ಅಧಿಕ ಸಾಂದ್ರತೆಯ ಬೇಸಾಯ ಅಳವಡಿಸಿಕೊಳ್ಳಿ

ಆಲ್ಕೋಡ್ ಗ್ರಾಮದಲ್ಲಿ ಅಧಿಕ ಸಾಂದ್ರತೆಯ ಹತ್ತಿ ಬೆಳೆಯನ್ನು ಜಂಟಿ ಕೃಷಿ ನಿರ್ದೇಶಕ ಪ್ರಕಾಶ ಚವ್ಹಾಣ್ ಮಂಗಳವಾರ ವೀಕ್ಷಿಸಿದರು. ಕೃಷಿ ಇಲಾಖೆ ಉಪನಿರ್ದೇಶಕರಾದ ನಯೀಮ್ ಹುಸೇನ್ ಹಾಗೂ ಮುತ್ತುರಾಜ, ದೇವದುರ್ಗದ ಸಹಾಯಕ ನಿರ್ದೇಶಕ ಶ್ರೀನಿವಾಸ ನಾಯಕ, ಸಹಾಯಕ ಕೃಷಿ ನಿರ್ದೇಶಕ (ಎಸ್‌ಎಂಎಸ್) ಸುನೀಲ್, ರೈತ ನಂದಿಕೇಶ್ವರ ಪಾಟೀಲ್ ಇತರರಿದ್ದರು.

Published on
ಅರಕೇರಾ: ಆಲ್ಕೋಡ್ ಗ್ರಾಮದಲ್ಲಿ ರೈತ ನಂದಿಕೇಶ್ವರ ಪಾಟೀಲ್ ಅವರು ಬೆಳೆದಿರುವ ಅಧಿಕ ಸಾಂದ್ರತೆಯ ಹತ್ತಿ ಬೇಸಾಯ ಪದ್ಧತಿ (ಎಚ್‌ಡಿಪಿಎಸ್) ಕ್ಷೇತ್ರಕ್ಕೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಪ್ರಕಾಶ ಚವ್ಹಾಣ್ ನೇತೃತ್ವದ ತಂಡ ಮಂಗಳವಾರ ಭೇಟಿ ನೀಡಿ, ವೀಕ್ಷಿಸಿತು. 
ಹತ್ತಿ ಬೆಳೆಯ ಸ್ಥಿತಿಗತಿ, ಸಸ್ಯಗಳ ಬೆಳವಣಿಗೆ, ಸಾಲು ಅಂತರ, ಗಿಡಗಳ ಸಂಖ್ಯೆ ಹಾಗೂ ಅನುಸರಿಸಿರುವ ಕೃಷಿ ಪದ್ಧತಿಯನ್ನು ಪರಿಶೀಲಿಸಿದರು. ಅಧಿಕ ಸಾಂದ್ರತೆಯ ಹತ್ತಿ ಬೇಸಾಯದಿಂದ ಬೆಳಕು, ನೀರು ಹಾಗೂ ಪೋಷಕಾಂಶಗಳ ಸಮರ್ಪಕ ಬಳಕೆ ಸಾಧ್ಯವಾಗುವುದರೊಂದಿಗೆ ಉತ್ತಮ ಇಳುವರಿ ಪಡೆಯಲು ಅನುಕೂಲವಾಗಲಿದ್ದು, ಹೆಚ್ಚಿನ ರೈತರು ಅಳವಡಿಸಿಕೊಳ್ಳಬೇಕು ಎಂದ ಅವರು, ಹತ್ತಿ ಬೆಳೆಯಲ್ಲಿ ಉತ್ತಮ ನಿರ್ವಹಣಾ ಕ್ರಮಗಳು, ಸಮತೋಲನ ಗೊಬ್ಬರ ಬಳಕೆ, ಕೀಟ ಹಾಗೂ ರೋಗಗಳ ಸಮಗ್ರ ನಿರ್ವಹಣೆ ಕುರಿತು ಸಲಹೆ ನೀಡಿದರು. 
ಕೃಷಿ ಇಲಾಖೆ ಉಪನಿರ್ದೇಶಕರಾದ ನಯೀಮ್ ಹುಸೇನ್ ಹಾಗೂ ಮುತ್ತುರಾಜ, ದೇವದುರ್ಗದ ಸಹಾಯಕ ನಿರ್ದೇಶಕ ಶ್ರೀನಿವಾಸ ನಾಯಕ, ಸಹಾಯಕ ಕೃಷಿ ನಿರ್ದೇಶಕ (ಎಸ್‌ಎಂಎಸ್) ಸುನೀಲ್, ಕೃಷಿ ಅಧಿಕಾರಿ ಅಮರೇಶ, ಆತ್ಮ ತಾಂತ್ರಿಕ ಸಹಾಯಕ ಲಕ್ಷ್ಮಣ ಪೂಜಾರಿ ಹಾಗೂ ರೈತ ನಂದಿಕೇಶ್ವರ ಪಾಟೀಲ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net