ಗುಂಜಳ್ಳಿಕ್ಯಾಂಪ್‌ನ ರಾಜಶೇಖರ ತುರ್ವಿಹಾಳ ನಿರ್ವಹಣೆಯ ನ್ಯಾಯಬೆಲೆ ಅಂಗಡಿಯಲ್ಲಿ ದಾಸ್ತಾನು ಪರಿಶೀಲಿಸಿದಾಗ ಒಟ್ಟು 255 ಚೀಲ ಅಕ್ಕಿ (ಅಂ.127.50 ಕ್ವಿಂಟಾಲ್) ಕಂಡುಬಂದಿದೆ. ದಿನದ ಅಂಗಡಿಯ ಆನ್‌ಲೈನ್ ದಾಸ್ತಾನು ಪರಿಶೀಲಿಸಿದಾಗ ಪ್ರಾರಂಭಿಕ ದಾಸ್ತಾನು ಒಟ್ಟು 81 ಕ್ವಿಂಟಾಲ್ 990 ಕೆ.ಜಿ. ಇದ್ದು, ದೈಹಿಕ ಹಾಗೂ ಆನ್‌ಲೈನ್ ದಾಸ್ತಾನು ತಾಳೆ ಮಾಡಿದಾಗ ಒಟ್ಟು 45.51 ಕ್ವಿಂಟಾಲ್ ಅಕ್ಕಿ ಹೆಚ್ಚುವರಿ ಇರುವುದು ಪತ್ತೆಯಾಗಿದೆ.