26 ಗೋವುಗಳ ರಕ್ಷಣೆ, ಗೋಶಾಲೆಗೆ ರವಾನೆ

ರಕ್ಷಣೆ ಮಾಡಿದ ಗೋವುಗಳು.
ರಕ್ಷಣೆ ಮಾಡಿದ ಗೋವುಗಳು.
Published on

ಮುನಿರಾಬಾದ್: ಹಿಟ್ನಾಳ ಟೋಲ್ ಪ್ಲಾಜಾ ಬಳಿ ಸೋಮವಾರ ತಡರಾತ್ರಿ ಲಾರಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 26 ಗೋವುಗಳನ್ನು ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ರಕ್ಷಿಸಿ, ಪೊಲೀಸರಿಗೆ ಒಪ್ಪಿಸಿದ್ದಾರೆ. 

ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿಯಿಂದ ಕೇರಳ ಕಡೆಗೆ ತೆರಳುತ್ತಿದ್ದ ಲಾರಿಯಲ್ಲಿ ಗೋವುಗಳನ್ನು ಗಾಳಿ-ಬೆಳಕು, ನೀರು ಹಾಗೂ ಆಹಾರವಿಲ್ಲದೆ ಅಮಾನವೀಯವಾಗಿ ತುಂಬಲಾಗಿತ್ತು. 

ಖಚಿತ ಮಾಹಿತಿ ಮೇರೆಗೆ ಕಾರ್ಯಕರ್ತರು ಲಾರಿ ತಡೆದು ಪರಿಶೀಲಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 

ಸ್ಥಳಕ್ಕೆ ಬಂದ 112 ತುರ್ತು ವಾಹನದ ಸಿಬ್ಬಂದಿ ಗೋವುಗಳನ್ನು ರಕ್ಷಿಸಿ ಕೊಪ್ಪಳದ ಜೈನ್ ಗೋಶಾಲೆಗೆ ರವಾನಿಸಿದ್ದಾರೆ. ಈ ಕುರಿತು ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net