ಸೆ.16 ರಿಂದ 20ರವರೆಗೆ 13 ನೇ ರಾಷ್ಟ್ರೀಯ ಮಹಾಧಿವೇಶ

ಆರ್.ಮಾನಸಯ್ಯ
ಆರ್.ಮಾನಸಯ್ಯ
Published on
ರಾಯಚೂರು
ಭಾರತ ಕಮ್ಯೂನಿಷ್ಟ ಪಾರ್ಟಿ ರೆಡ್ ಸ್ಟಾರ್ ಪಕ್ಷದ 13 ನೇ ರಾಷ್ಟ್ರೀಯ ಮಹಾಧಿವೇಶವು ಸೆ.16 ರಿಂದ 20 ವರೆಗೆ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆಯಲಿದ್ದು, ದೇಶ ವಿದೇಶಗಳಿಂದ 300 ಜನ ಪ್ರತಿನಿಧಿಗಳು ಭಾಗವಹಿಸಲಿದ್ದಾರೆಂದು ಪಕ್ಷದ ಪಾಲಿಟ್ ಬುರೋ ಸದಸ್ಯ ಆರ್.ಮಾನಸಯ್ಯ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ. ಸೆ.16 ರಂದು ಉದ್ಘಾಟನಾ ಅಧಿವೇಶ, ಸೆ.18 ಮತ್ತು 19 ರಂದು ಬಹಿರಂಗ ಸಭೆ, ಸಮಾಲೋಚನೆಗಳು ನಡೆಯಲಿವೆ. ಸೆ.17 ರಿಂದ 20ವರೆಗೆ ಪ್ರತಿನಿಧಿ ಅಧಿವೇಶನ ಡಾ.ಬಿ.ಆರ್. ಅಂಬೇಡ್ಕರ ಭವನದಲ್ಲಿ ನಡೆಯಲಿದೆ. ಪ್ಯಾಲೆನಿಸ್ತೇನಿಯಾ, ಇರಾನ್ ಸೇರಿದಂತೆ ಏಷಿಯಾ, ಆಫ್ರಿಕಾ, ದಕ್ಷಿಣ ಅಮರಿಕಾ ಸೇರಿದಂತೆ 62 ಕಮ್ಯುನಿಷ್ಟ ಪಕ್ಷಗಳ ಮುಖಂಡರನ್ನು ಆಹ್ವಾನಿಸಲಾಗಿದೆ.
ಸಾಮಾಜ್ಯಶಾಹಿ ಯುದ್ಧದ ಕುರಿತು ಅಂತರಾಷ್ಟ್ರೀಯ ವಿಚಾರ ಸಂಕಿರಣ, ಆರ್‌ಎಸ್‌ಎಸ್ ಫ್ಯಾಸಿಸಂಸೋಲಿಸುವ ಸವಾಲುಗಳು, ಜಾತಿ ನಿರ್ಮೂಲನೆ ಹೋರಾಟ ಕುರಿತು ಎರಡು ವಿಚಾರ ಸಂಕೀರಣ ನಡೆಯಲಿವೆ. ಸಂಸದ ಚಂದ್ರಶೇಖರ ಆಜಾದ್, ಪ್ರಕಾಶರಾಜ್ ಅಂಬೇಡ್ಕರ್, ಪ್ರಕಾಶ ರಾವಣ ಸೇರಿದಂತೆ ಅನೇಕರು ಎಡ ಚಿಂತಕರು ಭಾಗವಹಿಸುವ ನಿರೀಕ್ಷೆಯಿದೆ ಎಂದರು.

ಮಹಾ ಅಧಿವೇಶನದ ಸ್ವಾಗತ ಸಮಿತಿ ಅಧ್ಯಕ್ಷ ರಾಘವೇಂದ್ರ ಕುಷ್ಟಗಿ ಮಾತನಾಡಿ, ಎಡ ಮತ್ತು ಪ್ರಜಾಸತ್ತಾತ್ಮಕವಾದ ವಿಚಾರಗಳ ಕುರಿತು ಒಂದು ವಾರ ಕಾಲ ನಗರದಲ್ಲಿ ಸಿಪಿಐ(ಎಂಎಲ್) ರೆಡ್‌ಸ್ಟಾರ್ ಮಹಾಧೀಶವನ ಎಡಚಳುವಳಿಗೆ ಹೊಸ ಸ್ಫೂರ್ತಿ ನೀಡುವ ನಿರೀಕ್ಷೆಯಿಂದ ದೇಶ ವಿದೇಶಿಗಳಿಂದ ಹೋರಾಟಗಾರು, ಎಡ ಚಿಂತಕರು ಭಾಗವಹಿಸಲಿದ್ದಾರೆ. ಮಹಾಧೀವೇಶನ ಯಶಸ್ವಿಗೆ ಯುವ ಜನರು, ಹೋರಾಟಗಾರರು,ವಿದ್ಯಾರ್ಥಿಗಳು ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದರು.

ಈ ಸಂದರ್ಭದಲ್ಲಿ ಸ್ವಾಗತ ಸಮಿತಿ ಉಪಾಧ್ಯಕ್ಷ ರವೀಂದ್ರ ನಾಥ ಪಟ್ಟಿ, ಸಂಚಾಲಕರಾದ ಎಂ. ಗಂಗಾಧರ, ಬಾಬು ಬಂಡಾರಿಗಲ್, ಬಿ.ಬಸವರಾಜ, ಜೆ.ಬಿ.ರಾಜು, ಮಾಬೂಸಾಬ, ಮಣಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net