

ರಾಯಚೂರು: ಕರ್ನಾಟಕ ರಾಜ್ಯ ವಕ್ಫ ಮಂಡಳಿಗೆ ಮುತವಲ್ಲಿಗಳ ಕೋಟಾದಡಿಯಲ್ಲಿ ಚುನಾವಣೆ ನಡೆಯುತ್ತಿದ್ದು, ತಾನು ಸೂಚಿಸಿದ ಅಭ್ಯರ್ಥಿಗಳಿಗೆ ಮತ ಹಾಕುವಂತೆ ರಾಯಚೂರು ಜಿಲ್ಲೆಯ ಮತದಾರರಿಗೆ ಇಲ್ಲಿನ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷನಿಂದ ಬೆದರಿಕೆ ಕರೆಗಳು ಬಂದಿವೆ ಎಂಬ ದೂರಿನ ಹಿನ್ನೆಲೆ ಇಬ್ಬರು ಅಭ್ಯರ್ಥಿಗಳಿಗೆ ಚುನಾವಣಾಧಿಕಾರಿಗಳು ಸೋಮವಾರ ಶೋಕಾಸ್ ನೋಟಿಸ್ ನೀಡಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 16 ಮತದಾರರಿದ್ದು, ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಮೌಲಾನಾ ಫರೀಧ ಖಾನ್ ಮತದಾರರಿಗೆ ಫೋನ್ ಮಾಡಿ ಚುನಾವಣೆಯಲ್ಲಿ ಅನ್ವರ ಭಾಷಾ ಮತ್ತು ಸರವರ್ ಬೇಗ್ ಅವರಿಗೆ ಮತದಾನ ಮಾಡಬೇಕೆಂದು ಕರೆ ಮಾಡಿ ಹೆದರಿಸುತ್ತಿದ್ದಾರೆ. ಇದರಿಂದ ಪಾರದರ್ಶಕ ಚುನವಾಣಾ ಉದ್ದೇಶಕ್ಕೆ ದಕ್ಕೆಯಾಗುತ್ತಿದೆ ಎಂದು ಮಾಜಿ ಸಂಸದ ದಿ.ಅಬ್ದುಲ್ ಸಮದ್ ಸಿದ್ದೀಖಿ ಇವರ ಮಗ ಹ್ಯಾರಿಸ್ ಸಿದ್ದೀಖಿ ಚುನಾವಣಾಧಿಕಾರಿ ಆದಿತ್ಯ ಆಮ್ಲಾನ ಬಿಸ್ವಾಸ ರವರಿಗೆ ದೂರು ನೀಡಿದ್ದರು.
ಸೋಮವಾರ ಚುನಾವಣಾಧಿಕಾರಿ ಇಬ್ಬರು ಅಭ್ಯರ್ಥಿಗಳಿಗೆ ಶೋಕಾಸ್ ನೋಟಿಸ್ ನೀಡಿ 24 ಗಂಟೆಗಳಲ್ಲಿ ಉತ್ತರಿಸುವಂತೆ ಸೂಚಿಸಿದ್ದಾರೆ, ಇಲ್ಲದಿದ್ದಲ್ಲಿ ನಿಯಮದಂತೆ ಕ್ರಮ ಜರುಗಿಸುವದಾಗಿ ನೋಟಿಸ್‌ನಲ್ಲಿ ತಾಕೀತು ಮಾಡಿದ್ದಾರೆ.