ಎಸ್ಟಿಗೆ ಸೇರಿಸುವ ಮೂಲಕ ನ್ಯಾಯ ಒದಗಿಸಿ

Brahama Ganesh Vishwakarma Comminity
ಬ್ರಹ್ಮಗಣೇಶ, ಉಪಾಧ್ಯಕ್ಷ, ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ.
Published on

ರಾಯಚೂರು: ವಿಶ್ವಕರ್ಮ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದು ಒತ್ತಾಯಿಸಿ ಸ್ಥಳೀಯ ಜಿಲ್ಲಾಧಿಕಾರಿ ಕಚೇರಿ ಮುಂದೆ ನ.9ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಉಪಾಧ್ಯಕ್ಷ ಬ್ರಹ್ಮಗಣೇಶ ತಿಳಿಸಿದರು.

ಸ್ಥಳೀಯ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ಸಮುದಾಯದವರು ಶೈಕ್ಷಣಿಕ, ಸಾಮಾಜಿಕ ಮತ್ತು ರಾಜಕೀಯ ಸೌಲಭ್ಯಗಳಿಂದ ವಂಚಿತರಾಗಿದ್ದು, ಎಸ್ಟಿಗೆ ಸೇರಿಸುವ ಮೂಲಕ ನ್ಯಾಯ ಒದಗಿಸಬೇಕು ಎಂದರು. ಶಿಲ್ಪ, ಕಟ್ಟಿಗೆ ಕೆತ್ತನೆ ಕೆಲಸ ಮಾಡುವ ಸಮುದಾಯದ ಬಹುತೇಕರು ಶಿಕ್ಷಣ ಮತ್ತು ಉದ್ಯೋಗದಿಂದ ವಂಚಿತರಾಗಿದ್ದಾರೆ. ಪ್ರಸ್ತುತ ಕುಲಕಸುಬು ನಂಬಿ ಬದುಕಲು ಸಾಧ್ಯವಾಗದಂತಹ ಸ್ಥಿತಿ ನಿರ್ಮಾಣವಾಗಿದೆ ಎಂದರು.

ಬೆಂಗಳೂರಿನ ಗುರುರಾಜ ಕಲ್ಯಾಣ ಮಂಟಪದಲ್ಲಿ ನ.11ರಂದು ವಿಧಾನ ಪರಿಷತ್ ಸದಸ್ಯ ಕೆ.ಪಿ.ನಂಜುಂಡಿ ನೇತೃತ್ವದಲ್ಲಿ ವಧು-ವರರ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಎಂದು ಬ್ರಹ್ಮಗಣೇಶ ತಿಳಿಸಿದರು. ಮಹಾಸಭಾ ಪದಾಧಿಕಾರಿಗಳಾದ ಮಾರುತಿ ಬಡಿಗೇರ, ಗಿರೀಶ ಆಚಾರ್, ಪ್ರಕಾಶ ಗುಂಜಳ್ಳಿ, ಮನೋಹರ್ ಬಡಿಗೇರ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net