

ರಾಯಚೂರು: ಮಸ್ಕಿಯ ಭ್ರಮರಾಂಭ ಕಲ್ಯಾಣ ಮಂಟಪದಲ್ಲಿ ಜು.29ರಂದು ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆ ಹಾಗೂ ಪತ್ರಿಕಾ ಭವನ ಉದ್ಘಾಟನಾ ಸಮಾರಂಭ ಆಯೋಜಿಸಲಾಗಿದೆ ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಆರ್.ಗುರುನಾಥ ತಿಳಿಸಿದರು.
ಸ್ಥಳೀಯ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಪತ್ರಕರ್ತರ ಸಂಘ ಹಾಗೂ ರಾಯಚೂರು ರಿಪೋರ್ಟರ್ಸ್ ಗಿಲ್ಡ್ ದತ್ತಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು. ಕಾರ್ಯಕ್ರಮದ ಅತಿಥಿ ಉಪನ್ಯಾಸಕರಾಗಿ ವಿಜಯವಾಣಿ ಪತ್ರಿಕೆ ಪ್ರಧಾನ ಸಂಪಾದಕ ಕೆ.ಎನ್.ಚನ್ನೇಗೌಡ ಆಗಮಿಸಲಿದ್ದಾರೆ ಎಂದರು.
ಗಚ್ಚಿನಮಠದ ವರರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರ ಆಶಯ ನುಡಿಗಳನ್ನಾಡಲಿದ್ದಾರೆ. ಜಿಲ್ಲೆಯ ಸಂಸದ, ಶಾಸಕರು ಹಾಗೂ ಇತರ ಜನಪ್ರತಿನಿಧಿಗಳು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸಂಘದಿಂದ ನೀಡಲಾಗುವ ಜೀವಮಾನ ಸಾಧನೆ ವಿಶೇಷ ಪ್ರಶಸ್ತಿಗೆ ಪತ್ರಕರ್ತ ಬಿ.ವೆಂಕಟಸಿಂಗ್ ಆಯ್ಕೆಯಾಗಿದ್ದು, ದತ್ತಿ ಪ್ರಶಸ್ತಿಗೆ ವಿಜಯವಾಣಿಯ ಮಸ್ಕಿ ತಾಲೂಕು ವರದಿಗಾರ ವೀರೇಶ ಸೌದ್ರಿ, ಸಿರವಾರದ ಪಿ.ಕೃಷ್ಣ, ಸಿಂಧನೂರಿನ ಶ್ಯಾಮಕುಮಾರ, ಗುರುನಾಥ ಇಂಗಳದಾಳ, ಸೈಯದ್ ಇಮ್ತಿಯಾಜ್ ಅಲಂ ಹುಸೇನಿ, ಮಾನ್ವಿಯ ಅಬ್ದುಲ್ ಗಯಾಸ್, ಮುದಗಲ್‌ನ ಡಾ.ಶರಣಪ್ಪ ಆನೆಹೊಸೂರು, ಬಳಗಾನೂರಿನ ಶ್ರೀಧರ ಕೊಂಡ, ಛಾಯಾಗ್ರಾಹಕ ಯಲ್ಲುಲಿಂಗ ಆಯ್ಕೆಯಾಗಿದ್ದಾರೆ. ಜಾಹೀರಾತು ಪ್ರತಿನಿಧಿ ಕೃಷ್ಣ ಇನಾಮದಾರ್, ಪ್ರಸರಣ ವಿಭಾಗದ ಚನ್ನಬಸವ ಹಿರೇಮಠ, ಪತ್ರಿಕಾ ವಿತರಕ ಮಲ್ಲಯ್ಯಸ್ವಾಮಿಯನ್ನು ಗೌರವಿಸಲಾಗುತ್ತಿದೆ ಎಂದು ತಿಳಿಸಿದರು.
ರಾಯಚೂರು ರಿಪೋರ್ಟರ್ಸ್ ಗಿಲ್ಡ್ ಅಧ್ಯಕ್ಷ ಚನ್ನಬಸವಣ್ಣ ಮಾತನಾಡಿ, ಗಿಲ್ಡ್‌ನ ದತ್ತಿ ಪ್ರಶಸ್ತಿಗೆ ದಿಗ್ವಿಜಯ ನ್ಯೂಸ್ ವರದಿಗಾರ ಎಲ್.ಕೆ.ಅಮರೇಶ ಹಾಗೂ ಜಗನ್ನಾಥ ಪೂಜಾರ, ಸೈಯದ್ ನಸೀಮ್ ಆಶ್ರಫ್, ಬಾವಾಸಲಿ, ಛಾಯಾಗ್ರಾಹಕ ಶ್ರೀನಿವಾಸ, ಸುರೇಶ ರೆಡ್ಡಿ, ರಾಚಯ್ಯಸ್ವಾಮಿ ಮಾಚನೂರು ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು. ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಪಾಷಾ ಹಟ್ಟಿ, ಉಪಾಧ್ಯಕ್ಷ ಶಿವಪ್ಪ ಮಡಿವಾಳ, ರಿಪೋರ್ಟರ್ಸ್ ಗಿಲ್ಡ್ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ ಜಾಗಟಗಲ್ ಉಪಸ್ಥಿತರಿದ್ದರು.