ಶ್ರೀ ಆದಿಕವಿ ಮಹರ್ಷಿ ವಿಶ್ವವಿದ್ಯಾಲಯದಲ್ಲಿ ವಿವಿಯ ಕುಲಪತಿ ಗೈರಿನಲ್ಲಿದ್ದರೂ ಸಿಂಡಿಕೇಟ್ ಸಭೆಯನ್ನು ನಡೆಸಿ 63 ಕೋಟಿ ರೂ.ಗಳ ಆಯವ್ಯಯ ಮಂಡಿಸಿರುವುದು ಕಾನೂನು ಬಾಹಿರವಾಗಿದೆಂದು ಕರ್ನಾಟಕ ನಾಯಕರ ಒಕ್ಕೂಟದ ಜಿಲ್ಲಾಧ್ಯಕ್ಷ ಡಾ.ರವಿಕುಮಾರ ನಾಯಕ ಆರೋಪಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೇ 21 ರಂದು ವಿಶ್ವವಿದ್ಯಾಲಯದ 2026-27ನೇ ಸಾಲಿನ ಅಂದಾಜು ಆಯವ್ಯಯದ ಬಗ್ಗೆ ಸಿಂಡಿಕೇಟ್ ಸಭೆ ನಡೆದಿದ್ದು, ವಿಶ್ವವಿದ್ಯಾಲಯದ ಕುಲಪತಿ ಶಿವಾನಂದ ಕೆಳಗಿನಮನಿ ಅವರ ಅನುಪಸ್ಥಿತಿಯಲ್ಲಿ ಸಭೆಯನ್ನು ನಡೆಸಿದ್ದು, ಅನುಮಾನಾಸ್ಪದವಾಗಿದೆ.
ಸಭೆಗೆ ಮೊದಲು ವಿಶ್ವವಿದ್ಯಾಲಯದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗ್ರಾಮೀಣ ಶಾಸಕರು ಭೂಮಿ ಪೂಜೆ ನೆರವೇರಿಸಿದ್ದು, ಆ ಕಾರ್ಯಕ್ರಮದಲ್ಲಿ ಕುಲಪತಿಗಳು ಹಾಜರಿದ್ದು, ನಂತರ ಅತಿಥಿ ಉಪನ್ಯಾಸಕರು ಮನವಿ ಸಲ್ಲಿಸಲು ಬಂದಾಗ ಖುದ್ದು ಕುಲಪತಿ ಶಿವಾನಂದ ಕೆಳಗಿನಮನಿ ಅವರು ಮನವಿಯನ್ನು ಸ್ವೀಕರಿಸಿದ್ದಾರೆ.
ಈ ಎರಡು ಕಾರ್ಯಕ್ರಮಗಳಿ ಹಾಜರಾಗಿದ್ದ ಕುಲಪತಿಗಳು ಅದೇ ದಿನವೇ ನಡೆದ ಸಿಂಡಿಕೇಟ್ ಸಭೆಗೆ ಏಕೆ ಗೈರಾಗಿದ್ದಾರೆ ಎಂದು ತಿಳಿಯುತ್ತಿಲ್ಲ ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ರಂಗನಾಥ, ಕೆ.ಶರಣುನಾಯಕ, ಜಾಮ್‌ಸನ್,ಶ್ರೀಕಾಂತ, ಬಸನಗೌಡ ಇದ್ದರು.