50 ಬೈಕ್ ಕದ್ದಿದ್ದ ಐವರು ಈಗ ಅಂದರ್

ಕಳ್ಳರಿಂದ ಬಳಗಾನೂರು ಪೊಲೀಸ್ ಠಾಣೆ ಪೊಲೀಸರು ವಶಕ್ಕೆ ಪಡೆದ ಬೈಕ್‌ಗಳು.
ಕಳ್ಳರಿಂದ ಬಳಗಾನೂರು ಪೊಲೀಸ್ ಠಾಣೆ ಪೊಲೀಸರು ವಶಕ್ಕೆ ಪಡೆದ ಬೈಕ್‌ಗಳು.
Published on
ಸಿಂಧನೂರು: ಹಲವು ವರ್ಷಗಳಿಂದ ಜಿಲ್ಲೆಯಲ್ಲಿ ಬೈಕ್‌ಗಳನ್ನು ಕದ್ದು ಹೊರ ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ಮಾರಾಟ ಮಾಡುತ್ತಿದ್ದ ಜಾಲವನ್ನು ಬೇಧಿಸುವಲ್ಲಿ ಬಳಗಾನೂರು ಗ್ರಾಮೀಣ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. 
ಆರೋಪಿಗಳಾದ ಚನ್ನಬಸವ ಹೂಗಾರ, ರಾಘವೇಂದ್ರ (ಗಿಂಡಿರಾಘು), ಮೆಹಬೂಬ್ ಮಸ್ಕಿ, ಮಹಮ್ಮದ್ ಲಾಲ್ ಪರಾಪುರ, ರಫೀಕ್ ವಿರುಪಾಪುರ(ಎಪಿ)  ಬಂಧಿಸಿ, 35.20 ಲಕ್ಷ ಮೌಲ್ಯದ 50 ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ನಗರದ ಗ್ರಾಮೀಣ ಠಾಣೆಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಎಸ್ಪಿ ಅರುಣಾಂಗ್ಷು ಗಿರಿ ತಿಳಿಸಿದರು. 
2026ರ ಜ.1ರಂದು ಹನುಮನಗೌಡ ಕ್ಯಾತನಟ್ಟಿ ಎನ್ನುವರ ಮನೆ ಮುಂದೆ ನಿಲ್ಲಿಸಿದ್ದ ರಾಯಲ್ ಎನ್‌ಫೀಲ್ಡ್ ಬೈಕ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳಗಾನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ತನಿಖೆಗೆ ಎಎಸ್ಪಿಗಳಾದ ಎಸ್.ಜೆ.ಕುಮಾರಸ್ವಾಮಿ, ಜಿ.ಹರೀಶ್, ಡಿವೈಎಸ್ಪಿ ಜಿ.ಚಂದ್ರಶೇಖರ ಮಾರ್ಗದರ್ಶನದಲ್ಲಿ ಸಿಪಿಐ ವಿನಾಯಕ ನೇತೃತ್ವದಲ್ಲಿ ಪಿಎಸ್‌ಐ ಎರಿಯಪ್ಪ ಒಳಗೊಂಡ ತಂಡ ರಚಿಸಲಾಗಿತ್ತು. 
ಈ ತಂಡವು ನಿರಂತರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ ವಿಚಾರಿಸಿದಾಗ ಇತರ ಬೈಕ್ ಕಳ್ಳತನ ಪ್ರಕರಣಗಳೂ ಬಯಲಾಗಿವೆ ಎಂದು ತಿಳಿಸಿದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net