

ರಾಯಚೂರು: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಸಂಭ್ರಮದಿಂದ ಆಯುಧ ಪೂಜೆಯನ್ನು ಶುಕ್ರವಾರ ನೆರವೇರಿಸಲಾಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ಪೊಲೀಸ್ ಕಚೇರಿ ಸೇರಿದಂತೆ ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಗಳು ಹಾಗೂ ಸರ್ಕಾರಿಕಚೇರಿಗಳಲ್ಲಿ ವಾಹನಗಳನ್ನು ಶೃಂಗರಿಸಿ ಅಧಿಕಾರಿಗಳು ಮತ್ತು ಸಿಬ್ಬಂಧಿಗಳು ಪೂಜೆ ನೆರವೇರಿಸಿದರು.
ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಎಸ್ಪಿ ಎಂ.ಪುಟ್ಟಮಾದಯ್ಯ ವಾಹನ ಮತ್ತು ಶಸಸ್ತ್ರಗಳಿಗೆ ಹಾಗೂಬಿತರೆ ಆಯುಧಗಳಿಗೆ ವಿಶೇಷ ಪೂಜೆ ನೆರವೇರಿಸಿದರು.
ನಗರಸಭೆ ಕಚೇರಿಯಲ್ಲಿಯೂ ಆಯುಧ ಪೂಜೆ ಸಂಭ್ರಮದಿಂದ ಜರುಗಿತು. ಸಂಘ ಸಂಸ್ಥೆಗಳು ಮತ್ತು ಸಾರ್ವಜನಿಕರು ತಮ್ಮ ವಾಹನಗಳನ್ನು ಹೂಗಳಿಂದ ಶೃಂಗರಿಸಿ ಆಯುಧ ಪೂಜೆ ನೆರವೇರಿಸಿ ದಸರಾ ಹಬ್ಬವನ್ನು ಸಂಭ್ರಮಿಸಿದರು. ನಗರದ ವಿವಿಧ ವಾಹನ ಶೋರೂಂಗಳಲ್ಲಿ ವಾಹನ ಖರೀದಿಯೂ ಭರ್ಜರಿಯಾಗಿತ್ತು.