ಅಕ್ರಮ ಎಸಗಿದವರ ವಿರುದ್ಧ ಕ್ರಮವಾಗಲಿ

ಸಿರವಾರದಲ್ಲಿ ತಾಪಂ ನೋಡಲ್ ಅಧಿಕಾರಿ ಅನಿಲ್‌ಕುಮಾರ್‌ಗೆ ಕರವೇ ತಾಲೂಕು ಘಟಕ ಮನವಿ ಸಲ್ಲಿಸಿತು. ತಾಲೂಕು ಅಧ್ಯಕ್ಷ ಕೆ.ರಾಘವೇಂದ್ರ, ಪ್ರಮುಖ ವೆಂಕಟೇಶ ಸಂಕ್ರಿ ಸೇರಿದಂತೆ ಆಶ್ರಯ ಮನೆಗಳ ಅರ್ಜಿದಾರರು ಇದ್ದರು.
ಸಿರವಾರದಲ್ಲಿ ತಾಪಂ ನೋಡಲ್ ಅಧಿಕಾರಿ ಅನಿಲ್‌ಕುಮಾರ್‌ಗೆ ಕರವೇ ತಾಲೂಕು ಘಟಕ ಮನವಿ ಸಲ್ಲಿಸಿತು. ತಾಲೂಕು ಅಧ್ಯಕ್ಷ ಕೆ.ರಾಘವೇಂದ್ರ, ಪ್ರಮುಖ ವೆಂಕಟೇಶ ಸಂಕ್ರಿ ಸೇರಿದಂತೆ ಆಶ್ರಯ ಮನೆಗಳ ಅರ್ಜಿದಾರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ತಾಪಂ ಅಧಿಕಾರಿಗೆ ಮನವಿ
  • ಸಿರವಾರ ಕರ್ನಾಟಕ ರಕ್ಷಣಾ ವೇದಿಕೆ ಒತ್ತಾಯ
ಸಿರವಾರ: ಆಶ್ರಯ ಮನೆಗಳ ವಿತರಣೆಯಲ್ಲಿ ಅಕ್ರಮವೆಸಗಿದ ಗ್ರಾಪಂ ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧ ತನಿಖೆ ನಡೆಸಿ ತಪ್ಪಿತಸ್ಥರನ್ನು ಅಮಾನತುಗೊಳಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ) ಪದಾಧಿಕಾರಿಗಳು ತಾಪಂ ನೋಡಲ್ ಅಧಿಕಾರಿ ಅನಿಲ್‌ಕುಮಾರಗೆ ಮನವಿ ಸಲ್ಲಿಸಿದರು.
ಹೀರಾ, ಮಲ್ಲಟ, ಬಲ್ಲಟಗಿ ಗ್ರಾಪಂ ವ್ಯಾಪ್ತಿಯಲ್ಲಿ ಪಿಎಂಎವೈ ಯೋಜನೆಯಡಿ ಬಡವರಿಗೆ ಮಂಜೂರಾಗಿರುವ ಆಶ್ರಯ ಮನೆಗಳ ಹಣವನ್ನು ಅರ್ಹ ಫಲಾನುಭವಿಗಳ ಖಾತೆಗೆ ಜಮಾ ಮಾಡದೆ ಅನಾಮಧೇಯ ವ್ಯಕ್ತಿಗಳ ಖಾತೆಗೆ ಹಾಕಿ ಅಕ್ರಮವೆಸಗಿದ್ದಾರೆ. ಈ ಕುರಿತು ತನಿಖೆ ನಡೆಸಿ, ಇದರಲ್ಲಿ ಶಾಮೀಲಾದ ಗ್ರಾಪಂ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕು. ಅರ್ಹ ಫಲಾನುಭವಿಗಳ ಖಾತೆಗೆ ಹಣ ಜಮಾ ಮಾಡಬೇಕು ಎಂದು ಆಗ್ರಹಿಸಿದರು. ಕರವೇ ತಾಲೂಕು ಅಧ್ಯಕ್ಷ ಕೆ.ರಾಘವೇಂದ್ರ, ಪ್ರಮುಖ ವೆಂಕಟೇಶ ಸಂಕ್ರಿ ಸೇರಿದಂತೆ ಆಶ್ರಯ ಮನೆಗಳ ಅರ್ಜಿದಾರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net