ಜಿಲ್ಲೆಯ ದೇವದುರ್ಗ ತಾಲೂಕಿನಲ್ಲಿ 4033 ವಿದ್ಯಾರ್ಥಿಗಳು ಹಾಜರು,78 ವಿದ್ಯಾರ್ಥಿಗಳು ಗೈರು, ಲಿಂಗಸುಗೂರು ತಾಲೂಕಿನಲ್ಲಿ 6142 ಹಾಜರು 113 ಗೈರಾಗಿದ್ದಾರೆ, ಮಾನ್ವಿ ತಾಲೂಕಿನಲ್ಲಿ 5413 ವಿದ್ಯಾರ್ಥಿಗಳು ಹಾಜರು ಹಾಗೂ 170 ವಿದ್ಯಾರ್ಥಿಗಳು ಗೈರು. ರಾಯಚೂರು ತಾಲೂಕಿನಲ್ಲಿ 9110 ಹಾಜರಾಗಿದ್ದರೆ 215 ವಿದ್ಯಾರ್ಥಿಗಳು ಗೈರಾಗಿದ್ದಾರೆ ಹಾಗೂ ಸಿಂಧನೂರು ತಾಲೂಕಿನಲ್ಲಿ 5597 ವಿದ್ಯಾರ್ಥಿಗಳು ಹಾಜರಾಗಿದ್ದಾರೆ ಉಳಿದಂತೆ 87 ವಿದ್ಯಾರ್ಥಿಗಳು ಗೈರಾಗಿದ್ದರು. ಒಟ್ಟಾರೆಯಾಗಿ, ದ್ವಿತೀಯ ಪಿಯುಸಿ ಪರೀಕ್ಷೆಯ ಮೊದಲ ದಿನ ಪಟ್ಟಣದಲ್ಲಿ ಯಾವುದೇ ಗೊಂದಲವಿಲ್ಲದೆ ಮುಕ್ತಾಯಗೊಂಡಿದ್ದು, ವಿದ್ಯಾರ್ಥಿಗಳು ನಿರಾಳವಾಗಿ ಮನೆಗೆ ಮರಳಿದರು.