ಅನುಭವ ಮಂಟಪ ಮೆಚ್ಚಿದ್ದ ಜ್ಞಾನಿ

ದೇವದುರ್ಗದ ಮಿನಿವಿಧಾನಸೌಧ ಸಭಾಂಗಣದಲ್ಲಿ ಹಡಪದ ಅಪ್ಪಣ್ಣ ಅವರ ಜಯಂತಿ ಆಚರಿಸಲಾಯಿತು. ಗ್ರೇಡ್-2 ತಹಸೀಲ್ದಾರ್ ಗೋವಿಂದ ನಾಯಕ, ಶಿರಸ್ತೇದಾರ್ ಭಿಮರಾಯ ಮೇಟಿ, ಪ್ರಮುಖರಾದ ಶ್ರೀಶೈಲ, ಪಾರ್ವತಿ, ಲಕ್ಷ್ಮೀ, ಕವಿತಾ ದೇಸಾಯಿ, ಚಂದ್ರಶೇಖರ, ತಿಮ್ಮಯ್ಯ, ಕೈಲಾಸ್, ಬೂದೆಪ್ಪ, ತಿರುಪತಿ, ದೇವೇಂದ್ರಪ್ಪ, ಸಿದ್ದಪ್ಪ, ಶರಣ್, ಬಸವ, ಲಿಂಗಪ್ಪ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಹಡಪದ ಅಪ್ಪಣ್ಣ ಜಯಂತಿ ಆಚರಣೆ
  • ಕಸಾಪ ತಾಲೂಕು ಅಧ್ಯಕ್ಷ ಎಚ್.ಶಿವರಾಜ ಅನಿಸಿಕೆ
ದೇವದುರ್ಗ: ಹಡಪದ ಅಪ್ಪಣ್ಣ ಅವರು ನೇರನಡೆಯ ನಿಜ ಶರಣರಾಗಿದ್ದರು. ವಿಶ್ವಗುರು ಬಸವಣ್ಣ ಅವರ ಆಪ್ತಕಾರ್ಯದರ್ಶಿಯಾಗಿ ಆದರ್ಶ ಮೌಲ್ಯಗಳನ್ನು ನಾಡಿಗೆ ನೀಡಿದ್ದಾರೆ ಎಂದು ಕಸಾಪ ತಾಲೂಕು ಅಧ್ಯಕ್ಷ ಎಚ್.ಶಿವರಾಜ ಹೇಳಿದರು.
ಮಿನಿವಿಧಾನಸೌಧ ಸಭಾಂಗಣದಲ್ಲಿ ತಾಲೂಕು ಆಡಳಿತ ಹಾಗೂ ಹಡಪದ ಸಮಾಜದಿಂದ ಬುಧವಾರ ಆಯೋಜಿಸಿದ್ದ ನಿಜಸುಖಿ ಶರಣ ಹಡಪದ ಅಪ್ಪಣ್ಣನವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. 12ನೇ ಶತಮಾನದ ಶರಣ ಜೀವನ ನಮ್ಮ ಬದುಕಿಗೆ ದಾರಿದೀಪವಾಗಿದೆ. ಹಡಪದ ಅಪ್ಪಣ್ಣ ಅವರು 251 ವಚನಗಳನ್ನು ರಚಿಸಿದ್ದಾರೆ. ಇವರ ಧರ್ಮಪತ್ನಿ ಶರಣೆ ಲಿಂಗಮ್ಮ 114 ವಚನಗಳನ್ನು ರಚಿಸಿದ್ದಾರೆ. ಅಪ್ಪಣ್ಣ ಅವರ ಅಪಾರಜ್ಞಾನ ಅನುಭವ ಮಂಟಪದ ಶರಣರ ಮೆಚ್ಚುಗೆ ಕಾರಣವಾಗಿತ್ತು.
ಬಸವಪ್ರಿಯ ಚನ್ನಮಲ್ಲಣ್ಣ ಎಂಬ ನಾಮಾಂಕಿತದಿಂದ ಕಾಯಕ ಜೀವಿಯಾಗಿ ಆದರ್ಶ ಜೀವನ ನಡೆಸಿದ್ದರು ಎಂದು ತಿಳಿಸಿದರು.
ಗ್ರೇಡ್-2 ತಹಸೀಲ್ದಾರ್ ಗೋವಿಂದ ನಾಯಕ, ಶಿರಸ್ತೇದಾರ್ ಭಿಮರಾಯ ಮೇಟಿ, ಪ್ರಮುಖರಾದ ಶ್ರೀಶೈಲ, ಪ್ರಮುಖರಾದ ಪಾರ್ವತಿ, ಲಕ್ಷ್ಮೀ, ಕವಿತಾ ದೇಸಾಯಿ, ಚಂದ್ರಶೇಖರ, ತಿಮ್ಮಯ್ಯ, ಕೈಲಾಸ್, ಬೂದೆಪ್ಪ, ತಿರುಪತಿ, ದೇವೇಂದ್ರಪ್ಪ, ಸಿದ್ದಪ್ಪ, ಶರಣ್, ಬಸವ, ಲಿಂಗಪ್ಪ, ದೇವೇಂದ್ರಪ್ಪ ಹಡಪದ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net