ಮಹಿಳೆಯರ ಸಬಲೀಕರಣಕ್ಕೆ ಅಕ್ಕ ಕೆಫೆ ಸಹಕಾರಿ

ಸಿಂಧನೂರಿನಲ್ಲಿ ಅಕ್ಕ ಕೆಫೆೆ ಹಾಗೂ ಸಂಜೀವಿನಿ ಇ-ಮಾರ್ಟ್ ಮಳಿಗೆಯನ್ನು ಶಾಸಕ ಹಂಪನಗೌಡ ಬಾದರ್ಲಿ ಉದ್ಘಾಟಿಸಿದರು. ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಪಂಪನಗೌಡ ಬಾದರ್ಲಿ, ಸೋಮನಗೌಡ ಬಾದರ್ಲಿ, ಜಿಪಂ ಅಭಿವೃದ್ಧಿ ಅಧಿಕಾರಿ ಶರಣಬಸವರಾಜ ಕೆಸರಟ್ಟಿ, ತಾಪಂ ಇಒ ಚಂದ್ರಶೇಖರ, ಸ್ತ್ರೀಶಕ್ತಿ ಒಕ್ಕೂಟದ ತಾಲೂಕು ಅಧ್ಯಕ್ಷೆ ಶ್ರೀದೇವಿ ಶ್ರೀನಿವಾಸ ಇತರರಿದ್ದರು.

Published on
ಸಿಂಧನೂರು: ಮಹಿಳೆಯರ ಸಬಲೀಕರಣ ಮತ್ತು ಸ್ವಾವಲಂಬಿ ಬದುಕು ಕಲ್ಪಿಸುವುದು ಅಕ್ಕ ಕೆಫೆಯ ಮೂಲ ಉದ್ದೇಶವಾಗಿದೆ ಎಂದು ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು. 
ಬಸ್ ನಿಲ್ದಾಣದ ಎದುರುಗಡೆ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಅಡಿ ನಿರ್ಮಿಸಿರುವ ಅಕ್ಕ ಕೆಫೆೆ ಹಾಗೂ ಸಂಜೀವಿನಿ ಇ-ಮಾರ್ಟ್ ಮಳಿಗೆಯನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು. ಕೇಂದ್ರ ಸರ್ಕಾರದ ಶೇ.60 ಮತ್ತು ರಾಜ್ಯ ಸರ್ಕಾರದ ಶೇ.40 ಅನುದಾನದಲ್ಲಿ ಅಕ್ಕ ಕೆಫೆ ಆರಂಭಿಸಲಾಗಿದೆ. 
ಬೆಳಗ್ಗೆ 7 ರಿಂದ ರಾತ್ರಿ 10 ಗಂಟೆವರೆಗೂ ಉಪಾಹಾರ, ಊಟ, ಸ್ನಾೃಕ್ಸ್, ಜ್ಯೂಸ್ ದೊರೆಯುತ್ತವೆ. ಸಾರ್ವಜನಿಕರಿಗೆ ಹೊರೆಯಾಗದಂತೆ ದರ ನಿಗದಿಪಡಿಸಲಾಗಿದೆ ಎಂದ ಅವರು, ಕುಷ್ಟಗಿ ರಸ್ತೆಯ ಸರ್ಕಾರಿ ಪದವಿ ಕಾಲೇಜಿನ ಬಳಿ ಇನ್ನೊಂದು ಅಕ್ಕ ಕೆಫೆೆ ಹಾಗೂ ಬೇರೊಂದು ಸ್ಥಳದಲ್ಲಿ ಇಂದಿರಾ ಕ್ಯಾಂಟೀನ್ ಸ್ಥಾಪಿಸುವಂತೆ ಈಗಾಗಲೇ ರಾಜ್ಯ ಸರ್ಕಾರ ಹಾಗೂ ಸಂಬಂಧಿಸಿದ ಇಲಾಖೆಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು. 
ಮಸ್ಕಿ ಶಾಸಕ ಆರ್.ಬಸನಗೌಡ ತುರ್ವಿಹಾಳ, ಕಾಂಗ್ರೆಸ್ ಹಿರಿಯ ಮುಖಂಡ ಎಂ.ಕಾಳಿಂಗಪ್ಪ ವಕೀಲ, ತಾಪಂ ಎಡಿ ಯಂಕಪ್ಪ, ಕಾರ್ಯಕ್ರಮ ಅಧಿಕಾರಿ ರಜಬ್, ನಿರ್ಮಿತಿ ಕೇಂದ್ರದ ಕಿರಿಯ ಇಂಜಿನಿಯರ್ ತೇಜಾ, ಎನ್‌ಎಲ್‌ಆರ್‌ಎಂ ಅನಿಲ್, ಸ್ತ್ರೀಶಕ್ತಿ ಒಕ್ಕೂಟದ ಕಾರ್ಯದರ್ಶಿ ಗೌರಮ್ಮ, ಉಪಾಧ್ಯಕ್ಷೆ ಶಿವಲಿಂಗಮ್ಮ, ನಿರ್ದೇಶಕರಾದ ಕೌಸಲ್ಯ, ರೇಣುಕಮ್ಮ, ವೀಣಾ, ಅಕ್ಕ ಕೆಫೆ ಪ್ರತಿನಿಧಿಗಳಾದ ಸುನೀತಾ, ಸುಮತಿ, ಶ್ರೀದೇವಿ, ಶರಣಮ್ಮ, ಲಕ್ಷ್ಮೀ, ಅನಂತಲಕ್ಷ್ಮೀ, ಉಮಲೂಟಿ ಜ್ಯೋತಿ ಸ್ತ್ರೀಶಕ್ತಿ ಸ್ವಸಹಾಯ ಸಂಘದ ಅಧ್ಯಕ್ಷೆ ಬೇಗಂಬೀ, ಖಾಜಾ ಹುಸೇನ್ ರೌಡಕುಂದಾ, ಶ್ರೀನಿವಾಸ, ಆಂಜನೇಯ, ಅಮರೇಶ ಮಾಡಸಿರವಾರ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net