ವಸತಿರಹಿತರಿಗೆ ಜಾಗ ಹಂಚಿಕೆ ಮಾಡಿ

ಮೆದಕಿನಾಳ ಗ್ರಾಮದಲ್ಲಿ ನಿವೇಶನ ರಹಿತರಿಗೆ ಗ್ರಾಮಠಾಣ ಜಾಗ ಹಂಚಿಕೆ ಮಾಡುವಂತೆ ಆಗ್ರಹಿಸಿ ತಹಸೀಲ್ದಾರ್ ಮಂಜುನಾಥ ಬೋಗಾವತಿಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ಜಿಲ್ಲಾ ಸಮಿತಿಯಿಂದ ಮನವಿ ಸಲ್ಲಿಸಲಾಯಿತು. ಸಂಚಾಲಕ ಹನುಮಂತಪ್ಪ ವೆಂಕಟಾಪುರ, ತಾಲೂಕು ಸಂಚಾಲಕ ಮೌನೇಶ ಸುಲ್ತಾನಾಪುರ,  ಪ್ರಮುಖರಾದ ಮಲ್ಲಯ್ಯ ಬಳ್ಳಾ, ಶರಣಪ್ಪ ಕಟ್ಟಿಮನಿ, ಗೋಪಾಲ ಪೂಜಾರಿ, ದಾನಪ್ಪ ನಿಲೊಗಲ್, ಸಂಪತ್‌ರಾಯ್ ನಂಜಲದಿನ್ನಿ, ನಾಗರಾಜ ಕೂಣಿಕೆಲ್ಲೂರು, ಹನುಮಂತ ಮೆದಕಿನಾಳ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ದಲಿತ ಸಂಘರ್ಷ ಸಮಿತಿ ಒತ್ತಾಯ
  • ಮಸ್ಕಿ ಮೆದಕಿನಾಳ ತಹಸೀಲ್ದಾರ್ ಗೆ ಮನವಿ
ಮಸ್ಕಿ: ಗ್ರಾಮಠಾಣ ಜಾಗವನ್ನು ನಿವೇಶನ ರಹಿತರಿಗೆ ಹಂಚಿಕೆ ಮಾಡುವಂತೆ ಒತ್ತಾಯಿಸಿ ತಾಲೂಕಿನ ಮೆದಕಿನಾಳ ಗ್ರಾಮದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ಜಿಲ್ಲಾ ಸಮಿತಿ ಪದಾಧಿಕಾರಿಗಳು ತಹಸೀಲ್ದಾರ್ ಮಂಜುನಾಥ ಬೋಗಾವತಿಗೆ ಮಂಗಳವಾರ ಮನವಿ ಸಲ್ಲಿಸಿದರು.
ಮೆದಕಿನಾಳದ ಸ.ನಂ. 10 ಮತ್ತು 11ರಲ್ಲಿ ಖಾಸಗಿ ವ್ಯಕ್ತಿಯೊಬ್ಬರು ಭೂ ಪರಿವರ್ತನೆ ಮಾಡಿ ನಿವೇಶನ ಮಾಡುತ್ತಿದ್ದಾರೆ. ಅದಕ್ಕೆ ಹೊಂದಿಕೊಂಡಂತೆ ಗ್ರಾಮಠಾಣ ಜಾಗವಿದ್ದು, ಖಾಸಗಿ ವ್ಯಕ್ತಿ ಅತಿಕ್ರಮಣ ಮಾಡುತ್ತಿದ್ದಾರೆ. ನಿವೇಶನ ರಹಿತರಿಗೆ ತಾಲೂಕು ಆಡಳಿತ ಮತ್ತು ಗ್ರಾಪಂನಿಂದ ನಿವೇಶನ ರಹಿತರಿಗೆ ಗ್ರಾಮಠಾಣ ಜಾಗ ಹಂಚಿಕೆ ಮಾಡಲು ಕೋರಿದರು.
ಸಮಿತಿ ಜಿಲ್ಲಾ ಗೌರವ ಅಧ್ಯಕ್ಷ ಮಲ್ಲಯ್ಯ ಬಳ್ಳಾ, ಜಿಲ್ಲಾ ಸಮಿತಿ ಸಂಚಾಲಕ ಹನುಮಂತಪ್ಪ ವೆಂಕಟಾಪುರ, ತಾಲೂಕು ಸಂಚಾಲಕ ಮೌನೇಶ ಸುಲ್ತಾನಾಪುರ, ಶರಣಪ್ಪ ಕಟ್ಟಿಮನಿ, ಗೋಪಾಲ ಪೂಜಾರಿ, ದಾನಪ್ಪ ನಿಲೊಗಲ್, ಸಂಪತ್‌ರಾಯ್ ನಂಜಲದಿನ್ನಿ, ನಾಗರಾಜ ಕೂಣಿ ಕೆಲ್ಲೂರು, ಹನಮಂತ ಮೆದಕಿನಾಳ ಇತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net