ಮತಗಳ್ಳತನದಿಂದ ಅಧಿಕಾರಕ್ಕೆ ಬಂದ ಬಿಜೆಪಿ

ತುರ್ವಿಹಾಳ ಪಟ್ಟಣದಲ್ಲಿ ವೋಟ್ ಚೋರಿ ವಿರುದ್ಧ ಸಹಿ ಸಂಗ್ರಹ ಅಭಿಯಾನ ನಡೆಯಿತು. ಶಾಸಕ ಆರ್.ಬಸನಗೌಡ ತುರ್ವಿಹಾಳ, ಕೆಪಿಸಿಸಿ ಕಾರ್ಯದರ್ಶಿ ಎಂ.ಡಿ ಫಾರೂಖಸಾಬ್ ಖಾಜಿ, ಕೆಪಿಸಿಸಿ ಸದಸ್ಯ ನಲ್ಲಾ ವೆಂಕಟೇಶ್ವರಾವ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ನಿರುಪಾದೆಪ್ಪ ವಕೀಲ, ಅಂದಾನಪ್ಪ ಗುಂಡಳ್ಳಿ ಮಸ್ಕಿ, ಕೆಪಿಸಿಸಿ ಸದಸ್ಯ ಸಿದ್ದ್ಧನಗೌಡ ಮಾಟೂರು ಇತರರಿದ್ದರು.
ತುರ್ವಿಹಾಳ ಪಟ್ಟಣದಲ್ಲಿ ವೋಟ್ ಚೋರಿ ವಿರುದ್ಧ ಸಹಿ ಸಂಗ್ರಹ ಅಭಿಯಾನ ನಡೆಯಿತು. ಶಾಸಕ ಆರ್.ಬಸನಗೌಡ ತುರ್ವಿಹಾಳ, ಕೆಪಿಸಿಸಿ ಕಾರ್ಯದರ್ಶಿ ಎಂ.ಡಿ ಫಾರೂಖಸಾಬ್ ಖಾಜಿ, ಕೆಪಿಸಿಸಿ ಸದಸ್ಯ ನಲ್ಲಾ ವೆಂಕಟೇಶ್ವರಾವ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ನಿರುಪಾದೆಪ್ಪ ವಕೀಲ, ಅಂದಾನಪ್ಪ ಗುಂಡಳ್ಳಿ ಮಸ್ಕಿ, ಕೆಪಿಸಿಸಿ ಸದಸ್ಯ ಸಿದ್ದ್ಧನಗೌಡ ಮಾಟೂರು ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವೋಟ್ ಚೋರಿ
  • ಸಹಿ ಸಂಗ್ರಹ
ಸಿಂಧನೂರು, ತುರ್ವಿಹಾಳ, ವೋಟ್ ಚೋರಿ, ಸಹಿ ಸಂಗ್ರಹ Sindhanur Turvihal vote theft signature collection

ಮತಗಳ್ಳತನದಿಂದ ಅಧಿಕಾರಕ್ಕೆ ಬಂದ ಬಿಜೆಪಿ

ಸಿಂಧನೂರು: ಬಿಜೆಪಿಯವರು ಮತಗಳ್ಳತನದ ಮೂಲಕ ಮೋಸ ಮಾಡುತ್ತಿದ್ದಾರೆ. ಈ ಮೂಲಕವೇ ಕೇಂದ್ರದಲ್ಲಿ ಆಡಳಿತ ಹಿಡಿಯಲಾಗಿದೆ ಎಂದು ಶಾಸಕ ಬಸನಗೌಡ ತುರ್ವಿಹಾಳ ಆರೋಪಿಸಿದರು.
ತಾಲೂಕಿನ ತುರ್ವಿಹಾಳ ಪಟ್ಟಣದ ಶಾಸಕರ ಕಚೇರಿಯಲ್ಲಿ ಆಯೋಜಿಸಿದ್ದ ವೋಟ್ ಚೋರಿ ವಿರುದ್ಧ ಸಹಿ ಸಂಗ್ರಹ ಅಭಿಯಾನದಲ್ಲಿ ಮಾತನಾಡಿದರು. ಕಾಂಗ್ರೆಸ್ ಪಕ್ಷ ಎಷ್ಟೇ ಅಭಿವೃದ್ಧಿ ಕೆಲಸ ಮಾಡಿದರೂ ಚುನಾವಣೆಯಲ್ಲಿ ಅತಿ ಕಡಿಮೆ ಅಂತರದಲ್ಲಿ ಗೆಲುವು, ಸೋಲು ಅನುಭವಿಸುತ್ತಿದ್ದು, ಇದಕ್ಕೆ ಮತಗಳ್ಳತನವೇ ಕಾರಣ. ಈ ಬಗ್ಗೆ ನಮ್ಮ ನಾಯಕ ರಾಹುಲ್ ಗಾಂಧಿ ಸಾಕ್ಷಿ ಸಮೇತ ವರದಿ ನೀಡಿದ್ದಾರೆ. ದೇಶದಲ್ಲಿ ಕಾಂಗ್ರೆಸ್ 70 ವರ್ಷಗಳ ಕಾಲ ಆಡಳಿತ ನಡೆಸಿದಾಗ ಮತಗಳ್ಳತನದ ಕೆಟ್ಟ ಸಂಪ್ರದಾಯ ಇದ್ದಿಲ್ಲ. ಆದರೆ, ಬಿಜೆಪಿ ಪಕ್ಷ ಕೇವಲ 12 ವರ್ಷದ ಆಡಳಿತದಲ್ಲಿ ಮತಗಳ್ಳತನದ ಸಂಪ್ರದಾಯ ಹುಟ್ಟು ಹಾಕಿದ್ದು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮತದಾರರ ಸಹಿ ಸಂಗ್ರಹ ಅಭಿಯಾನದ ಮೂಲಕ ಪಾಠ ಕಲಿಸಬೇಕಾಗಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್ ಯದ್ದಲದಿನ್ನಿ ಮಾತನಾಡಿ, ಬಿಜೆಪಿಯ ಮತಗಳ್ಳತನ ಇದೇ ರೀತಿ ಮುಂದುವರಿದರೆ ಮುಂಬರುವ ದಿನಗಳಲ್ಲಿ ಅಧಿಕಾರಕ್ಕೆ ಬರುವ ಸಾಧ್ಯತೆ ಹೆಚ್ಚಾಗಲಿದೆ. ಅದಕ್ಕಾಗಿ ನಾವು ಪ್ರತಿ ಬೂತ್‌ನಲ್ಲಿ 150 ರಿಂದ 200 ಜನ ಮತದಾರರ ಸಹಿ ಸಂಗ್ರಹಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸೋಣ ಎಂದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷ ಬಾಪುಗೌಡ ದೇವರಮನಿ, ಕೆಪಿಸಿಸಿ ಸದಸ್ಯ ನಲ್ಲಾ ವೆಂಕಟೇಶ್ವರರಾವ್, ಕಾಂಗ್ರೆಸ್ ಜಿಲ್ಲಾ ಘಟಕದ ಉಪಾಧ್ಯಕ್ಷರಾದ ನಿರುಪಾದೆಪ್ಪ ವಕೀಲ, ಅಂದಾನಪ್ಪ ಗುಂಡಳ್ಳಿ ಮಸ್ಕಿ ಮಾತನಾಡಿದರು. ಕೆಪಿಸಿಸಿ ಕಾರ್ಯದರ್ಶಿ ಎಂ.ಡಿ ಫಾರೂಖ್ ಸಾಬ್ ಖಾಜಿ, ಸದಸ್ಯ ಸಿದ್ದನಗೌಡ ಮಾಟೂರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತಪ್ಪ ಮುದ್ದಾಪುರ, ಪಪಂ ಮಾಜಿ ಅಧ್ಯಕ್ಷ ಶಾಮೀದ್‌ಸಾಬ್, ಪ್ರಮುಖರಾದ ಮೌಲಪಯ್ಯ ಗುತ್ತಿಗೆದಾರ, ಮೈಬುಸಾಬ್ ಮುದ್ದಾಪುರ, ಶೇಖರಗೌಡ ದೇವರಮನಿ, ಗುಳಪ್ಪ ಕುಂಟೋಜಿ, ಭೀಮಣ್ಣ ಉಪ್ಪಲದೊಡ್ಡಿ, ಹನುಮಂತಗೌಡ ಧುಮತಿ, ಕರಿಯಪ್ಪ ವಿರುಪಾಪುರ, ಸೋಮನಾಥ ಮಾಟೂರು, ಯಲ್ಲಪ್ಪ ಭೋವಿ, ಹನುಮೇಶ ಗೋಡಿ, ಶಾಮೀದ್ ಅಲಿ, ಅರವಿಂದರೆಡ್ಡಿ, ರಾಮಣ್ಣ ಉಪ್ಪಾರ, ಅಯ್ಯಣ್ಣ ರಾರಾವಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net