ಮಳೆಗಾಗಿ ನದಿಗಳ ನೀರಿನಿಂದ ದೇವರುಗಳಿಗೆ ಜಲಾಭಿಷೇಕ

ತಾಲೂಕಿನ ತುರುಕನಡೋಣಿ ಗ್ರಾಮದ ರೈತರು ಮಂಗಳವಾರ ಮಳೆಗಾಗಿ ಗ್ರಾಮದ ದೇವರುಗಳಿಗೆ ಕೃಷ್ಣಾ ನದಿ ಹಾಗೂ ತುಂಗಭದ್ರಾ ನದಿ ನೀರಿನ ಜಲಾಭಿಷೇಕ ಮಾಡಿ ವಿಶೇಷ ಪೂಜೆ ಮಾಡಿ ಪ್ರಾರ್ಥಿಸಿದರು.
ತಾಲೂಕಿನ ತುರುಕನಡೋಣಿ ಗ್ರಾಮದ ರೈತರು ಮಂಗಳವಾರ ಮಳೆಗಾಗಿ ಗ್ರಾಮದ ದೇವರುಗಳಿಗೆ ಕೃಷ್ಣಾ ನದಿ ಹಾಗೂ ತುಂಗಭದ್ರಾ ನದಿ ನೀರಿನ ಜಲಾಭಿಷೇಕ ಮಾಡಿ ವಿಶೇಷ ಪೂಜೆ ಮಾಡಿ ಪ್ರಾರ್ಥಿಸಿದರು.
Published on
ರಾಯಚೂರು
ತಾಲೂಕಿನ ತುರುಕನಡೋಣಿ ಗ್ರಾಮದ ರೈತರು ಮಂಗಳವಾರ ಮಳೆಗಾಗಿ ಗ್ರಾಮದ ದೇವರುಗಳಿಗೆ ಕೃಷ್ಣಾ ನದಿ ಹಾಗೂ ತುಂಗಭದ್ರಾ ನದಿ ನೀರಿನ ಜಲಾಭಿಷೇಕ ಮಾಡಿ ವಿಶೇಷ ಪೂಜೆ ಮಾಡಿ ಪ್ರಾರ್ಥಿಸಿದರು.

ಮಣ್ಣೆತ್ತಿನ ಅಮಾವಾಸ್ಯೆಯಂದು ಬೆಳಗಿನ ಜಾವದಲ್ಲಿ ಗ್ರಾಮದ ರೈತರು,ಯುವಕರು ಪಾದಯಾತ್ರೆಯೊಂದಿಗೆ ಬಿಂದಿಗೆಗಳೊಂದಿಗೆ ತೆರಳಿ ಕೃಷ್ಣಾ ನದಿ ಹಾಗೂ ತುಂಗಭದ್ರಾ ನದಿಯಲ್ಲಿ ಪೂಜೆ ಸಲ್ಲಿಸಿ ಅಲ್ಲಿಂದ ಮರಳಿ ತುಂಬಿದ ಬಿಂದಿಗೆಗಳೊಂದಿದಿಗೆ ಮರಳಿ ಗ್ರಾಮಕ್ಕೆ ಆಗಮಿಸಿದರು.
ಗ್ರಾಮದ ಈಶ್ವರ ದೇವರು, ಆಂಜನೇಯ್ಯ ದೇವರು, ಬೋಳಬಂಡೆ ಬಸವೇಶ್ವರ ಹಾಗೂ ಊರ ದೇವತೆ ಈದೆಮ್ಮ ದೇವಿಗೆ ಉಭಯ ನದಿಗಳ ನೀರಿನಿಂದ ಅಯ ದೇವಸ್ಥಾನಗಳ ಆರ್ಚಕರ ನೇತೃತ್ವದಲ್ಲಿ ಜಲಾಭಿಷೇಕ ನೆರವೇರಿಸಿದರು.ನಂತರ ದೇವರುಗಳಿಗೆ ವಿಶೇಷ ಪೂಜೆ ಸಲ್ಲಿಸಿ ಮಳೆಗಾಗಿ ಪ್ರಾರ್ಥನೆ ಸಲ್ಲಿಸಿದರು.
ಈ ಜಲಾಭಿಷೇಕ ಪೂಜಾ ಕಾರ್ಯದಲ್ಲಿ ಗ್ರಾಮದ ಯುವಕರು, ರೈತರು ಸೇರಿ ಅನೇಕರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net