ಭ್ರಷ್ಟಾಚಾರ ಮಾಡಿದ ಅಧಿಕಾರಿಗಳ ಮೇಲೆ ಕ್ರಮವಾಗಲಿ

ತಾಲೂಕಿನ ಸರ್ಕಾರಿ ಬಾಲಕರ ಪ್ರೌಢ ಶಾಲೆಯ ಪ್ರಭಾರಿ ಮುಖ್ಯಗುರು ವಿರುದ್ಧ ಭ್ರಷ್ಟಾಚಾರ,ಅವ್ಯವಹಾರ ಮತ್ತು ಅನುದಾನ ದುರ್ಬಳಕೆ ಮಾಡಿಕೊಂಡಿದ್ದಾರೆಂದು ಆರೋಪಿಸಿ ಕ್ರಾಂತಿವೀರ ಬೆಳವಡಿ ವಡ್ಡರ ಯಲ್ಲಣ್ಣ ಯುವ ಸಂಘದ ವತಿಯಿಂದ ಸೋಮವಾರ ರಾಯಚೂರಿನ ಎಡಿಸಿ ಶಿವಾನಂದ ಭಜಂತ್ರಿಗೆ ಮನವಿ ಸಲ್ಲಿಸಿದರು. ಜಿಲ್ಲಾಧ್ಯಕ್ಷ ಎನ್.ಆರ್.ರಮೇಶ,ಪ್ರಮುಖರಾದ ನವೀನ್, ಕುಮಾರ, ಕೃಷ್ಣಾ, ರಾಜೇಶ, ಈರೇಶ, ಮಾಂಚಪ್ಪ, ಮಹಾದೇವ, ಅನೀಲ್ ಕುಮಾರ, ಪವನ್ ಕುಮಾರ, ಶಿವ ಇದ್ದರು.

Published on
ರಾಯಚೂರು
ತಾಲೂಕಿನ ಸರ್ಕಾರಿ ಬಾಲಕರ ಪ್ರೌಢ ಶಾಲೆಯ ಪ್ರಭಾರಿ ಮುಖ್ಯಗುರು ವಿರುದ್ಧ ಭ್ರಷ್ಟಾಚಾರ,ಅವ್ಯವಹಾರ ಮತ್ತು ಅನುದಾನ ದುರ್ಬಳಕೆ ಮಾಡಿಕೊಂಡಿದ್ದಾರೆಂದು ಆರೋಪಿಸಿ ಕ್ರಾಂತಿವೀರ ಬೆಳವಡಿ ವಡ್ಡರ ಯಲ್ಲಣ್ಣ ಯುವ ಸಂಘದ ವತಿಯಿಂದ ಸೋಮವಾರ ಎಡಿಸಿ ಶಿವಾನಂದ ಭಜಂತ್ರಿಗೆ ಮನವಿ ಸಲ್ಲಿಸಿದರು.

2024-25 ಹಾಗೂ 2025-26ನೇ ಸಾಲಿನ ಕಚೇರಿ ಸಾದಿಲ್ವಾರು ಅನುದಾನ ಮತ್ತು ಸಿ.ಜೆ ಅನುದಾನದಲ್ಲಿ ತಾಲೂಕಿನ 54 ಸರಕಾರಿ ಪ್ರೌಢ ಶಾಲೆಗಳ ಹೆಸರಿನಲ್ಲಿ ಭಾರೀ ಅವ್ಯವಹಾರ ನಡೆದಿದೆ. ನಗರದ ಒಂದೇ ಬುಕ್ ಡಿಪೋ ಮೂಲಕ ನಕಲಿ ಬಿಲ್ ಮತ್ತು ವೋಚರ್‌ಗಳನ್ನು ಸೃಷ್ಟಿಸಿ ಕಡಿಮೆ ಗುಣಮಟ್ಟದ ವಸ್ತುಗಳನ್ನು ಖರೀದಿಸಿದಂತೆ ದಾಖಲೆ ತಯಾರಿಸಿ ಅನುದಾನವನ್ನು ದುರ್ಬಳಕೆ ಮಾಡಲಾಗಿದೆ ಎಂದು ದೂರಿದರು.
ಅಕ್ರಮದಲ್ಲಿ ಕೆಲ ಮುಖ್ಯಗುರುಗಳು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭಾಗಿಯಾಗಿರುವ ಶಂಕೆ ವ್ಯಕ್ತವಾಗುತ್ತಿದೆ. ತಾಲೂಕಿನ ಹಿಂದಿನ ಬಿಇಒ ಚಂದ್ರಶೇಖರ ಮಲ್ಲಯ್ಯ ಅವರ ಅವಧಿಯಲ್ಲಿಯೇ ಈ ಅವ್ಯ ವಹಾರಗಳು ನಡೆದಿವೆ ಎಂದು ಆರೋಪಿಸಿದರು.

2018-19ರಲ್ಲಿ ಶತಮಾನೋತ್ಸವ ಆಚರಣೆಗಾಗಿ ಸರಕಾರಿ ಬಾಲಕರ ಪ್ರೌಢ ಶಾಲೆಯ ಎಸ್‌ಡಿಎಂಸಿ ಖಾತೆಗೆ ಬಿಡುಗಡೆಯಾದ ಸುಮಾರು 5 ರಿಂದ 6 ಲಕ್ಷ ರೂಪಾಯಿ ಅನುದಾನವನ್ನು ನಿಯಮಬಾಹಿರವಾಗಿ ಬಳಕೆ ಮಾಡಲಾಗಿದೆ. ಮಾಹಿತಿ ಹಕ್ಕಿನಡಿ ಹಲವು ಬಾರಿ ಮಾಹಿತಿ ಕೇಳಿದರೂ ನೀಡಿಲ್ಲ ಎಂದು ಸಂಘದ ಸದಸ್ಯರು ಆರೋಪಿಸಿದರು. ಆದರಿಂದ ಕೂಡಲೇ ತನಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ವಹಿಸಲು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಎನ್.ಆರ್.ರಮೇಶ,ಪ್ರಮುಖರಾದ ನವೀನ್, ಕುಮಾರ, ಕೃಷ್ಣಾ, ರಾಜೇಶ, ಈರೇಶ, ಮಾಂಚಪ್ಪ, ಮಹಾದೇವ, ಅನೀಲ್ ಕುಮಾರ, ಪವನ್ ಕುಮಾರ, ಶಿವ ಸೇರಿದಂತೆ ಅನೇಕರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net