ಶ್ರೀಕೃಷ್ಣದೇವರಾಯ ಮೂರ್ತಿ ಪ್ರತಿಷ್ಠಾಪನೆ; ನಗರಸಭೆ ಅಧ್ಯಕ್ಷ ಈ.ವಿನಯ ಕುಮಾರ ಮಾಹಿತಿ

05012021 Raichur Munnur Kapu cuminity pratibha award
Published on

ಮುನ್ನೂರುಕಾಪು ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ

ರಾಯಚೂರು: ವಿಜಯನಗರ ಸಾಮ್ರಾಜ್ಯದ ಅರಸ ಶ್ರೀ ಕೃಷ್ಣದೇವರಾಯನ ಮೂರ್ತಿಯನ್ನು ನಗರದಲ್ಲಿ ಪ್ರತಿಷ್ಠಾಪಿಸಲಾಗುವುದು ಎಂದು ನಗರಸಭೆ ಅಧ್ಯಕ್ಷ ಈ.ವಿನಯ ಕುಮಾರ ತಿಳಿಸಿದರು.

ಮುನ್ನೂರುಕಾಪು ಕಲ್ಯಾಣ ಮಂಟಪದಲ್ಲಿ ಮುನ್ನೂರುಕಾಪು ಸಮುದಾಯ ಮಂಗಳವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ಇಂದಿನ ಯುವಕರಲ್ಲಿ ದೇಶ ಪ್ರಜ್ಞೆ ಮೂಡಿಸುವ ಮತ್ತು ಹೊಸ ಸಮಾಜ ಕಟ್ಟುವ ಮನೋಭಾವವನ್ನು ಮೂಡಿಸಬೇಕು ಎಂದರು.

ಮಾಜಿ ಶಾಸಕ ಎ.ಪಾಪಾರೆಡ್ಡಿ ಮಾತನಾಡಿ, ಹೊಸ ಶೈಕ್ಷಣಿಕ ಸಂಸ್ಥೆಗಳನ್ನು ಕಟ್ಟಲು ಸಮಾಜ ಒಗ್ಗಟ್ಟಾಗಿ ಮುನ್ನಡೆಯಬೇಕು. ಶಿಕ್ಷಣದಿಂದ ಮಾತ್ರ ಪ್ರಗತಿ ಸಾಧ್ಯ. ಈ ನಿಟ್ಟಿನಲ್ಲಿ ಎಲ್ಲರೂ ಚಿಂತನೆ ನಡೆಸಬೇಕು ಎಂದರು.

ಕಾರ್ಯಕ್ರಮವನ್ನು ಆರ್‌ಡಿಎ ಅಧ್ಯಕ್ಷ ವೈ.ಗೋಪಾಲರೆಡ್ಡಿ ಉದ್ಘಾಟಿಸಿದರು. ಈ ಸಂದರ್ಭ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಶೇ.80ಕ್ಕಿಂತ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳು, ವೈದ್ಯಕೀಯ ಸೀಟು ಪಡೆದ 5 ವಿದ್ಯಾರ್ಥಿಗಳಿಗೆ ಬೆಳ್ಳಿ ಪದಕ ನೀಡಿ, ಸನ್ಮಾನಿಸಲಾಯಿತು.

ಸಮುದಾಯದ ಮುಖಂಡರಾದ ಎಂ.ನಾಗರೆಡ್ಡಿ, ಆರ್.ತಿಮ್ಮಾರೆಡ್ಡಿ, ಬಿ.ಆಂಜನೇಯ, ಪಿ.ನರಸರೆಡ್ಡಿ, ಬಿ.ನರಸರೆಡ್ಡಿ, ಎನ್.ಕೇಶವರೆಡ್ಡಿ, ಎನ್.ಶ್ರೀನಿವಾಸರೆಡ್ಡಿ, ರೇಖಾ ಮಹೇಂದ್ರರೆಡ್ಡಿ, ನವನೀತಾ, ಬೆಲ್ಲಂ ಶ್ವೇತಾ, ಆಡಳಿತಾಧಿಕಾರಿ ರಾಮಣ್ಣ ಹವಳೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net