ಶಿಸ್ತುಬದ್ಧ ಜೀವನ ಕ್ರಮ ರೂಢಿಸಿಕೊಳ್ಳಿ

ಮಸ್ಕಿಯ ಗಚ್ಚಿನ ಹಿರೇಮಠದಲ್ಲಿ ರಾಷ್ಟ್ರೀಯ ಯುವ ದಿನ ಆಚರಿಸಲಾಯಿತು. ಗಚ್ಚಿನ ಹಿರೇಮಠದ ವರರುದ್ರಮುನಿ ಶಿವಾಚಾರ್ಯರು ಲಯನ್ಸ್ ಕ್ಲಬ್ ಅಧ್ಯಕ್ಷ ವೀರೇಶ ಹಿರೇಮಠ, ಗಂಗಾಧರ ಶಕ್ತಿನಗರ, ಯಮನೂರು ಕನ್ನಾರಿ, ರಂಗಯ್ಯ ಶ್ರೇಷ್ಠಿ ಇತರರಿದ್ದರು.
ಮಸ್ಕಿಯ ಗಚ್ಚಿನ ಹಿರೇಮಠದಲ್ಲಿ ರಾಷ್ಟ್ರೀಯ ಯುವ ದಿನ ಆಚರಿಸಲಾಯಿತು. ಗಚ್ಚಿನ ಹಿರೇಮಠದ ವರರುದ್ರಮುನಿ ಶಿವಾಚಾರ್ಯರು ಲಯನ್ಸ್ ಕ್ಲಬ್ ಅಧ್ಯಕ್ಷ ವೀರೇಶ ಹಿರೇಮಠ, ಗಂಗಾಧರ ಶಕ್ತಿನಗರ, ಯಮನೂರು ಕನ್ನಾರಿ, ರಂಗಯ್ಯ ಶ್ರೇಷ್ಠಿ ಇತರರಿದ್ದರು.
Published on
ಮಸ್ಕಿ: ಯುವಜನತೆ ಓದಿನೊಂದಿಗೆ ಉತ್ತಮ ಆರೋಗ್ಯ ಹಾಗೂ ಜೀವನ ನಿರ್ವಹಿಸುವುದನ್ನು ಕಲಿಯಬೇಕು. ಸ್ವಾಮಿ ವಿವೇಕನಾಂದರ ಜೀವನ ಚರಿತ್ರೆ ಅರಿತರೆ ಜ್ಞಾನ ವಿಸ್ತಾರವಾಗುತ್ತದೆ ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ವೀರೇಶ ಹಿರೇಮಠ ಹೇಳಿದರು.
ಪಟ್ಟಣದ ಗಚ್ಚಿನ ಹಿರೇಮಠದಲ್ಲಿ ಸೋಮವಾರ ಲಯನ್ಸ್ ಕ್ಲಬ್, ಹೆಡ್‌ಹೆಲ್ಡ್ ಹೈ ಫೌಂಡೇಷನ್ ಮತ್ತು ಹೈಟೆಕ್ ಸಂಸ್ಥೆಯಿಂದ ಏರ್ಪಡಿಸಿದ್ದ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. 
ಸ್ವಾಮಿ ವಿವೇಕಾನಂದರ ಮಾತುಗಳು ಪ್ರತಿಯೊಬ್ಬರಿಗೂ ಸ್ಫೂರ್ತಿ ತುಂಬುತ್ತವೆ. ಸ್ಪರ್ಧಾತ್ಮ್ಮಕ ಪರೀಕ್ಷೆಗಳನ್ನು ಧೈರ್ಯವಾಗಿ ಎದುರಿಸಲು ಶಿಸ್ತುಬದ್ಧ ಜೀವನ ಕ್ರಮ ರೂಢಿಸಿಕೊಳ್ಳಬೇಕು ಎಂದರು. 
ಗಚ್ಚಿನ ಹಿರೇಮಠದ ವರರುದ್ರಮುನಿ ಶಿವಾಚಾರ್ಯರು ಕಾರ್ಯಕ್ರಮ ಉದ್ಘಾಟಿಸಿದರು. ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದವರಿಗೆ ಪ್ರಮಾಣ ಪತ್ರ ನೀಡಲಾಯಿತು. 
ಪ್ರಮುಖರಾದ ಗಂಗಾಧರ ಶಕ್ತಿನಗರ, ಯಮನೂರು ಕನ್ನಾರಿ, ರಂಗಯ್ಯ ಶ್ರೇಷ್ಠಿ, ಬಿ.ಎಲ್.ಶಟ್ಟಿ, ಸಿದ್ದಲಿಂಗಯ್ಯ ಸೊಪ್ಪಿಮಠ, ಕೆ.ನಾಗರಾಜ, ಡಾ.ಬಿ.ಎಚ್.ದಿವಟರ್, ಶಿವರಾಜ ಇತ್ಲಿ, ಸೋಮಶೇಖರಯ್ಯ ಇತರರಿದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net