

ರಾಯಚೂರು
ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಹುಂಡಿಗಳಿಗೆ ಕಳೆದ 21 ದಿನಗಳಲ್ಲಿ 3.75 ಕೋಟಿ ರೂ. ದೇಣಿಗೆ ಬಂದಿದೆ.
ಶ್ರೀ ಮಠದಲ್ಲಿ ಬುಧವಾರ ಬೆಳಗ್ಗೆಯಿಂದ ಕಾಣಿಕೆ ಎಣಿಕೆ ಕಾರ್ಯ ಆರಂಭಿಸಲಾಗಿದ್ದು, 3.65 ಕೋಟಿ ರೂ. ಮೌಲ್ಯದ ನೋಟುಗಳು ಹಾಗೂ 10.75 ಲಕ್ಷ ರೂ. ನಾಣ್ಯಗಳು ಹಾಗೂ 49 ಗ್ರಾಂ ಚಿನ್ನಾಭರಣ, 865 ಗ್ರಾಂ ಬೆಳ್ಳಿ ಆಭರಣಗಳು ಕಾಣಿಕೆಯಾಗಿ ಭಕ್ತರು ಹುಂಡಿಯಲ್ಲಿ ಹಾಕಿರುವುದು ಎಣಿಕೆ ವೇಳೆ ತಿಳಿದುಬಂದಿದೆಂದು ಶ್ರೀಮಠದ ಮ್ಯಾನೇಜರ ಎಸ್.ಕೆ.ಶ್ರೀನಿವಾಸರಾವ್ ತಿಳಿಸಿದ್ದಾರೆ.