ಭಕ್ತರ ಬಗ್ಗೆ ಎಚ್ಚರಿಕೆವಹಿಸಿದ್ದು ಗ್ರಾಪಂ ಆಡಳಿತ ಡಂಗುರ ಸಾರಿದೆ. ನದಿಗೆ ಬಿಡುವ ನೀರು 1.50 ಲಕ್ಷ ಕ್ಯೂಸೆಕ್‌ಗೆ ಏರಿಕೆಯಾದರೆ ಸುಮಾರು 5ಸಾವಿರ ಜಮೀನಿಗೆ ನೀರು ನುಗ್ಗುವ ಸಾಧ್ಯತೆಯಿದೆ. ನರೆಬಾಧಿತ ಗ್ರಾಮಗಳೆಂದು ಗುರುತಿಸಿದ ಅಂಜಳ, ಹಿರೇರಾಯಕುಂಪಿ, ಕೊಪ್ಪರ, ಕರ್ಕಿಹಳ್ಳಿ, ಲಿಂಗದಹಳ್ಳಿ, ಮುದಗೋಟ, ಪರ್ತಪುರ, ಬಸವಂತಪುರ, ಮ್ಯಾದರಗೋಳ, ಹೂವಿನಹೆಡಗಿ, ಜೋಳದಹೆಡಗಿ ಸೇರಿ ವಿವಿಧೆಡೆ ತಾಲೂಕು ಆಡಳಿತ ಮುನ್ನೆಚ್ಚರಿಕೆವಹಿಸಿದೆ. ಇದಲ್ಲದೆ ನದಿದಂಡೆ ಮೇಲಿನ 42 ಹಳ್ಳಿಗಳನ್ನು ಗುರುತಿಸಿದ್ದು ಯಾವುದೇ ಕಾರಣಕ್ಕೂ ನದಿಗೆ ಇಳಿಯದಂತೆ ರೈತರು, ಗ್ರಾಮಸ್ಥರಿಗೆ ಎಚ್ಚರಿಕೆ ನೀಡಲಾಗಿದೆ.