ವೈಫಲ್ಯ ನ್ಯೂನತೆ ಅರಿತುಕೊಳ್ಳಲು ದಾರಿ

08082022 raichur vijayavani prabhanda spardhe
Published on


ರಾಯಚೂರು: ಯಾವುದೇ ಸ್ಪರ್ಧೆಗಳಲ್ಲಿ ವಿಫಲರಾದಾಗ ಅಸಮಾಧಾನಗೊಳ್ಳದೆ ವೈಫಲ್ಯಕ್ಕೆ ಕಾರಣವಾಗಿರುವ ನ್ಯೂನತೆಗಳನ್ನು ಅರಿತುಕೊಳ್ಳಲು ಸಿಕ್ಕ ಅವಕಾಶ ಎಂದುಕೊಂಡು, ಅವುಗಳನ್ನು ಸರಿಪಡಿಸುವ ಕೆಲಸ ಮಾಡಬೇಕು ಎಂದು ನಿವೃತ್ತ ಪ್ರಾಚಾರ್ಯ ಡಾ.ಬಸವರಾಜಪ್ಪ ಸಲಹೆ ನೀಡಿದರು.

ನಗರದ ಸೀತಾ ಸುಬ್ಬರಾಜು ಸ್ಮಾರಕ ಪದವಿ ಮಹಾವಿದ್ಯಾಲಯದಲ್ಲಿ ಸ್ವಾತಂತ್ರೃದ ಅಮೃತ ಮಹೋತ್ಸವ ನಿಮಿತ್ತ ‘ವಿಜಯವಾಣಿ’ಯಿಂದ ಸೋಮವಾರ ಕಾಲೇಜು ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು. ಪತ್ರಿಕೆಗಳು ಜನರಿಗೆ ಮಾಹಿತಿ ಮುಟ್ಟಿಸುವ ಕೆಲಸ ಮಾಡುತ್ತವೆ. ಆದರೆ ‘ವಿಜಯವಾಣಿ’ ಸಮಾಜಮುಖಿ ಕೆಲಸಗಳಲ್ಲಿಯೂ ಮುಂಚೂಣಿಯಲ್ಲಿದ್ದು, ಜನಪ್ರಜ್ಞೆ ಮೂಲಕ ಎಲ್ಲ ಕ್ಷೇತ್ರದ ಜನರ ಅಂತರಂಗವನ್ನು ಮುಟ್ಟುವ ಕೆಲಸ ಮಾಡುತ್ತಿದೆ ಎಂದು ಹೇಳಿದರು. ಸ್ಪರ್ಧೆಯಲ್ಲಿ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net