ಜ್ಞಾನ, ಸಂಶೋಧನೆಗೆ ಸ್ನಾತಕೋತ್ತರ ಪದವಿ ಅಗತ್ಯ : ಡಾ.ಎ.ಚನ್ನಪ್ಪ
ರಾಯಚೂರಿನ ಅದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ಸಭಾಂಗಣದಲ್ಲಿ ಬುಧವಾರ ಇತಿಹಾಸ ವಿಭಾಗದ ವತಿಯಿಂದ ಬುಧವಾರ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮವನ್ನು ವಿವಿಯ ಕುಲಸಚಿವ ಡಾ.ಎ.ಚನ್ನಪ್ಪ ಉದ್ಘಾಟಿಸಿದರು. ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕ ಡಾ.ಸುಯಮೀಂದ್ರ ಕುಲಕರ್ಣಿ, ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ಡಾ.ಜಿ.ಎಸ್.ಬಿರಾದಾರ,ಡಾ.ಕೆ.ವೆಂಕಟೇಶ್, ಡಾ.ಪದ್ಮಜಾ ದೇಸಾಯಿ ಇದ್ದರು.
ರಾಯಚೂರು ವಿದ್ಯಾರ್ಥಿಗಳ ಬಹುಮುಖ್ಯ ಘಟ್ಟ ಸ್ನಾತಕೋತ್ತರ ಪದವಿಯಾಗಿದ್ದು, ಜ್ಞಾನ, ಸಂಶೋಧನೆ ಮತ್ತು ಕ್ರೀಯಾಶೀಲ ಚಟುವಟಿಕೆಗಳು ಅಗತ್ಯವಾಗಿವೆಂದು ವಾಲ್ಮೀಕಿ ವಿವಿಯ ಕುಲಸಚಿವ ಡಾ.ಎ.ಚನ್ನಪ್ಪ ಹೇಳಿದರು.
ಅದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಇತಿಹಾಸ ವಿಭಾಗದ ವತಿಯಿಂದ ಬುಧವಾರ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ತಮ್ಮ ಚಿಂತನೆಗಳು ಏನಿದೆ ಹಾಗೂ ಸಮಾಜದಲ್ಲಿ ಹೇಗೆ ಬದುಕಬೇಕು ಮುಂದಿನ ಜೀವನದ ದಾರಿಯ ಮಾರ್ಗವನ್ನು ಹೇಗೆ ಕಂಡುಕೊಳ್ಳಬೇಕು ಎಂಬುದನ್ನು ಅರಿತುಕೊಳ್ಳಲು ಬೆಳಕನ್ನು ನೀಡುವುದು ವಿಶ್ವವಿದ್ಯಾಲಯ ಎಂದರು.
ಹೆಚ್ಚಿನ ಸಂಖ್ಯೆಯಲ್ಲಿ ಸ್ನಾತಕ ಪದವಿಯನ್ನು ತೇರ್ಗಡೆ ಹೊಂದಿದ ವಿದ್ಯಾರ್ಥಿಗಳು ಕಡಿಮೆ ಸಂಖ್ಯೆಯಲ್ಲಿ ಸ್ನಾತಕೋತ್ತರ ಪದವಿಯನ್ನು ವ್ಯಾಸಾಂಗ ಮಾಡಲು ವಿಶ್ವವಿದ್ಯಾಲಯದ ಮೆಟ್ಟಿಲನ್ನು ಹತ್ತಿದ ನೀವುಗಳು ವಿಶ್ವವಿದ್ಯಾಲಯದಲ್ಲಿ ಲಭ್ಯವಿರುವ ಅವಕಾಶಗಳನ್ನು ಸದುಪಯೋಗ ಪಡೆದುಕೊಂಡು ಸೌಹರ್ದತೆಯಿಂದ ಜ್ಞಾನರ್ಜನೆ ಮಾಡಿಕೊಳ್ಳುವುದು, ಮತ್ತು ಉತ್ತಮ ಸಮಾಜ ನಿರ್ಮಾಣಕ್ಕೆ ಉತ್ತಮ ಪ್ರಜೆಗಳಾಗಿ ಬಾಳುವುದು ತಮ್ಮ ಜವಾಬ್ದಾರಿಯಾಗಿದೆ ಎಂದರು.
ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕ ಡಾ.ಸುಯಮೀಂದ್ರ ಕುಲಕರ್ಣಿ ಮಾತನಾಡಿ, ಐತಿಹಾಸಿಕ ಸ್ಥಳಗಳು ನಮ್ಮ ಭಾಗದಲ್ಲಿ ಹೆಚ್ಚು ಇರುವುದರಿಂದ ಸಂಶೋಧನೆ ಕೈಗೊಳ್ಳುವುದರಿಂದ ಸಾಕಷ್ಟು ಅವಕಾಶಗಳು ದೊರೆಯುತ್ತವೆ ಎಂದರು.
ಈ ಸಂದರ್ಭದಲ್ಲಿ ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ಡಾ.ಜಿ.ಎಸ್.ಬಿರಾದಾರ,ಡಾ.ಕೆ.ವೆಂಕಟೇಶ್, ಡಾ.ಪದ್ಮಜಾ ದೇಸಾಯಿ, ಡಾ.ಡಿ.ವಿರೇಶ, ಸೌಮ್ಯ ಜಗ್ಲಿ, ಇತಿಹಾಸ ಉಪನ್ಯಾಸಕ ಕೃಷ್ಣ ಸೇರಿ ಅನೇಕರು ಇದ್ದರು.