ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಮತದಾನ ಕೇಂದ್ರ ಸ್ಥಳ ಬದಲಾವಣೆ: ಚಂದ್ರಶೇಖರ ಪಾಟೀಲ್ ಮೀರ್ಜಾಪೂರ

Mirjapur
ಚಂದ್ರಶೇಖರ್ ಪಾಟೀಲ್ ಮಿರ್ಜಾಪೂರ
Published on

ರಾಯಚೂರು: ಅಖಿಲ ಭಾರತ ವೀರಶೈವ ಲಿಂಗಾಯತ್ ಮಹಾಸಭಾ ರಾಜ್ಯ ಘಟಕದ ಕಾರ್ಯ ನಿರ್ವಾಹಕ ಸಮಿತಿಯ ಸಾಮಾನ್ಯ ಸದಸ್ಯರ ಚುನಾವಣೆಯ ಮತದಾನ ಕೇಂದ್ರದ ಸ್ಥಳವನ್ನು ಬದಲಾಯಿಸಲಾಗಿದೆ ಎಂದು ಮಹಾಸಭಾದ ಜಿಲ್ಲಾಧ್ಯಕ್ಷ ಚಂದ್ರಶೇಖರ ಪಾಟೀಲ್ ಮಿರ್ಜಾಪೂರ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ಆ.25ರಂದು ನಡೆಯಲಿರುವ ಅಖಿಲ ಭಾರತ ವಿರಶೈವ ಲಿಂಗಾಯತ್ ಮಹಾಸಭಾದ ರಾಜ್ಯ ಘಟಕದ ಚುನಾವಣೆಯು ನಗರದ ಕೆಎಚ್‌ಬಿ ಕಾಲನಿಯ ಲಯನ್ಸ್ ಪ್ರೌಢ ಶಾಲೆಯಲ್ಲಿ ನಡೆಯಲಿದೆ ಎಂದರು.

ಈ ಮೊದಲು ಮತದಾನ ಪ್ರಕ್ರಿಯೆಯನ್ನು ಬಸವೇಶ್ವರ ಕಾಲನಿಯ ಹೇರೂರು ಚಂದ್ರರಾಯಗೌಡ ಮಲ್ಲರ ಸಿದ್ದಪ್ಪಗೌಡ ಕರೆಡ್ಡಿ ಬಿಎಡ್ ಮಹಾವಿದ್ಯಾಲಯದಲ್ಲಿ ನಡೆಸಲು ತೀರ್ಮಾನಿಸಲಾಗಿತ್ತು ಆದರೆ ಪರೀಕ್ಷಾ ಕೇಂದ್ರವಾಗಿರುವುದರಿಂದ ಕೇಂದ್ರದ ಸುತ್ತಲೂ 144 ಸೆಕ್ಷನ್ ಜಾರಿಯಾಗಿರುವ ಕಾರಣ ಮತದಾನ ಕೇಂದ್ರವನ್ನು ಬದಲು ಮಾಡಲಾಗಿದೆ ಎಂದು ಮಿರ್ಜಾಪೂರ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ನರೇಶ್‌ಕುಮಾರ್, ಮಹೇಶ ಕುಮಾರ್, ಪರಮೇಶ್ವರ ಸಾಲಿಮಠ, ಸೋಮನಾಥ ಗಣದಿನ್ನಿ, ನೀಲಕಂಠ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net