ಎಡಿಸಿಗೆ ಕೋಣ ಇರಿತ ತೆರುಚಿದ ಗಾಯ

ಕೋಣ ಇರಿದ ಸಾಂದರ್ಭಿಕ ಫೋಟೋ
ಕೋಣ ಇರಿದ ಸಾಂದರ್ಭಿಕ ಫೋಟೋ
Published on
ರಾಯಚೂರು 
ಕೋಣ ಇರಿದು ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ ಹಾಗೂ ಆರ್‌ಡಿಎ ಆಯುಕ್ತ ಈರಣ್ಣ ಬಿರಾದಾರ ತೆರುಚಿದ ಗಾಯಗಳಾದ ಘಟನೆ ಶುಕ್ರವಾರ ಜರುಗಿದೆ.

ನಗರದ ಐಬಿ ಹತ್ತಿರದ ಸರ್ಕಾರಿ ವಸತಿ ಗೃಹಗಳ ಬಳಿ ಎಡಿಸಿ ಶಿವಾನಂದ ಭಜಂತ್ರಿ ನಿಂತಿದ್ದಾಗ ಅಡ್ಡಿಸಿಕೊಂಡ ಬಂದ ಕೋಣು ಇರಿದು ತಪ್ಪಿಸಿಕೊಂಡಿದ್ದಾರೆ. ಅದೇ ಅವಧಿಯಲ್ಲಿ ಈರಣ್ಣ ಬಿರಾದಾರ ಸ್ಥಳಕ್ಕೆ ಧಾವಿಸಿದಾಗಲೂ ಕೋಣ ಅವರ ಮೇಲೂ ಧಾಳಿ ಮಾಡಿದ್ದರಿಂದ ತೆರಚಿದ ಗಾಯಗಳಾಗಿದ್ದು ಖಾಸಗಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ. ಘಟನೆಯಿಂದ ಸಾರ್ವಜನಿಕರು ಆತಂಕ ಪಡುವಂತಾಯಿತು.
 ರಸ್ತೆಯಲ್ಲಿ ಸಂಚರಿಸುವ ಜನರು ಹಾಗೂ ಸಾರ್ವಜನಿಕರು ಕೋಣ ಓಡಿಬಂದಿದ್ದರಿಂದ ಓಡಿ ಹೋಗುವಂತಾಯಿತು. ಇಬ್ಬರು ಹಿರಿಯ ಅಧಿಕಾರಿಗಳು ಆಕಸ್ಮಿಕವಾಗಿ ಕೋಣ ಕೆಂಗೆಣ್ಣಿಗೆ ಗುರಿಯಾಗಿ ಅಪಾಯದಿಂದ ಪಾರಾಗಿದ್ದಾರೆ.
 ಆದರೆ ಅಪಾಯಕ್ಕೆ ಕಾರಣವಾಗಿರುವ ಕೋಣದಿಂದ ಮತ್ತಷ್ಟು ಅವಘಡಗಳು ನಡೆಯುವ ಮುನ್ನ ಎಚ್ಚರವಹಿಸಬೇಕೆನ್ನುವದು ಸಾರ್ವಜನಿಕರ ಒತ್ತಾಯವಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net