

ರಾಯಚೂರು: ಸ್ಥಳೀಯ ಜಿಲ್ಲಾ ಕ್ರೀಡಾಂಗಣದ ಆವರಣದಲ್ಲಿರುವ ಬಾಸ್ಕೆಟ್‌ಬಾಲ್ ಮೈದಾನದಲ್ಲಿ ಪತಂಜಲಿ ಯೋಗ ಸಮಿತಿಯಿಂದ ಭಾನುವಾರ ಏರ್ಪಡಿಸಿದ್ದ ಉಚಿತ ಯೋಗ ಮತ್ತು ಪ್ರಾಣಾಯಾಮ ಶಿಬಿರವನ್ನು ವಾಣಿಜ್ಯ ತೆರಿಗೆ ಸಲಹೆಗಾರ ಡಾ.ರವಿ ಮುಜುಂದಾರ್ ಉದ್ಘಾಟಿಸಿದರು. ಸಮಿತಿ ಜಿಲ್ಲಾ ಪ್ರಭಾರಿ ವಿಠೋಬರಾವ್ ಮಾತನಾಡಿ, ಎಂಟು ದಿನಗಳ ನಡೆಯುವ ಶಿಬಿರದಲ್ಲಿ ಕರೊನಾ ವಿರುದ್ಧ ಹೋರಾಡಲು ಮತ್ತು ಅನೇಕ ರೋಗ ನಿವಾರಣೆಗಾಗಿ ಯೋಗ ಮತ್ತು ಪ್ರಾಣಾಯಾಮ ತರಬೇತಿಯನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ವಾಣಿಜ್ಯ ತೆರಿಗೆ ಸಲಹೆಗಾರ ಆರ್.ಎಸ್.ಬಂಗ್, ಸಮಿತಿ ಪದಾಧಿಕಾರಿಗಳು ಇದ್ದರು.