

ರಾಯಚೂರು: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಬಗ್ಗೆ ಅವಹೇಳನಕಾರಿ ಪದ ಬಳಕೆ ಮಾಡಿರುವ ಸಚಿವ ಜಮೀರ್ ಅಹ್ಮದ್ ಖಾನ್ ಅವರಿಂದ ಕೂಡಲೇ ರಾಜ್ಯ ಸರ್ಕಾರ ಸಚಿವ ಸ್ಥಾನಕ್ಕೆ ರಾಜಿನಾಮೆ ಪಡೆಯುವಂತೆ ಜೆಡಿಎಸ್ ಜಿಲ್ಲಾ ಘಟಕದಿಂದ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ಎಚ್‌ಡಿಕೆ ವಿರುದ್ಧ ಕಾಲಾ ಕುಮಾರಸ್ವಾಮಿ (ಕರಿಯ ಕುಮಾರಸ್ವಾಮಿ) ಹೆಚ್ಚು ಖತರ್ನಾಕ್ ಎಂದು ಹೇಳುವ ಮೂಲಕ ಸಚಿವ ಜಮೀರ್ ಅಹ್ಮದ್ ಖಾನ್ ಕಪ್ಪು ವರ್ಣದ ಜನಾಂಗೀಯ ನಿಂದನೆ ಮಾಡಿದ್ದಾರೆ. ಶೀಘ್ರವೇ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಯಿತು.
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಭಾನುವಾರ ರಾತ್ರಿ ಪ್ರಚಾರದ ವೇಳೆ ಬಹಿರಂಗ ಸಭೆಯಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಬಗ್ಗೆ ಹವಹೇಳನಕಾರಿ ಪದಬಳಕೆ ಮಾಡಿ, ವರ್ಣಬೇದ ತಾರತಮ್ಯ ಎಸಗಿದ್ದಾರೆ. ಅಲ್ಲದೇ, ಒಂದು ಸಮುದಾಯವನ್ನು ಎತ್ತಿಕಟ್ಟಿ ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಹದಗೆಡಲು ಜಮೀರ್ ಜನರನ್ನು ಪ್ರಜೋದಿಸಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದರು.
ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಎಂ.ವಿರುಪಾಕ್ಷಿ, ಕಾರ್ಯಾಧ್ಯಕ್ಷ ಎನ್.ಶಿವಶಂಕರ, ರಾಜ್ಯ ಕಾರ್ಯದರ್ಶಿ ಲಕ್ಷೀಪತಿ ಗಾಣದಾಳ, ಪ್ರಮುಖರಾದ ನರಸಿಂಹ ನಾಯಕ, ಬಿ.ತಿಮ್ಮಾರೆಡ್ಡಿ, ರಾಮಕೃಷ್ಣ, ಜಂಬುನಾಥ ಯಾದವ, ನಾಗರಾಜ್ ಗೌಡ, ಹಂಪಯ್ಯ ನಾಯಕ, ನರಸಪ್ಪ, ರವಿಕುಮಾರ, ನಿಜಾಮುದ್ದಿನ್, ಬಸಣ್ಣನಾಯಕ, ರಾಜು, ಬಾಬು, ಮಲ್ಲಿಕಾರ್ಜುನ, ಪ್ರಕಾಶ ನರಸಿಂಹಲು, ಶಿವು, ಅಲಂಬಾಬು, ಆದಿರಾಜ, ಪಿ.ನರಸಿಂಹಲು, ವೆಂಕಟಸ್ವಾಮಿ, ಅಮಿತ್ ಸುಂಕಾರಿ, ಅಮ್ಮಣ್ಣ ಸೇರಿದಂತೆ ಇತರರಿದ್ದರು.