ನಗರದಲ್ಲಿ ಒಂದು ಗ್ಯಾಸ್ ಬಂಕ್ ಆರಂಭ: ಕಿಮೀ ಗಟ್ಟಲೇ ಆಟೋ ರಿಕ್ಷಾ ಕ್ಯೂ

ರಾಯಚೂರಿನ  ಎಲ್ಪಿಜಿ ಗ್ಯಾಸ್ ಬಂಕ್ ಮುಂದೆ ಸಾಲುಗಟ್ಟಿ ನಿಂತ ಆಟೋಗಳು.
ರಾಯಚೂರಿನ ಎಲ್ಪಿಜಿ ಗ್ಯಾಸ್ ಬಂಕ್ ಮುಂದೆ ಸಾಲುಗಟ್ಟಿ ನಿಂತ ಆಟೋಗಳು.
Published on
ರಾಯಚೂರು ಇರಾನ್ ಇಸ್ರೇಲ್ ಯುದ್ದದ ಪರಿಣಾಮದಿಂದ ನಗರದ ಮೂರು ಎಲ್ಪೃಜಿ ಗ್ಯಾಸ್ ಬಂಕ್‌ಗಳು ಬಂದ್ ಅಗಿದ್ದು, ಶನಿವಾರ ಒಂದು ಪ್ರಾರಂಭವಾಗಿದ್ದರಿಂದ ಆಟೋ ಚಾಲಕರುಕೊಂಚ ನಿರಾಳರಾಗಿದ್ದಾರೆ.
ಕಳೆದ ಒಂದು ವಾರದಿಂದ ಸ್ಟಾಕ್ ಇಲ್ಲದೆ, ನಗರದ ಮೂರು ಎಲ್ಪಿಜಿ ಗ್ಯಾಸ್ ಬಂಕ್‌ಗಳು ಬಂದ್ ಅಗಿದ್ದವು. ಗ್ಯಾಸ್‌ಗಾಗಿ ಚಾಲಕರು ಆಟೋಗಳನ್ನು ಬಂಕ್‌ಗಳ ಮುಂದೆ ಸಾಲುಗಟ್ಟಿ ನಿಲ್ಲಿಸಿದ್ದರು. ಕೊನೆಗೂ ಗ್ಯಾಸ್ ಟ್ಯಾಂಕರ್ ಬಂದಿದ್ದು,ಆಟೋ ಚಾಲಕರಿಗೆ ಖುಷಿ ವ್ಯಕ್ತಪಡಿಸಿದ್ದಾರೆ. ಕಳೆದ ಐದಾರು ದಿನಗಳಿಂದ ಅಕ್ಷರಶಃ ನಿರುದ್ಯೋಗಿಗಳಾಗಿದ್ದ ಆಟೋ ಚಾಲಕರು, ಟ್ಯಾಂಕರ್ ಬರುವುದು ತಿಳಿದು ಕಿ.ಮೀ ಗಟ್ಟಲೇ ಆಟೋ ರಿಕ್ಷಾಗಳೊಂದಿಗೆ ಕ್ಯೂ ನಿಂತಿದ್ದಾರೆ.
ನಗರದ ಬಸವೇಶ್ವರ ರಸ್ತೆಯಲ್ಲಿನ ಎಲ್‌ಪಿಜಿ ಗ್ಯಾಸ್‌ಬಂಕ್‌ನಲ್ಲಿ ಬೆಲೆ ಹೆಚ್ಚಳದ ಆತಂಕದ ನಡುವೆಯೂ ಗ್ಯಾಸ್ ತುಂಬಿಸಿಕೊಳ್ಳಲು ನೂರಾರು ಆಟೋಗಳು ಕ್ಯೂ ನಿಂತಿವೆ. ಲೀಟರ್‌ಗೆ 25 ರೂಪಾಯಿ ಹೆಚ್ಚಳವಾಗಿರುವುದಕ್ಕೆ ಆಟೋ ಚಾಲಕರು ಆಕ್ರೋಶಗೊಂಡಿದ್ದಾರೆ. ಲೀಟರ್‌ಗೆ 65 ರೂ ಇದ್ದ ಗ್ಯಾಸ್ ಈಗ ಲೀಟರ್‌ಗೆ 90.59 ರೂ.ಆಗಿದೆ.
ಆಟೋಗಳ ಸಂಖ್ಯೆ ಹೆಚ್ಚು ಇದ್ದಿದ್ದರಿಂದ ಬಂಕ್ ಮಾಲೀಕರು ಒಬ್ಬರಿಗೆ 500 ರೂ. ಗ್ಯಾಸ್ ಮಿತಿ ನಿಗದಿ ಮಾಡಿದ್ದರು. ಆದರೆ ಪುನಃ ಆಟೋಗಳು ಕ್ಯೂ ನಿಲ್ಲುತ್ತಿರುವುದರಿಂದ ಈಗ ಫುಲ್ ಟ್ಯಾಂಕ್ ಹಾಕುತ್ತಿದ್ದಾರೆ. ಸದ್ಯ ಬಂಕ್‌ನಲ್ಲಿ ಶೇಕಡಾ 60 ರಷ್ಟು ಮಾತ್ರ ಗ್ಯಾಸ್ ಸ್ಟಾಕ್ ಇದ್ದು. ಇನ್ನೆರಡು ದಿನ ಮಾತ್ರ ಸಾಕಾಗಲಿದೆ, ಮುಂದೆ ಏನೂ ಅನ್ನೋದು ನಮಗೂ ಗೊತ್ತಿಲ್ಲ ಅಂತ ಬಂಕ್ ಮಾಲೀಕರು ಹೇಳುತ್ತಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net