

ರಾಯಚೂರು: ಜನ ಸಾಮಾನ್ಯರಿಗೆ ಉತ್ತಮ ಆರೋಗ್ಯ ಸೌಲಭ್ಯ ದೊರಕಿಸಿಕೊಡುವ ನಿಟ್ಟಿನಲ್ಲಿ ವಕ್ಫ್ ಸಮಿತಿ ಉತ್ತಮ ಸೌಲಭ್ಯಗಳನ್ನೊಳಗೊಂಡ ಆಸ್ಪತ್ರೆ ಸೌಲಭ್ಯ ನೀಡುತ್ತಿರುವುದು ಶ್ಲಾಘನೀಯ ಎಂದು ರಾಜ್ಯ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಮುಖ್ಯ ಇಂಜಿನಿಯರ್ ಏಜಾಜ್ ಅಹ್ಮದ್ ಹೇಳಿದರು.
ಸ್ಥಳೀಯ ಅಂಬೇಡ್ಕರ್ ವೃತ್ತದ ಬಳಿಯಿರುವ ನವೀಕೃತ ವಕ್ಫ್ ಮಲ್ಟಿ ಸ್ಪೆಷಾಲಿಟಿ ಹೆರಿಗೆ ಮತ್ತು ಮಕ್ಕಳ ಚಾರಿಟಬಲ್ ಆಸ್ಪತ್ರೆಯನ್ನು ಭಾನುವಾರ ಸಂಜೆ ಉದ್ಘಾಟಿಸಿ ಮಾತನಾಡಿದರು. ಆರೋಗ್ಯ ಸೇವೆಗಳು ದುಬಾರಿಯಾಗುತ್ತಿರುವ ಸಂದರ್ಭದಲ್ಲಿ ಇಂತಹ ಆಸ್ಪತ್ರೆಗಳು ಹೆಚ್ಚಿನ ಸಂಖ್ಯೆಯಲ್ಲಿ ಆರಂಭವಾಗಬೇಕು ಎಂದರು.
ವಕ್ಫ್ ಮಂಡಳಿ ಸಿಇಒ ಮಹ್ಮದ್ ಯೂಸೂಫ್ ಮಾತನಾಡಿ, ಆಸ್ಪತ್ರೆಯನ್ನು ಹೆಚ್ಚು ಸೌಲಭ್ಯ ಒಳಗಳೊಂದಿಗೆ ಮರು ಪ್ರಾರಂಭಿಸಲು ಜಿಲ್ಲೆಯ ಜನಪ್ರತಿನಿಧಿಗಳು, ಸಾರ್ವಜನಿಕರು ನೀಡಿದ ದೇಣಿಗೆಯಿಂದ ಜನಸೇವೆಗೆ ಅನುಕೂಲವಾಗಿದೆ. ಈ ಆಸ್ಪತ್ರೆಯಲ್ಲಿ ಪ್ರಸೂತಿ ಮತ್ತು ಮಕ್ಕಳ ಆರೋಗ್ಯದ ಜತೆಯಲ್ಲಿ ವಿವಿಧ ಆರೋಗ್ಯ ಸೌಲಭ್ಯ ದೊರೆಯುತ್ತಿವೆ ಎಂದರು.