ಸರ್ಕಾರಿ ಶಾಲೆಗಳ ವಿಲೀನ ಕೈಬಿಡಿ

ಮಾನ್ವಿಯಲ್ಲಿ ಬಿಇಒ ಚಂದ್ರಶೇಖರ ದೊಡ್ಡಮನಿಗೆ ಎಐಡಿಎಸ್‌ಒ ತಾಲೂಕು ಘಟಕ ಮನವಿ ಸಲ್ಲಿಸಿತು. ಪ್ರಮುಖರಾದ ಕಲ್ಯಾಣಕುಮಾರ್, ಬಸವರಾಜ್, ನಂದಗೋಪಾಲ್, ಚನ್ನಪ್ಪ ಬಡಿಗೇರ್, ಶರಣಪ್ಪ, ಮಲ್ಲಿಕಾರ್ಜುನ ಇದ್ದರು.
ಮಾನ್ವಿಯಲ್ಲಿ ಬಿಇಒ ಚಂದ್ರಶೇಖರ ದೊಡ್ಡಮನಿಗೆ ಎಐಡಿಎಸ್‌ಒ ತಾಲೂಕು ಘಟಕ ಮನವಿ ಸಲ್ಲಿಸಿತು. ಪ್ರಮುಖರಾದ ಕಲ್ಯಾಣಕುಮಾರ್, ಬಸವರಾಜ್, ನಂದಗೋಪಾಲ್, ಚನ್ನಪ್ಪ ಬಡಿಗೇರ್, ಶರಣಪ್ಪ, ಮಲ್ಲಿಕಾರ್ಜುನ ಇದ್ದರು.
Published on
ಮಾನ್ವಿ: ರಾಜ್ಯ ಸರ್ಕಾರವು ಕರ್ನಾಟಕ ಪಬ್ಲಿಕ್ ಶಾಲೆ (ಕೆಪಿಎಸ್) ಮ್ಯಾಗ್ನೆಟ್ ಯೋಜನೆ ಅಡಿ ಕೈಗೆತ್ತಿಕೊಂಡಿರುವ ಶಾಲಾ ವಿಲೀನ ಪ್ರಕ್ರಿಯೆಯನ್ನು ಕೈ ಬಿಡಬೇಕು ಎಂದು ಆಗ್ರಹಿಸಿ ಪಟ್ಟಣದಲ್ಲಿ ಬಿಇಒ ಚಂದ್ರಶೇಖರ ದೊಡ್ಡಮನಿಗೆ ಎಐಡಿಎಸ್‌ಒ ತಾಲೂಕು ಘಟಕ ಮಂಗಳವಾರ ಮನವಿ ಸಲ್ಲಿಸಿತು.
ತಾಲೂಕು ಸಂಚಾಲಕ ನಂದಗೋಪಾಲ್ ಮಾತನಾಡಿ, ಮಾನ್ವಿ ತಾಲೂಕು ಹೊಸೂರು ಗ್ರಾಮದಲ್ಲಿ ಸರ್ಕಾರಿ ಶಾಲೆ ವಿಲೀನಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. 2025ರ ಅ.15ರಂದು ಸರ್ಕಾರಿ ಆದೇಶದನ್ವಯ, ಕೆಪಿಎಸ್ ಶಾಲೆಗಳ 3 ರಿಂದ 5 ಕಿಲೋಮೀಟರ್ ವ್ಯಾಪ್ತಿಯಲ್ಲಿರುವ ಶಾಲೆಗಳನ್ನು ವಿಲೀನಗೊಳಿಸಲು ಪಟ್ಟಿ ಸಿದ್ಧಪಡಿಸಲಾಗಿದೆ. ನಮ್ಮೂರ ಶಾಲೆ ನಮ್ಮೂರ ಮಕ್ಕಳ ಜ್ಞಾನದ ಮಂದಿರವಾಗಿದ್ದು, ಇದನ್ನು ಮುಚ್ಚಲು ಅಥವಾ ಬೇರೆ ಶಾಲೆಗೆ ವಿಲೀನಗೊಳಿಸಲು ಗ್ರಾಮಸ್ಥರು ಹಾಗೂ ಪಾಲಕರ ಒಪ್ಪಿಗೆಯಿಲ್ಲ ಎಂದು ತಿಳಿಸಿದರು.
ಸಾರ್ವಜನಿಕ ಶಿಕ್ಷಣಕ್ಕೆ ಧಕ್ಕೆ ತರುವ ಕೆಪಿಎಸ್ ಮ್ಯಾಗ್ನೆಟ್ ಯೋಜನೆಯನ್ನು ಕೈಬಿಡಬೇಕು, ಜನತಾ ಕಾಲನಿ ಬಲ್ಲಟಗಿ, ಹೊಸೂರು, ಸಿದ್ದಗರ್ಚಿ ಕ್ಯಾಂಪ್, ಡಾಕ್ಟರ್ ಕ್ಯಾಂಪ್, ಬಲ್ಲಟಗಿ ತಾಂಡಾ ಶಾಲೆಗಳನ್ನು ವಿಲೀನಗೊಳಿಸುವ ನಿರ್ಧಾರವನ್ನು ತಕ್ಷಣವೇ ಹಿಂಪಡೆಯಬೇಕು. ಹೊಸೂರು ಶಾಲೆ ಮುಚ್ಚುವ ಬದಲಿಗೆ, ಅಗತ್ಯ ಸೌಲಭ್ಯ ಹಾಗೂ ಶಿಕ್ಷಕರನ್ನು ನೀಡಿ ಬಲಪಡಿಸಬೇಕು. ಶಾಲೆಗೆ ಸುರಕ್ಷಿತ ಗೇಟ್ ಅಳವಡಿಸಬೇಕು. ಶಾಲಾ ಆವರಣ ಸ್ವಚ್ಛತೆಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರಮುಖರಾದ ಕಲ್ಯಾಣಕುಮಾರ್, ಬಸವರಾಜ್, ಮಲ್ಲಣಗೌಡ, ನಂದಗೋಪಾಲ್,ರಂಗಪ್ಪ, ರಾಮನಗೌಡ, ಶರಣಪ್ಪ ಪೂಜಾರಿ, ಗುರುರಾಜ್, ಬಸವರಾಜ್, ಕೆ. ಶರಣಪ್ಪ, ವೀರೇಶ್ ಕೆ., ನಾಗಪ್ಪ, ಈರಪ್ಪ ಇತರರಿದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net