ವೇದ ಚಲನಚಿತ್ರ ಟೀಸರ್ ಬಿಡುಗಡೆ ಇಂದು

02122022 raichur vedha Teaser Released
Published on

ರಾಯಚೂರು: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಸಂಜೆ 5ಕ್ಕೆ ವೇದ ಸಂಭ್ರಮ ಕಾರ್ಯಕ್ರಮದಲ್ಲಿ ನಟ ಶಿವರಾಜಕುಮಾರ ಅಭಿನಯದ ವೇದ ಚಲನಚಿತ್ರದ ಟೀಸರ್ ಬಿಡುಗಡೆ ಮಾಡಲಾಗುವುದುದು ಎಂದು ವಿ.ಜೆ. ಇಂಟರ್‌ನ್ಯಾಷನಲ್‌ನ ಮುಖ್ಯಸ್ಥ ವೀರೇಂದ್ರ ಜಲ್ದಾರ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ನಟ ಶಿವರಾಜಕುಮಾರ, ನಿರ್ದೇಶಕ ಹರ್ಷ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ನಿರೂಪಕಿ ಅನುಶ್ರೀ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು. ವೇದ ಚಿತ್ರ ಡಿ.23ರಂದು ಬಿಡುಗಡೆಯಾಗಲಿದೆ. ಶಿವರಾಜಕುಮಾರ ಶನಿವಾರ ಬೆಳಗ್ಗೆ ಮಂತ್ರಾಲಯಕ್ಕೆ ತೆರಳಿ ಶ್ರೀಗುರು ರಾಘವೇಂದ್ರ ಸ್ವಾಮಿಗಳ ಭೇಟಿ ನೀಡಿ ನಗರಕ್ಕೆ ಹಿಂದಿರುಗಲಿದ್ದಾರೆ. ಕಾರ್ಯಕ್ರಮದಲ್ಲಿ 10 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದೆ ಎಂದು ವೀರೇಂದ್ರ ಜಲ್ದಾರ್ ತಿಳಿಸಿದರು. ಕಲಾವಿದ ವಿಶ್ವಾಸ ಜಲ್ದಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net