ಕಳ್ಳರಿಂದ 13 ಗ್ರಾಂ ಚಿನ್ನ, 33 ಗ್ರಾಂ ಬೆಳ್ಳಿ ಜಪ್ತಿ

ರುದ್ರಗೌಡ, ಶಿವಪ್ಪ
ರುದ್ರಗೌಡ, ಶಿವಪ್ಪ
Published on
ಮಸ್ಕಿ: ತಾಲೂಕಿನ ಬಳಗಾನೂರಿನಲ್ಲಿ ನಡೆದ ಕಳ್ಳತನಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಸ್ಥಳೀಯ ಪೊಲೀಸರು ಬುಧವಾರ ಬಂಧಿಸಿದ್ದಾರೆ. 
ಹೆಡಗಿನಾಳದ ಶಿವಪ್ಪ ಗಿಡ್ಡ ಹಾಗೂ ರುದ್ರಗೌಡ ಬಂಧಿತರು. ಇವರಿಂದ 13 ಗ್ರಾಂ ಚಿನ್ನ, 33 ಗ್ರಾಂ ಬೆಳ್ಳಿ ಹಾಗೂ 20 ಸಾವಿರ ನಗದು ವಶಪಡಿಸಿಕೊಂಡಿದ್ದಾರೆ. 
ಕಳ್ಳತನಕ್ಕೆ ಪ್ರಕರಣಕ್ಕೆ ಸಂಬಂಧಿಸಿ ಎಸ್ಪಿ ಅರುಣಾಂಗ್ಶು ಗಿರಿ, ಎಎಸ್ಪಿಗಳಾದ ಎಸ್.ಜೆ ಕುಮಾರಸ್ವಾಮಿ ಮತ್ತು ಹರೀಶ ಜಿ. ಹಾಗೂ ಡಿಎಸ್ಪಿ ಚಂದ್ರಶೇಖರ ಮಾರ್ಗದರ್ಶನಲ್ಲಿ ಸಿಪಿಐ ವಿನಾಯಕ, ಬಳಗಾನೂರು ಪಿಎಸ್‌ಐ ಎರಿಯಪ್ಪ ಅಂಗಡಿ ಹಾಗೂ ಪೊಲೀಸರು ಕಾರ‌್ಯಚರಣೆ ನಡೆಸಿದ್ದರು. 
ತ್ವರಿತವಾಗಿ ಕಳ್ಳತನ ಪ್ರಕರಣ ಭೇದಿಸಿದ್ದಕ್ಕೆ ಎಸ್ಪಿ ಅಭಿನಂದಿಸಿದ್ದಾರೆ.  
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net