ಶಿಕ್ಷಣ ಸುಧಾರಣೆಗೆ ಕ್ರಮ

ಮುದಗಲ್‌ನ ವೆಂಕಟರಾಯನಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬವನ್ನು ಬಿಇಒ ಸುಜಾತಾ ಹುನೂರು ಉದ್ಘಾಟಿಸಿದರು. ಮುಖ್ಯಶಿಕ್ಷಕ ಸಂಗಯ್ಯ ಹಿರೇಮಠ, ಹನುಮಯ್ಯ, ನಿವೃತ್ತ ಶಿಕ್ಷಕ ನಾಗೇಂದ್ರ, ಶಿಕ್ಷಕರಾದ ಶಿವಶಂಕರ ಪಾಟೀಲ್, ಮಲ್ಲಿಕಾರ್ಜುನಯ್ಯ ಇತರರಿದ್ದರು.
ಮುದಗಲ್‌ನ ವೆಂಕಟರಾಯನಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬವನ್ನು ಬಿಇಒ ಸುಜಾತಾ ಹುನೂರು ಉದ್ಘಾಟಿಸಿದರು. ಮುಖ್ಯಶಿಕ್ಷಕ ಸಂಗಯ್ಯ ಹಿರೇಮಠ, ಹನುಮಯ್ಯ, ನಿವೃತ್ತ ಶಿಕ್ಷಕ ನಾಗೇಂದ್ರ, ಶಿಕ್ಷಕರಾದ ಶಿವಶಂಕರ ಪಾಟೀಲ್, ಮಲ್ಲಿಕಾರ್ಜುನಯ್ಯ ಇತರರಿದ್ದರು.
Published on
ಮುದಗಲ್: ಶಿಕ್ಷಣದಲ್ಲಿ ಸುಧಾರಣೆ ತರುವ ಉದ್ದೇಶದಿಂದ ಸರ್ಕಾರ ಕಲಿಕಾ ಹಬ್ಬ, ಪ್ರತಿಭಾ ಕಾರಂಜಿಯಂತಹ ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ ಎಂದು ಲಿಂಗಸುಗೂರು ಕ್ಷೇತ್ರ ಶಿಕ್ಷಣಾಧಿಕಾರಿ ಸುಜಾತಾ ಹುನೂರು ಅಭಿಪ್ರಾಯಪಟ್ಟರು. 
ಮುದಗಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವೆಂಕಟರಾಯನಪೇಟೆಯಲ್ಲಿ ಬುಧವಾರ ಆಯೋಜಿಸಿದ್ದ ಮುದಗಲ್ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. 
ತಾಲೂಕಿನಲ್ಲಿ ಶಿಕ್ಷಕರ ಕೊರತೆ ಇದ್ದರೂ ಅತಿಥಿ ಶಿಕ್ಷಕರ ನೇಮಕ ಮಾಡಿಕೊಂಡು ಶಿಕ್ಷಣ ಸುಧಾರಣೆ ಮಾಡಲಾಗುತ್ತಿದೆ. ಕಲಿಕಾ ಹಬ್ಬದಿಂದ ಮಕ್ಕಳನ್ನು ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಬಾಲ್ಯಾವಸ್ಥೆಯಲ್ಲಿಯೇ ಮಕ್ಕಳಿಗೆ ಕಲಿಕಾ ಸಾಮರ್ಥ್ಯ ಸುಧಾರಣೆ ಹಾಗೂ ಆತ್ಮಸ್ಥೈರ್ಯವನ್ನು ಹೆಚ್ಚಿಸಲು ಪ್ರೇರಣೆಯಾಗಲಿದೆ ಎಂದರು. 
ಶಿಕ್ಷಕಿ ಶೋಭಾ ಮಾತನಾಡಿ, ಮಕ್ಕಳ ಕಲಿಕೆಯನ್ನು ಸಂಭ್ರಮಿಸುವ ಹಬ್ಬವೇ ಕಲಿಕಾ ಹಬ್ಬವಾಗಿದೆ. ಪಾಲಕರು ಮಕ್ಕಳ ಕಲಿಕಾ ಹಬ್ಬದಲ್ಲಿ ಭಾಗಿಯಾಗಿ ಮಕ್ಕಳ ಸಾಮರ್ಥ್ಯವನ್ನು ತಿಳಿಯಬೇಕು. ಸರ್ಕಾರದಿಂದ ಸಾಕಷ್ಟು ಯೋಜನೆಗಳನ್ನು ಅನಷ್ಠಾನಗೊಳಿಸಲಾಗಿದ್ದು ಮಕ್ಕಳು ಅದರ ಪ್ರಯೋಜನ ಪಡೆಯಬೇಕು ಎಂದರು.
ಸಿಆರ್‌ಪಿ ರಾಮಚಂದ್ರ ಢವಳೆ ಕಾರ್ಯಕ್ರಮ ಕುರಿತು ಮಾತನಾಡಿದರು. ಮುಖಂಡರಾದ ಸಂಗಪ್ಪ ಹಿರೇಮನಿ, ಬಸವರಾಜ ಬಂಕದಮನಿ, ಆನಂದ ಪೇಂಟರ್, ಶರಣಪ್ಪ ಕಟ್ಟಿಮನಿ, ವೆಂಕಟೇಶ ಹಿರೇಮನಿ, ಮೈಬೂಬ್ ಸಾಬ್ ಡೊಂಗ್ರಿ, ಮೌನೇಶ ಕಟ್ಟಿಮನಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net