ವಕ್ಫ್ ಆಸ್ತಿ ಅತಿಕ್ರಮಣದ ಕುರಿತು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಪ್ರತಿಭಟನೆ

oplus_2
oplus_2
Published on

ರಾಯಚೂರು: ನಗರದ ಕರಿಮುಲ್ಲಾ ಶಾ ಖಾದ್ರಿ ದರ್ಗಾದ 12 ಎಕರೆ ವಕ್ಫ್ ಆಸ್ತಿ ಒತ್ತುವರಿಯಾಗಿದ್ದು, ಕೂಡಲೇ ಜಿಲ್ಲಾಡಳಿತ ಭೂಮಿ ಅತಿಕ್ರಮಿಸಿಕೊಂಡವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ವಕ್ಫ್ ರಕ್ಷಣಾ ಸಂಘದಿಂದ ನಗರದ ಟಿಪ್ಪು ಸುಲ್ತಾನ ಉದ್ಯಾನದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಸರ್ವೆ ನಂ.1179/1ರಲ್ಲಿಯ 18.30 ಎಕರೆ ಜಮೀನು ವಕ್ಫ್ ಆಸ್ತಿಯಾಗಿದ್ದು, ಇದರಲ್ಲಿ 6 ಎಕರೆ ಭೂ ಸ್ವಾಧೀನವಾಗಿದೆ. ಉಳಿದ ಜಮೀನ್ನು ಒತ್ತುವರಿ ಮಾಡಿಕೊಂಡು ಅಲ್ಲಿ ಲೇಔಟ್ ನಿರ್ಮಾಣ ಮಾಡಲಾಗುತ್ತಿದ್ದು, ಕೂಡಲೇ ಒತ್ತುವರಿಯಾದ ಜಾಗವನ್ನು ವಾಪಸ್ ವಕ್ಫ್ ಸಂಸ್ಥೆಗೆ ವಾಪಸ್ ಕೊಡಿಸುವಂತೆ ಆಗ್ರಹಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಅಕ್ಬರ್ ಹುಸೇನ್ ನಾಗುಂಡಿ, ಸೈಯದ್ ಮುರ್ಷಿದ್ ಜಾನಿ ಸಾಹೇಬ್, ಸೈಯದ್ ಶಂಶುದ್ದಿನ್, ಸೈಯದ್ ಮಹ್ಮದ್ ಪೀರ್, ಶೇಖ್ ಮಾಸೂಮ್, ಸೈಯದ್ ಜಾಫರ್,ತೌಸೀಫ್ ಅಹ್ಮದ್ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net