ರಾಯರ ಮಠಕ ಹರಿದು ಬಂದ ಜನಸಾಗರ

ಮಕರ ಸಂಕ್ರಾಂತಿ ನಿಮಿತ್ತ ಮಂತ್ರಾಲಯದ ಶ್ರೀ ರಾಘವೇಂದ್ರ ಮಠದಲ್ಲಿ  ಗುರುವಾರ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಸೇರಿರುವುದು.
ಮಕರ ಸಂಕ್ರಾಂತಿ ನಿಮಿತ್ತ ಮಂತ್ರಾಲಯದ ಶ್ರೀ ರಾಘವೇಂದ್ರ ಮಠದಲ್ಲಿ ಗುರುವಾರ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಸೇರಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಕೃಷ್ಣೆ, ತುಂಗೆ ದಡದಲ್ಲಿ ಭಕ್ತರ ಕಲರವ
  • ಪುಣ್ಯಸ್ನಾನ ಮಾಡಿ ಸಂಕ್ರಾಂತಿ ಸಂಭ್ರಮ ಆಚರಣೆ
ರಾಯಚೂರು ಹೊಸ ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ ಹಿನ್ನೆಲೆ ಸಾರ್ವಜನಿಕರು ಜಿಲ್ಲೆಯ ತುಂಗಭದ್ರಾ ಹಾಗೂ ಕೃಷ್ಣಾ ನದಿಯಲ್ಲಿ ಗುರುವಾರ ಪುಣ್ಯಸ್ನಾನ ಮಾಡಿ ಸಂಕ್ರಾಂತಿ ಸಂಭ್ರಮ ಆಚರಣೆ ಮಾಡಿದರು.
ಈ ಬಾರಿ ರಾಜ್ಯದಲ್ಲಿ ಉತ್ತಮ ಮಳೆಯಾಗಿದ್ದರಿಂದ ಜಿಲ್ಲೆಯ ಕಷ್ಣಾ ಹಾಗೂ ತುಂಗಭದ್ರಾ ನದಿಯಲ್ಲಿ ನೀರು ಹರಿಯುತ್ತಿರುವುದರಿಂದ ನೀರಿನಲ್ಲಿ ಜನ ಪುಣ್ಯಸ್ನಾನ ಮಾಡಿ ಪುನೀತರಾದರು.
ಮಂತ್ರಾಲಯದಲ್ಲಿ ತುಂಗಸ್ನಾನಕ್ಕಾಗಿ ರಾಜ್ಯದ ಮೂಲೆ ಮೂಲೆಯಿಂದ ಭಕ್ತರ ದಂಡು ಹರಿದು ಬಂದಿದೆ. ತುಂಗಭದ್ರೆಗೆ ಪೂಜೆಯನ್ನು ಸಲ್ಲಿಸಿ ಭಕ್ತರು ಪಾವನರಾದರು. ನದಿಯಲ್ಲಿ ಭಕ್ತರು ಕುಟುಂಬ ಸಮೇತ ಆಗಮಿಸಿದ ಎಳ್ಳು ಅಚ್ಚಿಕೊಂಡು ಪುಣ್ಯ ಸ್ನಾನ ಮಾಡಿ ಹರಿಯುವ ನದಿಯಲ್ಲಿ ದೀಪಗಳನ್ನ ಹಚ್ಚಿ ತೇಲಿ ಬಿಡುವ ಮೂಲಕ ಭಕ್ತಿ ಸಮರ್ಪಿಸಿದರು.
ಸೂರ್ಯ ಮಕರ ರಾಶಿಗೆ ಪ್ರವೇಶಿಸುವ ಈ ದಿನ ಪುಣ್ಯ ಸ್ನಾನ ಮಾಡಿದರೆ ಪಾಪ ಕರ್ಮಗಳೆಲ್ಲಾ ಕರಗಿ ಹೋಗುತ್ತವೆ ಅನ್ನೋದು ಭಕ್ತರ ನಂಬಿಕೆ. ಹೀಗಾಗಿ ತುಂಗಭದ್ರಾ ಸ್ನಾನಕ್ಕಾಗಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ನಂತರ ರಾಯರ ಮಠದಲ್ಲಿ ಜನರು ಸರತಿ ಸಾಲಿನಲ್ಲಿ ನಿಂತು ಅನ್ನಪೂರ್ಣ ಡೈನಿಂಗ್ ಹಾಲ್‌ನಲ್ಲಿ ಪ್ರಸಾದ ಸ್ವೀಕರಿಸಿದರು. ಈ ಬಾರಿ ನದಿಯಲ್ಲಿ ನೀರು ಇರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಜನ ಜಂಗುಳಿ ಕಂಡುಬಂದಿತ್ತು. ಹಬ್ಬದ ವಿಶೇಷ ಖಾದ್ಯಗಳನ್ನು ತಂದು ನದಿದಡದಲ್ಲಿ ಮನೆ ಮಂದಿಯಲ್ಲಾ ಕುಳಿತು ಊಟ ಮಾಡುತ್ತ ಸಂಕ್ರಾಂತಿ ಹಬ್ಬದ ಸವಿ ಸವಿದರು.
ಅದರಂತೆ ರಾಯಚೂರು ತಾಲೂಕಿನ ನಾರದಗಡ್ಡೆ, ದೇವಸುಗೂರುನ ಸಮೀಪದ ಕೃಷ್ಣಾ ನದಿಯಲ್ಲಿ ಪುಣ್ಯಾಸ್ನಾನ ಮಾಡಿ ಕ್ಷೇತ್ರಪತಿ ಶ್ರೀ ಸೂಗೂರೇಶ್ವರನ ದರ್ಶನ ಹಾಗೂ ದತ್ತಪೀಠವನ್ನು ದರ್ಶನ ಮಾಡಿದರು.
ನಂತರ ಎರಡು ದಿನಗಳಿಂದ ಮನೆ ಮಂದಿಯಲ್ಲ ಸೇರಿ ತಯಾರಿಸಿದ್ದ ಸಜ್ಜೆ ರೊಟ್ಟಿ,ಭರ್ತ ಎನ್ನುವ ತರಕಾರಿಯನ್ನು ಸಿದ್ದಪಡಿಸಿ ಸಜ್ಜೆ ರೊಟ್ಟಿ,ಅಗಸಿ ಪುಡಿ, ಶೇಂಗಾ ಪುಡಿ, ಗುರ‌್ರೆಳ್ಳು ಪುಡಿ, ಪುಟಾಣಿ ಪುಡಿ, ರಂಜಕದ ಖಾರಗಳೊಂದಿಗೆ ನದಿ ಪಾತ್ರದಲ್ಲಿ ಕುಳಿತು ಸವಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net