

ರಾಯಚೂರು: ಜಿಲ್ಲೆಯಲ್ಲ್ಲಿ ವಕ್ಫ್ ಆಸ್ತಿಯೆಂದು ಯಾವ ರೈತರಿಗೂ ನೋಟೀಸ್ ನೀಡುತ್ತಿರುವ ಸಮಸ್ಯೆಯಾಗಿಲ್ಲ, ಉಪ ಚುನಾವಣೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಷಡ್ಯಂತ್ರ ನಡೆಸಲಾಗುತ್ತಿದೆ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಹೇಳಿದರು.
ನಗರದ ಮಹಾತ್ಮಗಾಂಧೀ ಜಿಲ್ಲಾ ಕ್ರಿಡಾಂಗಣದಲ್ಲಿ ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿ, ರೈತರ ಭೂಮಿಯನ್ನು ವಕ್ಫ್ ಆಸ್ತಿಯೆಂದು ನೋಟಿಸ್ ನೀಡಲಾಗುತ್ತಿರುವ ವಿಚಾರವನ್ನು ಬಿಜೆಪಿ ಉಪಚುನಾವಣೆ ಹಿನ್ನೆಲೆ ದೊಡ್ಡ ಸಮಸ್ಯೆಯನ್ನಾಗಿಸಲು ಹೊರಟಿದ್ದಾರೆ. ಹಿಂದೆ ಬಿಜೆಪಿ ಸರ್ಕಾರದಲ್ಲೂ ರೈತರಿಗೆ ನೋಟೀಸ್ ನೀಡಲಾಗಿತ್ತು. ಯಾವುದೇ ಕಾರಣಕ್ಕೂ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಹೇಳಿದರು.
ವಕ್ಫ್ ಬೋರ್ಡ್‌ನಿಂದ ನೀಡಲಾದ ನೋಟೀಸ್‌ಗಳಲ್ಲಿ ಕೆಲವು ಕೋರ್ಟ್ ಆದೇಶಗಳಿಂದಾಗಿವೆ. ಇನ್ನೂ ಕೆಲವು ಸ್ಥಳೀಯ ಅಧಿಕಾರಿಗಳಿಂದ ನೀಡಲಾಗಿದೆ. ಸ್ಥಳೀಯ ಅಧಿಕಾರಿಗಳಿಂದ ನೀಡಲಾದ ನೊಟೀಸ್‌ಗಳ ಬಗ್ಗೆ ಮಾಹಿತಿ ಸರ್ಕಾರಕ್ಕಿಲ್ಲ. ಕಾಂಗ್ರೆಸ್ ಸರ್ಕಾರ ಯಾವುದೇ ಗೊಂದಲವನ್ನು ಸೃಷ್ಠಿ ಮಾಡುತ್ತಿಲ್ಲ. ರೈತರು ಆತಂಕ ಪಡಬೇಕಾಗಿಲ್ಲ ಎಂದರು.