೋಗಿಗಳಾಗಿದ್ದು, ಜೀವನ ನಡೆಸುವುದು ಕಷ್ಟವಾಗಿದೆ. ಕುಟುಂಬದವರೂ ಆರ್ಥಿಕ ತೊಂದರೆ ಅನುಭವಿಸುತ್ತಿದ್ದಾರೆ. ವ್ಯಾಪಾರ ಮತ್ತು ಜೀವನಕ್ಕೆ ಖಾಸಗಿ ಬ್ಯಾಂಕ್‌ಗಳಲ್ಲಿ ಸಾಲ ಮಾಡಿಕೊಂಡಿದ್ದಾರೆ. ಸಾಲಬಾಧೆ ತಾಳಿಕೊಳ್ಳದೆ ಮೂರ‌್ನಾಲ್ಕು ಜನ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೂಡಲೇ ನಗರದ ಎಲ್ಲ ವ್ಯಾಪಾರಿಗಳಿಗೆ ಫುಟ್‌ಪಾತ್ ಮೇಲೆ ವ್ಯಾಪಾರ ಮಾಡಲು ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಗಂಗಾವತಿ ರಸ್ತೆಯ ಸರ್ಕಾರಿ ಹಣ್ಣಿನ ತೋಟದ ಕಾಂಪೌಂಡ್ ಪಕ್ಕದ ಖಾಲಿ ಜಾಗಕ್ಕೆ ಬಾಡಿಗೆ ನಿಗದಿ ಮಾಡಿ ವ್ಯಾಪಾರ ಮಾಡಲು ಅನುಕೂಲ ಕಲ್ಪಿಸಬೇಕು. ಇಲ್ಲಿನ 4 ಎಕರೆ ಭೂಮಿಯನ್ನು ನಗರಸಭೆಯವರು ಲೀಸ್ ಪಡೆದು ಬೀದಿ ವ್ಯಾಪಾರಿಗಳಿಗೆ ಬಾಡಿಗೆ ನಿಗದಿ ಪಡಿಸಿ ವ್ಯಾಪಾರ ಮತ್ತು ಉಪ ಜೀವನಕ್ಕೆ ಅನುಕೂಲ ಕಲ್ಪಿಸಬೇಕು. ತಾಲೂಕು ಆಡಳಿತ ಮತ್ತು ಜಿಲ್ಲಾಡಳಿತ ಮಾತು ಕೊಟ್ಟಂತೆ ರಾಯಚೂರ-ಗಂಗಾವತಿ ಮತ್ತು ಕುಷ್ಟಗಿ ರಸ್ತೆಗಳು, ಬಸ್ ನಿಲ್ದಾಣದ ಮುಂದಿನ ಒಳ ರಸ್ತೆಯನ್ನು ಅತಿಕ್ರಮಿಸಿ ನಿರ್ಮಿಸಿರುವ ಕಟ್ಟಡಗಳನ್ನು ಕೂಡಲೇ ತೆರವುಗೊಳಿಸಬೇಕೆಂದು ಒತ್ತಾಯಿಸಿದರು.
ಸಮಿತಿ ಸಂಚಾಲಕರಾದ ಡಿ.ಎಚ್.ಪೂಜಾರ, ರಮೇಶ ಪಾಟೀಲ್, ಕಾಸಿಂಸಾಬ್, ಶಾಮೀದ್‌ಸಾಬ್, ಚಿಟ್ಟಿಬಾಬು, ಚಂದ್ರಶೇಖರ ಗೊರೇಬಾಳ, ಬಿ.ಎನ್.ಯರದಿಹಾಳ, ಜಾಬರ್‌ಪಾಷಾ, ಖಾದರ್‌ಬಾಷಾ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net