ಆಯುಷ್ ವೈದ್ಯರಿಂದ ಅಲೋಪಥಿ ಚಿಕಿತ್ಸೆ

ಲಿಂಗಸುಗೂರಿನಲ್ಲಿ ಟಿಎಚ್‌ಒ ರವಿಕಿರಣಗೆ ಜಯಕರ್ನಾಟಕ ರಕ್ಷಣಾ ಸೇನೆ ಕಾರ್ಯಕರ್ತರು ಮನವಿ ಸಲ್ಲಿಸಿದರು. ತಾಲೂಕು ಅಧ್ಯಕ್ಷ ಹನುಮಂತ ನಾಯಕ, ಪ್ರಕಾಶ ಕುರಿ, ನಿಂಗಪ್ಪ ರಾಮಲೂಟಿ, ಪ್ರವೀಣ ನಿಲೋಗಲ್, ಆದಪ್ಪ ಗುರುಗುಂಟಾ ಇತರರಿದ್ದರು.
ಲಿಂಗಸುಗೂರಿನಲ್ಲಿ ಟಿಎಚ್‌ಒ ರವಿಕಿರಣಗೆ ಜಯಕರ್ನಾಟಕ ರಕ್ಷಣಾ ಸೇನೆ ಕಾರ್ಯಕರ್ತರು ಮನವಿ ಸಲ್ಲಿಸಿದರು. ತಾಲೂಕು ಅಧ್ಯಕ್ಷ ಹನುಮಂತ ನಾಯಕ, ಪ್ರಕಾಶ ಕುರಿ, ನಿಂಗಪ್ಪ ರಾಮಲೂಟಿ, ಪ್ರವೀಣ ನಿಲೋಗಲ್, ಆದಪ್ಪ ಗುರುಗುಂಟಾ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಗಾಳಿಗೆ
  • ತೂರಿ
  • ಅಮಾಯಕ
ಲಿಂಗಸುಗೂರು: ಪಟ್ಟಣ ಸೇರಿದಂತೆ ಹಟ್ಟಿ, ಮುದಗಲ್‌ನಲ್ಲಿ ಆಯುಷ್ ವೈದ್ಯರು ಅಲೋಪಥಿ ಔಷಧ, ಚಿಕಿತ್ಸೆ ನೀಡುವುದನ್ನು ತಡೆಯಬೇಕು ಎಂದು ಜಯ ಕರ್ನಾಟಕ ರಕ್ಷಣಾ ಸೇನೆ ಕಾರ್ಯಕರ್ತರು ಮಂಗಳವಾರ ಟಿಎಚ್‌ಒ ರವಿಕಿರಣಗೆ ಮನವಿ ಸಲ್ಲಿಸಿದರು.
ಬಿಎಎಂಎಸ್, ಬಿಎಚ್‌ಎಂಎಸ್ ವೈದ್ಯರು ಕೆಪಿಎಂಇ ಕಾಯ್ದೆಯನ್ನು ಗಾಳಿಗೆ ತೂರಿ ಅಮಾಯಕ ರೋಗಿಗಳಿಗೆ ಅಲೋಪಥಿ ಔಷಧ ಕೊಡುತ್ತಿದ್ದಾರೆ. ಕಾನೂನುಬಾಹಿರವಾಗಿ ಕ್ಲಿನಿಕ್‌ಗಳನ್ನು ತೆರೆದು ಆಸ್ಪತ್ರೆಯಲ್ಲಿ ಬೆಡ್‌ಗಳನ್ನು ಹಾಕಿ ಚಿಕಿತ್ಸೆ ನೀಡುತ್ತಿದ್ದಾರೆ. ರೋಗಿಗಳ ಜೀವದ ಜತೆ ಚೆಲ್ಲಾಟವಾಡುತ್ತಿದ್ದಾರೆ.
ಇಂತಹವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ಪ್ರಮುಖರಾದ ಮಲ್ಲೇಶ ಆನೆಹೊಸೂರು, ಮೋಹಿನ್, ಶಿವರೆಡ್ಡಿ ಗುಂತಗೋಳ, ನಿಂಗರಾಜ ಛಲವಾದಿ, ಅಮರೇಗೌಡ ಮಿಂಚೇರಿ, ಮಂಜುನಾಥ ಕೋಠಾ, ಆದಪ್ಪ ಭೂಪೂರು, ಶಿವರಾಜ ನಾಯಕ ರಾಯಪ್ಪ, ಶರಣಪ್ಪ ಗುಡದನಾಳ ಇತರರಿದ್ದರು.
ಫೋಟೋ : 06-ಎಲ್‌ಎನ್‌ಜಿ-02
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net