ಆ.13 ರಂದು ಅಹೋರಾತ್ರಿ ಧರಣಿ

ಅನಿಲ್ ಕುಮಾರ
ಅನಿಲ್ ಕುಮಾರ
Published on

ರಾಯಚೂರು

ಜಿಲ್ಲೆಯ ವಿವಿಧ ಸ್ಲಂ ವರ್ಗದ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡಲು ಒತ್ತಾಯಿಸಿ ಆ.13 ರಂದು ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಅಹೋರಾತ್ರಿ ಧರಣಿ ನಡೆಸಲಾಗುತ್ತದೆಂದು ದಲಿತ ಸಮರ ಸೇನೆ ಸಂಚಾಲಕ ಅನಿಲ್ ಕುಮಾರ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎಚ್‌ಐವಿ ಸೋಂಕಿತರು, ವಿಧವೆಯರು, ಅಂಗವಿಕಲರು, ಬೀದಿ ವ್ಯಾಪಾರಿಗಳು, ನಿರ್ಗತಿಕರಿಗೆ ಸರ್ಕಾರ ನಿವೇಶನ ನೀಡಲು ಸರ್ಕಾರ ಆದೇಶ ನೀಡಿದೆ. ಸರ್ಕಾರದಂತೆ ಆದೇಶದಂತೆ ಜಿಲ್ಲಾಧಿಕಾರಿಗಳು ಮೂರು ಎಕರೆ 35 ಗುಂಟೆ, ಸರ್ವೆ ಮಾಡಿ ಭೂಮಿ ಹದ್ದುಬಸ್ತ್ ಮಾಡಲಾಗಿದೆ.

ಸರ್ವೆ ನಂ.684 ರಲ್ಲಿ ನಾಲ್ಕು ಎಕರೆ ಐದು ಗುಂಟೆ ಭೂಮಿಯನ್ನು ಬೀದಿ ವ್ಯಾಪಾರಿಗಳಿಗೆ ಗುರುತಿಸಲಾಗಿದೆ. ಕೊಳಗೇರಿ ಅಭಿವೃದ್ಧಿ ಮಂಡಳಿಗೆ ಹಸ್ತಾಂತರಿಸಿಲ್ಲ. ಲಿಂಗಸೂಗೂರು ತಾಲೂಕಿನ ಸರ್ವೆ 410/1 ರಲ್ಲಿ ಐದು ಎಕರೆ ಭೂಮಿ ದಲಿತ, ಅಲ್ಪಸಂಖ್ಯಾತ ದಿನಗೂಲಿ ನೌಕರರಿಗೆ ಗುರುತಿಸಲಾಗಿದೆ. ಅಲ್ಲಿಯೂ ಹಂಚಿಕೆ ಮಾಡುತ್ತಿಲ್ಲ, ಜಿಲ್ಲಾಡಳಿತ ನಿರ್ಲಕ್ಷ್ಯದ ವಿರುದ್ದ ವಿಶೇಷ ವರ್ಗ ಜನರು ಅಹೋರಾತ್ರಿ ಧರಣಿ ನಡೆಸಲಿದ್ದು ಎಲ್ಲಾ ಸಂಘಟನೆಗಳು, ಪ್ರಗತಿಪರರು ಬೆಂಬಲಿಸುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ನರಸಿಂಹಲು, ರಂಗಮ್ಮ, ರಾಬಿಯಾ, ಮಾಬಮ್ಮ, ರೇಣುಕಮ್ಮ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net