ಇಂದಿನಿಂದ ರಾಯರ 355ನೇ ಆರಾಧನಾ ಮಹೋತ್ಸವ

ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದ ಹೊರನೋಟ
ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದ ಹೊರನೋಟ
Published on

ಪ್ರಮುಖ ಮುಖ್ಯಾಂಶಗಳು

  • ಸಪ್ತಾರಾತ್ರೋತ್ಸವಕ್ಕೆ ಶ್ರೀಗಳಿಂದ ಚಾಲನೆ
  • ಕ್ಷೇತ್ರ ಸಂಚಾರಕ್ಕೆ ಉಚಿತ ಬಸ್ ಸಂಚಾರ
ರಾಯಚೂರು

ರಾಯರ ಸನ್ನಿಯಲ್ಲಿ ಆ.27 ರಿಂದ ಸೆ.02 ರವರೆಗೆ ಸಪ್ತಾರಾತ್ರೋತ್ಸವ ಹೆಸರಿನಲ್ಲಿ ನಡೆಯುವ ರಾಘವೇಂದ್ರ ಸ್ವಾಮೀಗಳ 355ನೇ ಆರಾಧನಾ ಮಹೋತ್ಸವಕ್ಕೆ ಮಂತ್ರಾಲಯ ಅಣಿಯಾಗಿದ್ದು, ಈ ಬಾರಿ ಆರಾಧನಾ ಮಹೋತ್ಸವ ಕಣ್ಣುಂಬಿಕೊಳ್ಳಲು ಕರ್ನಾಟಕ, ತೆಲಂಗಾಣ ಹಾಗೂ ಆಂಧ್ರಪ್ರದೇಶ,ತಮಿಳುನಾಡು ಸೇರಿದಂತೆ ದೇಶಾದ್ಯಂತ ಲಕ್ಷಂತರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ.

ಶ್ರೀ ರಾಘವೇಂದ್ರಸ್ವಾಮಿಗಳ ಆರಾಧನಾ ಮಹೋತ್ಸವಕ್ಕೆ ದೇಶ ವಿದೇಶಗಳಿಂದ ಲಕ್ಷಾಂತರ ಭಕ್ತರು ಆಗಮಿಸುವ ಹಿನ್ನಲೆಯಲ್ಲಿ ಶ್ರೀಮಠ ಈ ಬಾರಿಯು ಹೆಚ್ಚಿನ ಸೌಲಭ್ಯ ಸೃಷ್ಟಿಸಿದೆ. ಕರ್ನಾಟಕ ರಾಜ್ಯದಲ್ಲಿ ಮಹಿಳೆಯರಿಗೆ ಸರ್ಕಾರ ಉಚಿತ ಪ್ರಯಾಣದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿರುವ ಕಾರಣದಿಂದ ಕ್ಷೇತ್ರದಲ್ಲಿ ಸಂಭ್ರಮ ಮನೆಮಾಡಿದೆ. ಮಠವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ಮುಂದಿನ ವಾರಪೂರ್ತಿ ರಾಯರ ಭಕ್ತರ ಸಂಭ್ರಮಕ್ಕೆ ಪಾರವೇ ಇಲ್ಲ.
ಯಾತ್ರಿ ನಿವಾಸಗಳು ಭರ್ತಿ
ಈ ಬಾರಿ ರಾಯರ ಆರಾಧನೆಯು ತಿಂಗಳ ಕೊನೆಯಲ್ಲಿ ಶನಿವಾರ,ಭಾನುವಾರ ಬಂದಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಈ ಹಿನ್ನಲೆಯಲ್ಲಿ ಒಂದು ತಿಂಗಳ ಮೊದಲೆ ರೂಮ್‌ಗಳನ್ನು ಬುಕ್ ಮಾಡಿದ್ದರಿಂದ ಯಾತ್ರಿನಿವಾಸಗಳು, ಮಂಗಲ ಕಾರ್ಯಾಲಯಗಳು ಹಾಗೂ ಹೋಟೆಲ್‌ಗಳು ಭರ್ತಿಯಾಗಿವೆ. ಶ್ರೀಮಠ ಹಾಗೂ ಆವರಣವನ್ನು ಶುಚಿಗೊಳಿಸಿ ಸುಣ್ಣ-ಬಣ್ಣದಿಂದ ಅಲಂಕರಿಸಲಾಗಿದೆ. ಮಠದ ಆವರಣದಲ್ಲಿ ಬೃಹದಾಕಾರದ ರಂಗೋಲಿಗಳನ್ನು ಬಿಡಿಸಲಾಗಿದೆ. ಮಂತ್ರಾಲಯದ ವಸತಿ ಗೃಹಗಳು ಭಕ್ತರಿಂದ ತುಂಬಿತುಳುಕುತ್ತಿವೆ. ಶ್ರೀಮಠದ ಪರಿಸರದಲ್ಲಿ ಕೊಠಡಿಗಳು ದೊರೆಯದ ಕಾರಣ ಅನೇಕ ಜನ ರಾಯಚೂರಿನ ಹೋಟೆಲ್‌ಗಳನ್ನು ಬುಕ್ ಮಾಡಿದ್ದಾರೆ. ಶ್ರೀಮಠದ ಪೀಠಾಪತಿ ಶ್ರೀ ಸುಭುದೇಂದ್ರ ತೀರ್ಥರ ನೇತೃತ್ವದಲ್ಲಿ ಒಂದು ವಾರ ಪ್ರತಿದಿನ ಸಂಜೆ ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಅನುಗ್ರಹ ಸಂದೇಶ ನೀಡಲಿದ್ದಾರೆ.
ಕ್ಷೇತ್ರ ಸಂಚಾರಕ್ಕೆ 6 ಬಸ್‌ಗಳಿಂದ ಪ್ರಯಾಣ
ಮಂತ್ರಾಲಯದ ರಾಯರ ದರ್ಶನಕ್ಕೆ ವರ್ಷದಿಂದ ವರ್ಷ ಭಕ್ತರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಕ್ಷೇತ್ರ ವಿಕ್ಷೇಣೆಗಾಗಿ ಮೊದಲ ಬಾರಿಗೆ ಒಂದು ವಾರ ಪೂರ್ತಿ 6 ಉಚಿತ ಸಾರಿಗೆ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಈ ಬಸ್‌ಗಳು ನದಿ ಪಾತ್ರ, ರಾಮಮಂದಿರ, ಅಂಜನೇಯ ದೇವಸ್ಥಾನ ಹಾಗೂ ಗೋ ಶಾಲೆ ತೋರಿಸಿಕೊಂಡು ರಾಯರ ಸನ್ನಿಧಿಗೆ ಮರುಳಲಿದೆ. ಇದರಿಂದ ಭಕ್ತಾಧಿಗಳಿಗೆ ಪ್ರಯಾಣದ ವೆಚ್ಚ ಕಡಿಮೆ ಮಾಡಲಿದೆ.
ಹೆಚ್ಚಿದ ಸ್ವಯಂ ಸೇವಕರು
ವರ್ಷದಿಂದ ವರ್ಷಕ್ಕೆ ಮಂತ್ರಾಲಯದ ಭಕ್ತರ ಸಂಖ್ಯೆ ಹೆಚ್ಚಳ ವಾದಂತೆ ಸ್ವಯಂ ಸೇವಕರ ಸಂಖ್ಯೆ ಹೆಚ್ಚಳವಾಗಿದ್ದು, ಶ್ರೀಮಠದಲ್ಲಿ ಪರಿಮಳ ಪ್ರಸಾದ ವಿತರಣೆಗೆ ಸಕಲ ಸಿದ್ಧತೆ ಮಾಡಲಾಗಿದ್ದು, ಸುಮಾರು 20ಕ್ಕೂ ಅಧಿಕ ಪ್ರತ್ಯೇಕ ಕೌಂಟರ್ ಮಾಡಲಾಗಿದೆ. ಆದರಂತೆ ಮಹಿಳೆಯರು ರಂಗೋಲಿ, ಮಾಲೆಗಳ ತಯಾರಿ ಇನ್ನಿತರ ತಯಾರಿಯಲ್ಲಿ ತೊಡಗಿದರೆ, ಪುರುಷರು ಇಲ್ಲಿಗೆ ಬರುವ ಭಕ್ತರಿಗೆ ಸಕಲ ವ್ಯವಸ್ಥೆ ಮಾಡುವಲ್ಲಿ ನಿರತರಾಗಿದ್ದಾರೆ. ಹೊರ ರಾಜ್ಯಗಳಿಂದ ಸ್ವಯಂ ಸೇವಕರು ಇಲ್ಲಿಗೆ ಬಂದಿದ್ದು , ಶ್ರೀಮಠ ಸ್ವಯಂ ಸೇವಕರಿಗೆ ಪ್ರತ್ಯೇಕವಾಗಿ ವಸತಿ ಸೌಲಭ್ಯಗಳನ್ನು ನೀಡಿದೆ. ಜತೆಗೆ ಈ ಬಾರಿ ಸ್ಚಚ್ಚತೆಗೆ ಹೆಚ್ಚಿನ ಆಧ್ಯತೆ ನೀಡಲಾಗಿದ್ದು,ಭಕ್ತರಿಗಾಗಿ ಮೂಭೂತ ಸೌಕರ್ಯಗಳು, ವಿದ್ಯುತ್ ವ್ಯತ್ಯಯವಾದಾಗ ಪರ್ಯಾಯ ವಿದ್ಯುತ್ ವ್ಯವಸ್ಥೆಯನ್ನು ಮಾಡಲಾಗಿದೆ. ಭದ್ರತೆ ಹಾಗೂ ನೈರ್ಮಲ್ಯದ ಬಗ್ಗೆ ವಿಶೇಷ ಗಮನಹರಿಸಲಾಗಿದೆ.ಆರಾಧನಾ ಮಹೋತ್ಸವದ ನಿಮಿತ್ತ ಭಕ್ತರಿಗಾಗಿ ಹಲವೆಡೆ ತಾತ್ಕಾಲಿಕ ಶೌಚಾಲಯ ಹಾಗೂ ಹೆಚ್ಚುವರಿ ಶೌಚಾಲಯಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ದಿನದ 24 ಗಂಟೆ ಉಚಿತ ವೈದ್ಯಕೀಯ ಸೇವೆ, ಆಂಬುಲೆನ್ಸ್ ವ್ಯವಸ್ಥೆ,ಮಾಡಲಾಗಿದೆ. ಭಕ್ತರ ಸಂಚಾರಕ್ಕೆ ಆಗಮಿಸಲು ಅನುಕೂಲವಾಗುವಂತೆ ಕರ್ನಾಟಕ, ಆಂದ್ರಪ್ರದೇಶ, ತೆಲಂಗಾಣ ರಾಜ್ಯದಿಂದ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಲಾಗಿದೆ.
ತಿರುಪತಿ ಮಾದರಿಯಲ್ಲಿ ದರ್ಶನ
ರಾಯರ ಆರಾಧನೆ ವೇಳೆ ಲಕ್ಷಾಂತರ ಭಕ್ತರು ಆಗಮಿಸುವುದರಿಂದ ಎಲ್ಲರಿಗೆ ರಾಯರ ಬೃಂದಾವನದ ದರ್ಶನಕ್ಕೆ ತೊಂದರೆಯಾಗದಂತೆ ಗಮನಹರಿಸಲು ಆಡಳಿತ ಮುಂದಾಗಿದ್ದು, ಮಠದ ಪ್ರಾಕಾರದೊಳಗೆ ಭಕ್ತರ ನೂಕುನುಗ್ಗಲು ಆಗುವುದರಿಂದ ಆರಾಧನೆಯ ವೇಳೆ ಉತ್ಸವಗಳಿಗೆ, ಪ್ರದಕ್ಷಿಣೆ ಮಾಡುವವರಿಗೆ ತೊಂದರೆಯಾಗಬರದೆಂದು ತಿರುಪಾತಿ ಮಾದರಿಯಲ್ಲಿ ಭಕ್ತರಿಗೆ ಬೃಂದಾವನ ದರ್ಶನಕ್ಕೆ ಸರಳ ಮಾರ್ಗೋಪಾಯದ ಯೋಜನೆ ಜಾರಿಗೆ ತಂದಿದೆ. ಮಠದ ಮುಂಭಾಗ ಹಾಗೂ ಪ್ರಾಕಾರದ ಹಿಂಭಾಗದ ವಿಶಾಲವಾದ ಪ್ರದೇಶದಲ್ಲಿ ಭಕ್ತರನ್ನು ಸಾಲಾಗಿ ನಿಲ್ಲುವಂಥ ವ್ಯವಸ್ಥೆ ಮಾಡಿದ್ದು, ಪ್ರಾಕಾರದೊಳಗೆ ಸಾಲಾಗಿ ತೆರಳಿ ದರ್ಶನದ ಗೇಟ್ ಪ್ರವೇಶಕ್ಕೆ ಅವಕಾಶ ಮಾಡಲಾಗಿದೆ.
((ಬಾಕ್ಸ್ ಮಾಡಿ))
ಆ.27 ರಂದು ಶ್ರೀಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ರಾಯರ 355 ನೇ ಆರಾಧನೆಯ ಸಪ್ತಾರಾತ್ರೋತ್ಸವಕ್ಕೆ ಸಂಜೆ 7 ಗಂಟೆಗೆ ಧ್ವಜಾರೋಹಣ, ಗೋ ಪೂಜೆ, ಅಶ್ವಪೂಜೆ, ಧಾನ್ಯೋತ್ಸವದೊಂದಿಗೆ ಆರಾಧನೆಗೆ ಚಾಲನೆ ನೀಡಲಿದ್ದಾರೆ. ನಂತರ ರಾಯರ ಮೂಲ ಬೃಂದಾವನಕ್ಕೆ ವಿಶೇಷ ಪೂಜೆ ಸಲ್ಲಿಸಿ ಭಕ್ತರಿಗೆ ಅನುಗ್ರಹ ಸಂದೇಶ ನೀಡಲಿದ್ದಾರೆ.
ಮಂತ್ರಾಲಯದ ಶ್ರೀ ರಾಯರ ಆರಾಧನಾ ಮಹೋತ್ಸವಕ್ಕೆ ಶ್ರಿಮಠದ ಆಡಳಿತ ಸಂಪೂರ್ಣ ಸನ್ನದ್ಧವಾಗಿದೆ. ಶ್ರೀ ಮಠದ ಸಿಬ್ಬಂದಿಯಷ್ಟೆೆ ಅಲ್ಲದೆ ಸಾವಿರಾರು ಸೇವಾಕರ್ತರು ರಾಯರ ಸೇವೆಗೆ ಸ್ವಯಂಸೂರ್ತಿಯಿಂದ ಮುಂದಾಗಿದ್ದಾರೆ. ಭಕ್ತರಿಗೆ ಯಾವುದೇ ರೀತಿಯಿಂದ ತೊಂದರೆಯಾಗದಂತೆೆ ಸೌಲಭ್ಯ ಕಲ್ಪಿಸಲು ತುದಿಗಾಲ ಮೇಲೆ ನಿಂತಿದ್ದಾರೆ. ಜತೆಗೆ ರಾಯರ ಕ್ಷೇತ್ರದ ವಿವಿಧ ದೇವಸ್ಥಾನಗಳ ಸಂಚಾರಕ್ಕಾಗಿ 6 ಉಚಿತ ಬಸ್ ಬಸ್ ವ್ಯವಸ್ಥೆ ಮಾಡಲಾಗಿದೆ.
ಶ್ರೀ ಸುಬುಧೇಂದ್ರ ತೀರ್ಥರು ಪೀಠಾಧಿಪತಿ ಶ್ರೀ ರಾಘವೇಂದ್ರ ಮಠ ಮಂತ್ರಾಲಯ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net