

ರಾಯಚೂರು: ವಿವಿಧ ಇಲಾಖೆ ವಸತಿ ನಿಲಯಗಳ ಕಾರ್ಮಿಕರಿಗೆ 18 ತಿಂಗಳ ಬಾಕಿ ವೇತನವನ್ನು ಪಾತಿಸಬೇಕು ಹಾಗೂ ವಿಶೇಷ ಪ್ಯಾಕೇಜ್ ನೀಡಬೇಕು ಎಂದು ಕರ್ನಾಟಕ ರಾಜ್ಯ ವಸತಿ ನಿಲಯಗಳ ಕಾರ್ಮಿಕರ ಸಂಘ ಶುಕ್ರವಾರ ಒತ್ತಾಯಿಸಿದೆ.
ಡಿಸಿ ಕಚೇರಿ ಕೇಂದ್ರ ಸ್ಥಾನಿಕ ಅಧಿಕಾರಿ ಪ್ರಭಾವತಿಗೆ ಸಂಘದ ನಿಯೋಗ ಶುಕ್ರವಾರ ಮನವಿ ಸಲ್ಲಿಸಿ, ಕಾರ್ಮಿಕರು ವೇತನವಿಲ್ಲದೆ ಕುಟುಂಬ ನಿರ್ವಹಣೆಗೆ ಪರದಾಡುವಂತಾಗಿದೆ. ಪಿಎಫ್, ಇಎಸ್‌ಐ ಸೌಲಭ್ಯವಿಲ್ಲದೆ ಕಾರ್ಮಿಕರನ್ನು 14 ಗಂಟೆ ದುಡಿಸಿಕೊಳ್ಳಲಾಗುತ್ತಿದೆ. ವೇತನ ಪಾವತಿಗೆ ಮನವಿ ಮಾಡಿದರೂ ಅಧಿಕಾರಿಗಳು ಸ್ಪಂದನೆ ನೀಡುತ್ತಿಲ್ಲ ಎಂದು ಆರೋಪಿಸಿದರು.
ನಿಯೋಗದಲ್ಲಿ ಸಂಘದ ಜಿಲ್ಲಾಧ್ಯಕ್ಷ ಜಿ.ಅಮರೇಶ, ಪದಾಧಿಕಾರಿಗಳಾದ ರಂಗನಾಥ, ಖೈಸರ್ ಅಹ್ಮದ್, ರೇಣಮ್ಮ, ಶಿವಯ್ಯ, ರಾಮಯ್ಯ, ಲಕ್ಷ್ಮಿ, ದೇವಮ್ಮ, ನಾಗಮ್ಮ, ಕಮಲಮ್ಮ, ಶಿವರಾಜ ಇದ್ದರು.