ಪ್ರಕೃತಿಯನ್ನು ದೇವರಂತೆ ಕಾಣುವ ಶ್ರೇಷ್ಠ ಪರಂಪರೆ

ಸಿಂಧನೂರಿನಲ್ಲಿ ವೃಕ್ಷರೋಪಣ ಕಾರ್ಯಕ್ರಮ ನಡೆಯಿತು. ವಿಶ್ವ ಹಿಂದೂ ಪರಿಷತ್ ಜಿಲ್ಲಾ ಧರ್ಮ ಪ್ರಚಾರದ ಪ್ರಮುಖ ಜಿ.ಕೆ.ವಿಶ್ವನಾಥ ಚೌಧರಿ, ತಾಲೂಕು ಅಧ್ಯಕ್ಷ ದೇವರಾಜ ಪಾಟೀಲ್, ಬಜರಂಗದಳದ ಜಿಲ್ಲಾ ಸಂಯೋಜಕ ಬಸವರಾಜ ಸಾಲಗುಂದ, ಮುಖ್ಯಶಿಕ್ಷಕ ಸಂಗಯ್ಯ ಸಾಲಿಮಠ, ಪ್ರಮುಖರಾದ ಪ್ರವೀಣಕುಮಾರ, ಮನೋಹರ್ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ವಿಎಚ್‌ಪಿ ಧರ್ಮ ಪ್ರಚಾರದ ಪ್ರಮುಖ ಜಿ.ಕೆ.ವಿಶ್ವನಾಥ ಚೌಧರಿ ಹೇಳಿಕೆ
  • ವೃಕ್ಷರೋಪಣ (ಸಸಿ ನೆಡುವ) ಕಾರ್ಯಕ್ರಮ
ಸಿಂಧನೂರು: ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಬೇಕು. ಪ್ರಸ್ತುತ ನಡೆಯುತ್ತಿರುವ ಪ್ರಕೃತಿ ವಿಕೋಪಗಳಿಗೆ ಪರಿಸರದ ವಿರುದ್ಧದ ಕೆಲಸಗಳೇ ಕಾರಣ ಎಂದು ವಿಶ್ವ ಹಿಂದೂ ಪರಿಷತ್ ಜಿಲ್ಲಾ ಧರ್ಮ ಪ್ರಚಾರದ ಪ್ರಮುಖ ಜಿ.ಕೆ.ವಿಶ್ವನಾಥ ಚೌಧರಿ ಹೇಳಿದರು.
ನಗರದಲ್ಲಿ ವಿಶ್ವ ಹಿಂದೂ ಪರಿಷತ್-ಬಜರಂಗದಳದಿಂದ ಶುಕ್ರವಾರ ಹಮ್ಮಿಕೊಂಡಿದ್ದ ವೃಕ್ಷರೋಪಣ (ಸಸಿ ನೆಡುವ) ಕಾರ್ಯಕ್ರಮದಲ್ಲಿ ಮಾತನಾಡಿದರು. ಸನಾತನ ಧರ್ಮದಲ್ಲಿ ಪ್ರಕೃತಿಯನ್ನು ದೇವರೆಂದು ಪೂಜಿಸಲಾಗುತ್ತದೆ. ಮರ, ಗಿಡ, ನದಿ, ಪರ್ವತಗಳಲ್ಲಿ ದೇವರನ್ನು ಕಾಣುವ ಶ್ರೇಷ್ಠ ಪರಂಪರೆ ಇದೆ.
ಸರಿಯಾದ ಸಮಯಕ್ಕೆ ಮಳೆಯಾಗದೆ ಜಾಗತಿಕ ತಾಪಮಾನ ಹೆಚ್ಚಾಗಿ ಪರಿಸರ ಮಾಲಿನ್ಯ ಮಿತಿಮೀರುತ್ತಿದೆ ಎಂದರು. ತಾಲೂಕು ಅಧ್ಯಕ್ಷ ದೇವರಾಜ ಪಾಟೀಲ್ ಮಾತನಾಡಿ, ಕೇವಲ ಗಿಡ ನೆಡುವುದರಿಂದ ಜವಾಬ್ದಾರಿ ಮುಗಿಯುವುದಿಲ್ಲ. ಸಸಿ ಬೆಳೆಸಿ ನೀರುಣಿಸಿ, ಪೋಷಿಸಬೇಕು ಎಂದರು.
ಬಜರಂಗದಳದ ಜಿಲ್ಲಾ ಸಂಯೋಜಕ ಬಸವರಾಜ ಸಾಲಗುಂದ, ಮುಖ್ಯಶಿಕ್ಷಕ ಸಂಗಯ್ಯ ಸಾಲಿಮಠ, ಪ್ರಮುಖರಾದ ಪ್ರವೀಣಕುಮಾರ್, ಮನೋಹರ್, ನಾಗೇಶ್ ಪವಾರ್, ಶಿವಕುಮಾರ್, ವೀರೇಶ ನಾಯಕ್, ಮಲ್ಲಿಕಾರ್ಜುನ ಪಲ್ಲೇದ್, ಕೆ.ಶಿವಯ್ಯ, ರಾಜು, ದೀಪಾ ಸಾಲಿಮಠ, ವಿಜಯಲಕ್ಷ್ಮೀ ಪಲ್ಲೆದ್, ಸುಜಾತಾ ಮಲ್ಲಾಪುರ, ಸಂಗೀತ, ದೀಪಾ ನಾಯಕ್, ಸುಮಿತ್ರಾ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net